Site icon Vistara News

Rashmika Mandanna | ಸಹ ನಟರೊಂದಿಗೆ ಆತ್ಮೀಯತೆಯಿಂದಿರಲು ಬಯಸುತ್ತೇನೆ ಎಂದ ರಶ್ಮಿಕಾ ಮಂದಣ್ಣ

Rashmika Mandanna

ಬೆಂಗಳೂರು: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ತಮ್ಮ ಸಂದರ್ಶನ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅವರ ಹೇಳಿಕೆಯೊಂದು ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಪ್ಯಾನ್-ಇಂಡಿಯಾ ಸ್ಟಾರ್‌ ನಟಿಯಾಗಿ ಬೆಳೆದಿದ್ದಾರೆ. ಹಿಂದಿ ಮತ್ತು ದಕ್ಷಿಣ ಭಾರತದ ಚಲನಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರು ʻʻನನ್ನ ಎಲ್ಲ ಸಹ-ನಟರೊಂದಿಗೆ ಆತ್ಮೀಯವಾಗಿ ಸಂಪರ್ಕದಲ್ಲಿರಲು ಇಷ್ಟಪಡುತ್ತೇನೆʼʼ ಎಂದು ಹೇಳಿಕೆ ನೀಡಿದ್ದಾರೆ. ನಟಿಸಿದ ಚಿತ್ರಗಳು ಹಿಟ್‌ ಆದ ಬಳಿಕ ರಶ್ಮಿಕಾ ಮಂದಣ್ಣ ಸಹ ನಟರಿಂದ ಅಂತರ ಕಾಯ್ದುಕೊಳ್ಳುತ್ತಾರೆ ಎಂದ ಆಪಾದನೆಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರು, ನನ್ನ ಎಲ್ಲ ಸಹ-ನಟರೊಂದಿಗೆ ಸಂಪರ್ಕದಲ್ಲಿರಲು ಇಷ್ಟಪಡುತ್ತೇನೆ ಎಂದಿದ್ದಾರೆ. ನನ್ನ ಹಿಂದಿನ ಚಿತ್ರಗಳಲ್ಲಿನ ಎಲ್ಲಾ ಸಹ ನಟರು ನನ್ನ ಜೀವನದ ಪ್ರಮುಖ ಭಾಗವಾಗಿದ್ದಾರೆ ಎಂದು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಮಾತನಾಡಿ ʻʻನಾನು ನನ್ನ ಎಲ್ಲ ಸಹ-ನಟರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಬಯಸುತ್ತೇನೆ. ಏಕೆಂದರೆ ಅವರು ನನ್ನ ಜೀವನದ ಪ್ರಮುಖ ಭಾಗವಾಗಿದ್ದಾರೆ. ನಾವು ಚಲನಚಿತ್ರಗಳಿಗಾಗಿ ನಿರಂತರವಾಗಿ ಚಿತ್ರೀಕರಣ ಮಾಡುತ್ತಿದ್ದೇವೆ. ಸ್ವಂತ ಕುಟುಂಬಕ್ಕಿಂತ ನಾವು ಪರಸ್ಪರ ಹೆಚ್ಚು ಸಮಯ ಕಳೆಯುತ್ತೇವೆ. ಹಾಗಾಗಿ ನನಗೆ ಅವರು ವೈಯಕ್ತಿಕವಾಗಿ ಬಹಳ ಮುಖ್ಯʼʼ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Rashmika Mandanna | ಪುಷ್ಪ-2ಗೆ ನಟಿ ಸಾಯಿ ಪಲ್ಲವಿ ಎಂಟ್ರಿ: ರಶ್ಮಿಕಾ ಮಂದಣ್ಣ ಕೈ ಬಿಟ್ಟಿತಾ ಚಿತ್ರತಂಡ?

ಬಾಲಿವುಡ್‌ನಲ್ಲಿ ಬ್ಯುಸಿಯಾದ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ ಅವರು ಮುಂಬರುವ “ಅನಿಮಲ್ʼ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಕುರಿತು ಮಾತನಾಡಿರುವ ರಶ್ಮಿಕಾ, ʻರಣಬೀರ್‌ ಅವರು ಅತ್ಯುತ್ತಮ ನಟ. ಅವರ ಜತೆ ಕೆಲಸ ಮಾಡುವುದು ತುಂಬ ಸಂತೋಷಕರ. ನಿರ್ದೇಶಕ ಸಂದೀಪ್ ಅವರು ಯಾವಾಗಲೂ ಹೇಳುತ್ತಿರುತ್ತಾರೆ, ಒಂದು ಮ್ಯಾಡನೆಸ್‌ ಕ್ರಿಯೇಟ್‌ ಮಾಡುತ್ತೇವೆ ಎಂದು. ಈ ಸಿನಿಮಾ ಬಗ್ಗೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ”ಎಂದರು.

ತಮ್ಮ ‘ಮಿಷನ್ ಮಜ್ನು’ ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ “ಸಿದ್ಧಾರ್ಥ್ ತುಂಬ ಮುದ್ದಾಗಿದ್ದಾರೆ” ಎಂದು ಬಣ್ಣಿಸಿದ್ದಾರೆ. “ಸಿದ್ ಚಿತ್ರೀಕರಣದ ಸಮಯದಲ್ಲಿ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರಲ್ಲಿ ತುಂಟತನವಿದೆ . ಅವರು ಯಾವುದೇ ಸಿಹಿತಿಂಡಿಗಳನ್ನು ತಿನ್ನುವುದಿಲ್ಲ. ಆದರೆ ನನಗೆ ಎಲ್ಲಾ ಸಿಹಿತಿಂಡಿಗಳನ್ನು ಕೊಡುತ್ತಿದ್ದರು. ಅವರು ಚೆನ್ನಾಗಿ ವರ್ಕೌಟ್ ಮಾಡುತ್ತಾರೆ. ತಮ್ಮ ಆಹಾರಕ್ರಮದ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ನಾನೂ ಕೂಡ ಫಿಟ್‌ನೆಸ್‌ಗೆ ಮರಳಿದ್ದೇನೆʼʼ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಬ್ಯಾನ್‌ ಮಾಡುವ ಮಾತುಗಳು ಕೇಳಿ ಬಂದಿದ್ದವು. ಇತ್ತೀಚೆಗೆ ʼಕಾಂತಾರʼ ಖ್ಯಾತಿಯ ರಿಷಬ್‌ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ರಶ್ಮಿಕಾ ಅಂಥವರ ಸಹವಾಸ ಬೇಡ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಸಹ ನಟರ ಬಗ್ಗೆ ಹೇಳಿರುವ ಮಾತು ಮಹತ್ವ ಪಡೆದಿದೆ.

ಇದನ್ನೂ ಓದಿ | Rashmika Mandanna | ಕನ್ನಡದ ನಟಿಮಣಿಯರಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ!

Exit mobile version