Site icon Vistara News

Pushpa 2 Movie : ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಸಾಯ್ತಾರಾ? ಶವದ ಫೋಟೊ ವೈರಲ್‌

#image_title

ಹೈದರಾಬಾದ್‌: ಪುಷ್ಪಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ಚಿತ್ರ. ಇದೀಗ ಪುಷ್ಪಾ 2 ಸಿನಿಮಾ (Pushpa 2 Movie) ಕೂಡ ತೆರೆಗೆ ಬರುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಿರುವಾಗ ಸಿನಿಮಾದ ಬಗ್ಗೆ ಹಲವಾರು ರೀತಿಯ ಚರ್ಚೆಗಳೂ ನಡೆಯುತ್ತಿವೆ. ಸಿನಿಮಾದಲ್ಲಿ ರಶ್ಮಿಕಾದ ಪಾತ್ರವಾಗಿರವ ಶ್ರೀವಲ್ಲಿ ಸಾವನ್ನಪ್ಪುತ್ತಾಳೆ ಎನ್ನುವ ಸುದ್ದಿಯೂ ಹರಿದಾಡಿದೆ. ಅದರ ಬೆನ್ನಲ್ಲೇ ಇದೀಗ ಶ್ರೀವಲ್ಲಿಯದ್ದು ಎನ್ನಲಾದ ಶವದ ಫೋಟೋ ವೈರಲ್‌ ಆಗಿದ್ದು, ಅವರ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು. ಪುಷ್ಪಾ ಸಿನಿಮಾದ ಶ್ರೀವಲ್ಲಿ ಪುಷ್ಪಾ 2ನಲ್ಲಿ ಸಾಯುತ್ತಾಳೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿಯೆನ್ನುವಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಶ್ರೀವಲ್ಲಿ ಶವವಾಗಿದ್ದು, ಆಕೆಯ ಮೂಗಿಗೆ ಹತ್ತಿ ತುಂಬಿ, ಹಾರ ಹಾಕಿರುವ ದೃಶ್ಯ ಕಾಣಬಹುದು. ಇದನ್ನು ನೋಡುತ್ತಿದ್ದಂತೆಯೇ ಜನರು ಪುಷ್ಪಾ 2 ಕಥೆಯನ್ನು ಊಹಿಸಲಾರಂಭಿಸಿದ್ದಾರೆ. ಸಿನಿಮಾದಲ್ಲಿ ಅಲ್ಲುಗೂ ಫಹಾದ್‌ಗೂ ಜಗಳ ಉಂಟಾಗಿ ಶ್ರೀವಲ್ಲಿ ಸಾಯಬಹುದು ಎಂದು ಸಿನಿ ಪ್ರೇಮಿಗಳು ಅಂದಾಜು ಮಾಡುತ್ತಿದ್ದಾರೆ. ಹಾಗೆಯೇ ಪ್ರಮುಖ ಪಾತ್ರವನ್ನು ಕೊಂದ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದ್ದಾರೆ.

ಇದನ್ನೂ ಓದಿ: Actress Samantha : ಪುಷ್ಪಾ 2 ಸಿನಿಮಾದಲ್ಲಿ ಹೆಜ್ಜೆ ಹಾಕ್ತಾರಾ ಸಮಂತಾ? ಅವರೇ ಕೊಟ್ಟ ಉತ್ತರವಿದು
ಆದರೆ ಇದು ನಿಜವಾಗಿಯೂ ಪುಷ್ಪಾ 2 ಸಿನಿಮಾದ ಫೋಟೋ ಎನ್ನುವುದರ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ. ತೆಲುಗು ಭಾಷೆಯ ಕೆಲ ಮಾಧ್ಯಮಗಳು ಈ ಫೋಟೋವನ್ನು ಬೇರೆ ರೀತಿಯಲ್ಲೇ ವರದಿ ಮಾಡಿವೆ. ವಾಸ್ತವಿಕವಾಗಿ ಇದು ರಶ್ಮಿಕಾ ಅವರ ಫೋಟೋವೇ ಅಲ್ಲ. ಇದು ಮರಾಠಿ ಸಿನಿಮಾವೊಂದರ ದೃಶ್ಯದ ಫೋಟೋ. ಅದರಲ್ಲಿರುವ ನಟಿ ಕೂಡ ರಶ್ಮಿಕಾ ಅವರಂತೆಯೇ ಕಾಣುವುದರಿಂದ ಜನರು ಇಲ್ಲಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇಷ್ಟೆಲ್ಲ ಗೊಂದಲಗಳು ಸೃಷ್ಟಿಯಾಗಿದ್ದರೂ ಪುಷ್ಪಾ ಸಿನಿಮಾ ತಂಡ ಇದುವರೆಗೆ ಯಾವುದೇ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಈ ಮೌನ ಕೂಡ ಅನೇಕರಲ್ಲಿ ಕುತೂಹಲ ಕೆರಳಿಸಿದೆ. ಸಿನಿಮಾ ತಂಡ ಸ್ಪಷ್ಟನೆ ಕೊಡುವುದಕ್ಕೆ ಸಿದ್ಧವಿಲ್ಲ ಎಂದ ಮೇಲೆ ನಿಜವಾಗಿಯೂ ಸಿನಿಮಾದಲ್ಲಿ ಶ್ರೀವಲ್ಲಿ ಸಾಯಬಹುದು ಎಂದು ಚರ್ಚೆ ನಡೆಸಲಾರಂಭಿಸಿದ್ದಾರೆ.

ಇದನ್ನೂ ಓದಿ: Rashmika Mandanna: ನಟಿ ಐಶ್ವರ್ಯಾ ರಾಜೇಶ್ ಜತೆಗಿನ ವಿವಾದಕ್ಕೆ ಅಂತ್ಯ ಹಾಡಿದ ರಶ್ಮಿಕಾ ಮಂದಣ್ಣ
ಈ ಗೊಂದಲಗಳು ಅದೇನೇ ಇರಲಿ. ಪುಷ್ಪಾ 2 ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಕುತೂಹಲ ಕಾಪಾಡಿಕೊಂಡಿರುವುದಂತೂ ಸತ್ಯ. ಸಿನಿಮಾದಲ್ಲಿನ ಅಲ್ಲು ಅವರ ಪೋಸ್ಟರ್‌ ಕೂಡ ಅಭಿಮಾನಿಗಳು ಹುಚ್ಚೇಳುವಂತೆ ಮಾಡಿತ್ತು. ಇದೀಗ ಶ್ರೀವಲ್ಲಿ ಏನಾಗುತ್ತಾಳೆ? ಅಲ್ಲು ಅರ್ಜುನ್‌ ಪೋಸ್ಟರ್‌ನಲ್ಲಿ ಸೀರೆ ಉಟ್ಟಿದ್ದು ಏಕೆ ಎನ್ನುವಂತಹ ಹಲವಾರು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡಲಾರಂಭಿಸಿವೆ. ಆ ಎಲ್ಲ ಪ್ರಶ್ನೆಗಳಿಗೆ ಸಿನಿಮಾ ಬಿಡುಗಡೆಯಾದ ನಂತರವೇ ಉತ್ತರ ಸಿಗಲಿದೆ.

Exit mobile version