ಬೆಂಗಳೂರು: ದುಲ್ಖರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ʻಸೀತಾ ರಾಮಂʼ (Sita Ramam Film) ಸಿನಿಮಾ ಶುಕ್ರವಾರ (ಆ.5) ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದ್ದು, ಅರಬ್ ರಾಷ್ಟ್ರಗಳಲ್ಲಿ ಬ್ಯಾನ್ ಭೀತಿಯನ್ನು ಎದುರಿಸುತ್ತಿದೆ ಎನ್ನಲಾಗುತ್ತಿದೆ.
ರಶ್ಮಿಕಾ ಈ ಚಿತ್ರದಲ್ಲಿ ಮುಸ್ಲಿಂ ಯುವತಿಯ ಪಾತ್ರವನ್ನು ಮಾಡಿದ್ದರು. ಅವರ ಫಸ್ಟ್ ಲುಕ್ ನೋಡಿ ಅವರ ಅಭಿಮಾನಿಗಳು ಕುತೂಹಲವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರು ಬುರ್ಕಾ ಧರಿಸಿ ಕಾಣಿಸಿಕೊಂಡಿದ್ದು, ಅನೇಕರಿಗೆ ಅಚ್ಚರಿಯನ್ನು ಮೂಡಿಸಿತ್ತು. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತೆ ಆರೋಪಿಸಿ ಅರಬ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ವರದಿ ಆಗಿದೆ.
ಇದನ್ನೂ ಓದಿ | Sita Ramam Film | ಸೀತಾ ರಾಮಂ ಪ್ರೀ ರಿಲೀಸ್ ಇವೆಂಟ್: ಚಿತ್ರಮಂದಿರ ದೇವಸ್ಥಾನ ಇದ್ದಂತೆ ಎಂದ ಪ್ರಭಾಸ್
ಬಹ್ರೇನ್, ಓಮನ್, ಕುವೈತ್, ಖತಾರ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರ ಬ್ಯಾನ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಸೌತ್ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಹನು ರಾಘವಪುಡಿ. ಈ ಚಿತ್ರವನ್ನು ಕಾಶ್ಮೀರ ಕಣಿವೆಯಲ್ಲಿ ಚಿತ್ರೀಕರಿಸಿರುವುದು ವಿಶೇಷ. ಅದರಲ್ಲೂ ಪಿ.ಎಸ್. ವಿನೋದ್ ಅವರ ಸಿನಿಮಾಟೋಗ್ರಫಿಯು ಪ್ರತಿ ಫ್ರೇಮ್ನಲ್ಲೂ ಎದ್ದು ಕಾಣಿಸುತ್ತಿದೆ. ಇನ್ನು ಚಿತ್ರದಲ್ಲಿ ಯೋಧನ ನಿರೀಕ್ಷೆಗಳು, ಪ್ರೀತಿಯ ಹುಡುಕಾಟವನ್ನು ನಿರೀಕ್ಷಿಸಬಹುದು. ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ನಿರ್ಮಾಣ ಚಿತ್ರಕ್ಕಿದೆ. ಆಗಸ್ಟ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಮೃಣಾಲಾ ಠಾಕೂರ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು, ಪ್ರಭಾಸ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
ಇದನ್ನೂ ಓದಿ | Sita Ramam Film | ದುಲ್ಖರ್ ಸಲ್ಮಾನ್ ಜತೆ ನಟಿಸಲಿದ್ದಾರೆ ಕ್ರಶ್ಮಿಕಾ