Site icon Vistara News

Samantha Ruth Prabhu: ಸಿಟಾಡೆಲ್‌ನಲ್ಲಿ ಕಿಸ್ಸಿಂಗ್‌, ಹಾಟ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?

Will Samantha appear in kissing, hot scenes in Citadel

ಬೆಂಗಳೂರು: ಸಿಟಾಡೆಲ್ (Citadel) ಯೂನಿವರ್ಸ್‌ನ ಭಾರತೀಯ ಅಧ್ಯಾಯದಲ್ಲಿ ವರುಣ್ ಧವನ್ ಹಾಗೂ ಸಮಂತಾ (Samantha Ruth Prabhu) ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ʻಸಿಟಾಡೆಲ್’ ಇಂಗ್ಲಿಷ್ ವರ್ಷನ್ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಸದ್ದು ಮಾಡುತ್ತಿದ್ದು, ಇದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ರಿಚರ್ಡ್ ನಡುವೆ ಕಿಸ್ಸಿಂಗ್ ಹಾಗೂ ಹಾಟ್‌ ದೃಶ್ಯಗಳಿವೆ. ಈಗ ಇದೇ ಟೈಟಲ್‌ ಇಟ್ಟು ಭಾರತದಲ್ಲೂ ವೆಬ್ ಸೀರಿಸ್ ರೆಡಿಯಾಗುತ್ತಿದೆ. ಇದೀಗ ಪ್ರಿಯಾಂಕಾ-ರಿಚರ್ಡ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳಂತೆ, ಸಮಂತಾ-ವರುಣ್ ಧವನ್ ನಡುವೆ ಇರುತ್ತದೆ ಎಂಬ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ.

ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?

‘ಫ್ಯಾಮಿಲಿ ಮ್ಯಾನ್ 2’ ವೆಬ್‌ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ ಮ್ಯಾನ್‌ ಸಿರೀಸ್‌ ಬರುವ ಸಮಯದಲ್ಲಿ ಸಮಂತಾ ಅವರು ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿರಲಿಲ್ಲ. ಆದರೆ ಸಿರೀಸ್‌ನಲ್ಲಿ ಸಮಂತಾ ನಟಿಸಿರುವ ದೃಶ್ಯಗಳೇ ಇಬ್ಬರನ್ನು ಬೇರೆ ಮಾಡಿದ್ದು ಎನ್ನುವ ಸುದ್ದಿ ವೈರಲ್‌ ಆಗಿತ್ತು. ‘ಫ್ಯಾಮಿಲಿ ಮ್ಯಾನ್ 2’ ಸೀರಿಸ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ‘ಸಿಟಾಡೆಲ್‌’ ಭಾರತೀಯ ವರ್ಷನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸೀರಿಸ್‌ನಲ್ಲಿ ಸಮಂತಾ, ಪ್ರಿಯಾಂಕಾ ಚೋಪ್ರಾರಂತೆ ಹಾಟ್‌ ದೃಶ್ಯಗಳನ್ನು ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Samantha Ruth Prabhu: ವಿಜಯ್​ ದೇವರಕೊಂಡ – ಸಮಂತಾ ಒಡನಾಟ ಹೆಚ್ಚಾಗುತ್ತಿದೆಯಾ? ವಿಡಿಯೊದಲ್ಲಿ ಏನಿದೆ?

ಇದು ರಿಮೇಕ್ ಅಲ್ಲ

ಸಮಂತಾ ಹಾಗೂ ವರುಣ್ ಧವನ್ ನಡುವೆ ಕಿಸ್ಸಿಂಗ್ ದೃಶ್ಯಗಳು ಇರುತ್ತವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಸಮಂತಾ ‘ಸಿಟಾಡೆಲ್’ ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕಿಸ್ಸಿಂಗ್ ಹಾಗೂ ಬೆಡ್ ರೂಮ್ ದೃಶ್ಯಗಳು ಇರುತ್ತವೆಯೇ? ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇದೆ.

ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ʼಖುಷಿʼ ಇದೇ ಸೆಪ್ಟೆಂಬರ್‌ 1ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ʼಮಹಾನಟಿʼ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.

Exit mobile version