Site icon Vistara News

Samantha Ruth Prabhu: ರಾಕಿಂಗ್‌ ಸ್ಟಾರ್‌ ಯಶ್‌ರಂತೆ ʻರೈಸ್ ಅಪ್ ಬೇಬಿʼ ಎಂದು ಹೇಳಿದ್ಯಾಕೆ ಸಮಂತಾ?

Why did Samantha say ``rise up baby'' like rocking star Yash

ಬೆಂಗಳೂರು: ನಟಿ ಸಮಂತಾ (Samantha Ruth Prabhu) ಅವರ ಅಭಿನಯದ ಶಾಕುಂತಲಂ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಹೊಸ ಪೋಸ್ಟ್‌ ಹಂಚಿಕೊಂಡಿದ್ದು, ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಏಕೆಂದರೆ ಸಮಂತಾ ನೀಡಿರುವ ಕ್ಯಾಪ್ಷನ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಮಂತಾ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೊದಲ್ಲಿ ʻರೈಸ್ ಅಪ್ ಬೇಬಿ..’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದೀಗ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಕ್ಯಾಪ್ಸನ್‌ ನಟಿ ಯಾಕೆ ಹಾಕಿಕೊಂಡಿದ್ದಾರೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಯಶ್ ಕೂಡ ಇದೇ ಕ್ಯಾಪ್ಷನ್ ಹಂಚಿಕೊಂಡಿದ್ದರು. ಅದು ಕೂಡ ಪೆಪ್ಸಿ ಜಾಹೀರಾತಿಗಾಗಿ. ರಾಕಿಂಗ್ ಸ್ಟಾರ್ ಯಶ್ ಪೆಪ್ಸಿ ಜಾಹೀರಾತಿನ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ. ಪೆಪ್ಸಿ ಜಾಹೀರಾತಿನ ಕ್ಯಾಪ್ಷನ್ ಕೂಡ ‘ರೈಸ್ ಅಪ್ ಬೇಬಿ…’ ಅದೇ ಕ್ಯಾಪ್ಷನ್ ಅನ್ನು ಈಗ ಸಮಂತಾ ಕೂಡ ಶೇರ್ ಮಾಡಿರುವುದರಿಂದ ಪೆಪ್ಸಿ ಜಾಹೀರಾತಿನಲ್ಲಿ ನಟಿಸಿದ್ದಾರಾ ಎನ್ನುವ ಅನುಮಾನ ಮೂಡಿದೆ. ಅಷ್ಟೇ ಅಲ್ಲದೇ ನಟಿ ಮೈಯೋಸಿಟಿಸ್‌ ಕಾಯಿಲೆಯಿಂದ ಗುಣಮುಖರಾಗುತ್ತಿದ್ದು, ಮೊಟಿವೇಶನ್‌ ಸಲುವಾಗಿ ಈ ರೀತಿ ಹಾಕಿಕೊಂಡಿರಬಹುದೆಂಬುದು ವರದಿಯಾಗಿದೆ.

ರಾಕಿಂಗ್‌ ಸ್ಟಾರ್‌ ಯಶ್‌ ಪೋಸ್ಟ್‌

ಸಮಂತಾ ಪೋಸ್ಟ್‌

ಏಪ್ರಿಲ್ 14 ರಂದು ತೆರೆಗೆ

ಸಮಂತಾ ಅವರ ಮುಂಬರುವ ಪೌರಾಣಿಕ ಚಿತ್ರ ಶಾಕುಂತಲಂ (Shaakuntalam) ಏಪ್ರಿಲ್ 14 ರಂದು ತೆರೆ ಕಾಣುತ್ತಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version