Site icon Vistara News

World Aids Day 2022 | ಏಡ್ಸ್‌ ಸುತ್ತ ಭಾವುಕ ಸಂದೇಶ ಸಾರಿದ ಬಾಲಿವುಡ್‌ ಚಿತ್ರಗಳಿವು

World Aids Day 2022

ಬೆಂಗಳೂರು: ಎಚ್‌ಐವಿ-ಏಡ್ಸ್‌ ಬಗ್ಗೆ (World Aids Day 2022) ಮಾತನಾಡುವುದಕ್ಕೆ ಹಿಂದೆ ಇರುವಷ್ಟು ಹಿಂಜರಿಕೆ ಈಗಿಲ್ಲದಿದ್ದರೂ, ಆ ಕುರಿತು ಅರಿವಿನ ಕೊರತೆ ಇಂದಿಗೂ ಇದ್ದೇ ಇದೆ. ಈ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಅಥವಾ ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಮಾತನಾಡುವುದೇ ಮೈಲಿಗೆ ಎಂಬಂಥ ಮನಸ್ಥಿತಿಯವರೂ ಇಲ್ಲದಿಲ್ಲ. ಬಾಲಿವುಡ್‌ ಸಿನಿಮಾಗಳು ಈ ಕುರಿತು ಮಾತನಾಡುವ ಪ್ರಯತ್ನವನ್ನು ಕೆಲವು ಮಟ್ಟಿಗೆ ಮಾಡಿದೆ. ಅಂಥ ಕೆಲವು ಚಿತ್ರಗಳ ಮಾಹಿತಿ ಇಲ್ಲಿದೆ.

ಫಿರ್‌ ಮಿಲೇಂಗೆ (Phir Milenge)
ಸಲ್ಮಾನ್‌ ಖಾನ್‌ ಮತ್ತು ಶಿಲ್ಪಾ ಶೆಟ್ಟಿ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರ ೨೦೦೩ರಲ್ಲಿ ತೆರೆ ಕಂಡಿತ್ತು. ಅಭಿಷೇಕ್‌ ಬಚ್ಚನ್‌ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದರು. ಟಾಮ್‌ ಹ್ಯಾಂಕ್ಸ್‌ ಅಭಿನಯದ ʻಫಿಲಡೆಲ್ಫಿಯಾʼ ಚಿತ್ರದಿಂದ ಸ್ಫೂರ್ತಿ ಪಡೆದಿದ್ದ ಈ ಸಿನಿಮಾವನ್ನು ನಟಿ ರೇವತಿ ನಿರ್ದೇಶಿಸಿದ್ದರು. ಎಚ್‌ಐವಿ ಸೋಂಕಿತೆಯನ್ನು ಕೆಲಸದಿಂದ ತೆಗೆದು ಹಾಕುವ ಕಥಾ ವಸ್ತುವನ್ನು ಈ ಚಿತ್ರ ಹೊಂದಿದೆ.

World Aids Day 2022

ಮೈ ಬ್ರದರ್…ನಿಖಿಲ್ (My Brother…Nikhil)
ಎಚ್‌ಐವಿ- ಏಡ್ಸ್‌ ಬಗೆಗೆ ಬಾಲಿವುಡ್‌ನಲ್ಲಿ ಬಂದಿರುವ ಅತ್ಯುತ್ತಮ ಚಿತ್ರ ಎಂದೇ ಇಂದಿಗೂ ಇದು ಪರಿಚಿತವಾಗಿದೆ. ೨೦೦೫ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿರುವುದು ನಿಖಿಲ್‌ ಕಪೂರ್‌ ಎಂಬ ಈಜು ಪಟುವಿನ ಕಥೆ. ಎಲ್ಲವೂ ಸರಿಯಿದ್ದ ಬದುಕಿನಲ್ಲಿ, ಆತನಿಗೆ ಎಚ್‌ಐವಿ ಸೋಂಕು ತಗುಲಿದೆ ಎಂದಾಕ್ಷಣ ಆತನ ಪಾಲಿಗೆ ಜಗತ್ತೇ ಬದಲಾಗುತ್ತದೆ. ಎಲ್ಲರೂ ಆತನಿಂದ ದೂರ ಸರಿದಾಗ, ಅವನ ಸಹೋದರಿ ಅನಾಮಿಕಾ (ಜೂಹಿ ಚಾವ್ಲ) ಮಾತ್ರವೇ ಆತನಿಗೆ ಆಸರೆಯಾಗಿ ನಿಲ್ಲುತ್ತಾಳೆ. ಇದು ಈ ಚಿತ್ರ ಮುಖ್ಯ ಕಥಾ ತಿರುಳು.

World Aids Day 2022

ಇದನ್ನೂ ಓದಿ | Bipasha Basu | ಮುದ್ದು ಮಗಳ ಜತೆ ಫೋಟೊ ಹಂಚಿಕೊಂಡ ಬಾಲಿವುಡ್‌ ನಟಿ ಬಿಪಾಶಾ ಬಸು

ಪಾಸಿಟಿವ್ (positive)
ಫರ್ಹಾನ್‌ ಅಖ್ತರ್‌ ನಿರ್ದೇಶನದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವುದು ಶಬಾನಾ ಅಜ್ಮಿ, ಬೊಮನ್‌ ಇರಾನಿ ಮತ್ತು ಅರ್ಜುನ್‌ ಮಾಥುರ್.‌ ತನ್ನ ತಂದೆಗೆ ಹಲವಾರು ವರ್ಷಗಳ ಹಿಂದೆಯೇ ಎಚ್‌ಐವಿ ಸೋಂಕು ತಗುಲಿದೆ ಎಂದು ತಿಳಿದ ಮಗನೊಬ್ಬನ ದ್ವಂದ್ವವನ್ನು ಈ ಕಥೆ ಗುರುತಿಸುತ್ತದೆ. ತನ್ನ ತಾಯಿಗೆ ದ್ರೋಹ ಮಾಡಿದ ತಂದೆಯನ್ನು ಕ್ಷಮಿಸಿ, ಸಾವಿನಂಚಿನಲ್ಲಿದ್ದ ಜೀವಕ್ಕೆ ಶಾಂತಿ ನೀಡುವ ಕಷ್ಟದ ಆಯ್ಕೆ ಆತನ ಮುಂದಿರುತ್ತದೆ.

World Aids Day 2022

ನಿದಾನ್ (Nidaan)
ಮಹೇಶ್‌ ಮಾಂಜ್ರೇಕರ್‌ ಸಾರಥ್ಯದಲ್ಲಿ ೨೦೦೦ರಲ್ಲಿ ಬಿಡುಗಡೆಯಾದ ಚಿತ್ರವಿದು. ಹದಿಹರೆಯದ ಹುಡುಗಿಯೊಬ್ಬಳಿಗೆ ರಕ್ತಪೂರಣದ ಸಂದರ್ಭದಲ್ಲಿ ಎಚ್‌ಐವಿ ಸೋಂಕು ತಗುಲುತ್ತದೆ. ಈ ವಿಷಯ ತಿಳಿದ ಆಕೆಯ ಕುಟುಂಬ, ಉಳಿದಿರುವ ಸಮಯದಲ್ಲಿ ಆಕೆಯೊಂದಿಗೆ ಏನೆಲ್ಲ ಮಾಡಬೇಕು, ಹೇಗೆಲ್ಲ ಕಳೆಯಬೇಕು ಎಂಬುದನ್ನು ಯೋಜಿಸುತ್ತದೆ. ರೀಮಾ ಲಾಗು, ಸುನಿಲ್‌ ಭಾರ್ವೆ ಮುಖ್ಯ ಭೂಮಿಕೆಯಲ್ಲಿದ್ದಾರೆ.

World Aids Day 2022

ದಸ್‌ ಕಹಾನಿಯಾ (Dus Kahaniyaan)
ಆರು ನಿರ್ದೇಶಕರು ಸೃಷ್ಟಿಸಿದ ಹತ್ತು ಬೇರೆಬೇರೆ ಕಥೆಗಳ ಗುಚ್ಛ ಈ ಸಿನೆಮಾ. ಈ ಪೈಕಿ ಸಂಜಯ್‌ ಗುಪ್ತ ನಿರ್ದೇಶನದ ʻಜಾಹಿರ್‌ʼ ಎನ್ನುವ ಕಿರುಚಿತ್ರ ಏಡ್ಸ್‌ ಸುತ್ತಲೇ ಇದೆ. ಸಿಯಾ (ದಿಯಾ ಮಿರ್ಜಾ) ಎನ್ನುವ ಹುಡುಗಿಗೆ ತನ್ನ ಹೊಸ ನೆರೆಯಾತ ಸಾಹಿಲ್‌ (ಮನೋಜ್‌ ಬಾಜಪೇಯಿ) ಜತೆಗೆ ಗೆಳೆತನವಾಗುತ್ತದೆ. ಆಕೆಯ ನಿಕಟ ಬರುವ ಇಚ್ಛೆಯನ್ನು ಆತ ವ್ಯಕ್ತಪಡಿಸಿದಾಗ ಸಿಯಾ ನಿರಾಕರಿಸುತ್ತಾಳೆ. ಒಂದು ದಿನ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ ಒಂದಕ್ಕೆ ಹೋದಾಗ ಅಲ್ಲಿ ಬಾರ್‌ ಡಾನ್ಸರ್‌ ಕೆಲಸ ಮಾಡುವ ಸಿಯಾ ಕಾಣುತ್ತಾಳೆ. ಹತಾಶೆ ಮತ್ತು ಕೋಪದಿಂದ ಸಿಕ್ಕಾಪಟ್ಟೆ ಕುಡಿಯುವ ಆತ, ಸಿಯಾ ಮನೆಗೆ ಬರುತ್ತಾನೆ. ಆತನೊಂದಿಗೆ ಮಾತನಾಡಲು ಯತ್ನಿಸುವ ಆಕೆಗೆ ಅವಕಾಶವನ್ನೇ ನೀಡದೆ ಅತ್ಯಾಚಾರ ಎಸಗುತ್ತಾನೆ. ಆಕೆ ಏಡ್ಸ್‌ ರೋಗಿ ಎಂಬುದು ಆನಂತರ ಕಥೆ ತೆರೆದುಕೊಳ್ಳುತ್ತದೆ.

World Aids Day 2022

ಇದನ್ನೂ ಓದಿ | Kiara Advani | ಬಾಲಿವುಡ್‌ನ ಕಿಯಾರ-ಸಿದ್ಧಾರ್ಥ ಮದ್ವೆ! ನಟಿಯ ಇನ್‌ಸ್ಟಾ ಪೋಸ್ಟ್‌‌ನಲ್ಲಿ ಏನಿದೆ?

Exit mobile version