Site icon Vistara News

Yash Actor: ರಾಕಿಂಗ್ ಸ್ಟಾರ್ `ಯಶ್ 19′ ಬಿಗ್ ಬ್ರೇಕಿಂಗ್; ಫ್ಯಾನ್ಸ್‌ ಕಾಯುವಿಕೆಗೆ ಶೀಘ್ರವೇ ಬ್ರೇಕ್!

Yash geethu mohandas

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ 19 ಸಿನಿಮಾ (Yash Actor) ಯಾವಾಗ ಎಂದು ಯಶ್‌ ಫ್ಯಾನ್ಸ್‌ಗಳು ತಲೆಯೊಳಗೆ ಹುಳ ಬಿಟ್ಟುಕೊಂಡಿದ್ದರು. ಯಶ್ ಕೂಡ ” ʼಯಶ್ 19ʼ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನೆಲ್ಲ ನಂಬಬೇಡಿ. ಏನೇ ಇದ್ದರೂ ನಾನೇ ಎಲ್ಲವನ್ನೂ ಹೇಳುತ್ತೇನೆ” ಎಂದು ನ್ಯೂಸ್ ಚಾನೆಲ್ ಒಂದಕ್ಕೆ ಹೇಳಿದ್ದರು. ಆದರೆ, ಅಭಿಮಾನಿಗಳಿಗೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಯಶ್ 19 ಬಗ್ಗೆ ಅಪ್‌ಡೇಟ್ ಸಿಗುತ್ತಲೇ ಇರುತ್ತದೆ. ಟ್ವಿಟರ್‌ನಲ್ಲಿ ಆ ‘ಯಶ್ 19’ ಶೂಟಿಂಗ್ ಡಿಸೆಂಬರ್ 23ರಿಂದ ಆರಂಭ ಆಗಲಿದೆ ಎಂದು ಟ್ರೆಂಡ್‌ ಆಗುತ್ತಿದೆ. ಆದರೆ, ಯಶ್ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅಭಿಮಾನಿಗಳ 2 ವರ್ಷಗಳ ಕಾಯುವಿಕೆಗೆ ಇದೇ ತಿಂಗಳು ಬ್ರೇಕ್‌ ಬೀಳಲಿದೆ ಎನ್ನಲಾಗುತ್ತಿದೆ. ಮಾಲಿವುಡ್‌ ನಿರ್ದೇಶಕಿಗೆ ಯಶ್‌ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಇದೇ ತಿಂಗಳಾಂತ್ಯಕ್ಕೆ ಅಧಿಕೃತ ಘೋಷಣೆಯಾಗಲಿದ್ದು, ಡಿಸೆಂಬರ್‌ನಿಂದ ಶೂಟಿಂಗ್ ಶುರು ಆಗಲಿದೆ ಎಂದೂ ಹೇಳಲಾಗುತ್ತಿದೆ.

ಟ್ವಿಟರ್‌ನಲ್ಲಿ ಯಶ್ 19 ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಯಶ್ ಫ್ಯಾನ್ಸ್ ಪೇಜ್ ಸೇರಿದಂತೆ ಸಿನಿಮಾ ಸುದ್ದಿಗಳನ್ನು ಹಂಚಿಕೊಳ್ಳುವ ವೆಬ್‌ ಪೇಜ್‌ಗಳು ಹೊಸ ಸುದ್ದಿಯೊಂದನ್ನು ಟ್ರೆಂಡಿಂಗ್‌ನಲ್ಲಿಟ್ಟಿವೆ.

ಇದನ್ನೂ ಓದಿ: Yash Actor: ಇನ್‌ಸ್ಟಾದಲ್ಲಿ ಹೆಚ್ಚು ಫಾಲೋವರ್ಸ್‌, ಆದರೆ ಎರಡೇ ಅಕೌಂಟ್‌ ಫಾಲೋ ಮಾಡ್ತಿದ್ದಾರೆ ಯಶ್‌!

ಯಶ್ ಕೊನೆಯದಾಗಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಅಭಿಮಾನಿಗಳು ಮುಂದಿನ ಸಿನಿಮಾ ಬಗ್ಗೆ ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ.

Exit mobile version