Site icon Vistara News

Yash Actor: ಇನ್‌ಸ್ಟಾದಲ್ಲಿ ಹೆಚ್ಚು ಫಾಲೋವರ್ಸ್‌, ಆದರೆ ಎರಡೇ ಅಕೌಂಟ್‌ ಫಾಲೋ ಮಾಡ್ತಿದ್ದಾರೆ ಯಶ್‌!

Yash Actor

ಬೆಂಗಳೂರು: ಕೆಜಿಎಫ್ ಖ್ಯಾತಿಯ ಯಶ್ ಯಾವ ಗಾಡ್‌ ಫಾದರ್‌ ಇಲ್ಲದೇ ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಎಂಟ್ರಿ ಕೊಟ್ಟು ಕೆಜಿಎಫ್‌ನಂತಹ (KGF Movie) ಹಿಟ್‌ ಸಿನಿಮಾ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌ಗೆ (Yash Actor) ದೇಶ ವಿದೇಶದಲ್ಲೂ ಫ್ಯಾನ್ಸ್‌ ಇದ್ದಾರೆ.  ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ 1 ಕೋಟಿಗೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಆದರೆ ಯಶ್‌ ಇಷ್ಟಾದರೂ ಫಾಲೋ ಮಾಡುತ್ತಿರುವುದು ಎರಡು ಅಕೌಂಟ್‌ ಮಾತ್ರ.

ಒಬ್ಬರು ಅವರ ಪ್ರೀತಿಯ ಪತ್ನಿ ರಾಧಿಕಾ ಪಂಡಿತ್. ಎರಡನೇ ಖಾತೆಯು ವ್ಯಕ್ತಿಯಲ್ಲ, ಆದರೆ ವಿಲನ್ ಎಂಬ ಪ್ರಾಡಕ್ಟ್‌ ಪೇಜ್‌. ಇಂದು ಯಶ್​ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜಾಹೀರಾತುಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಯಶ್‌ಗೆ ಹೆಚ್ಚು ಫಾಲೋವರ್ಸ್‌ ಇದೆ. ರಾಜ್ ಬಿ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ಶಿವರಾಜ್ ಕುಮಾರ್ ಕೂಡ ಇದ್ದಾರೆ.

  1. ರಾಕಿಂಗ್ ಸ್ಟಾರ್ ಯಶ್-13.6M
  2. ಧ್ರುವ ಸರ್ಜಾ-3.4M
  3. ಕಿಚ್ಚ ಸುದೀಪ್ -2M Twitter-2.8M
  4. ರಕ್ಷಿತ್ ಶೆಟ್ಟಿ-1.2M
  5. ಡಾಲಿ ಧನಂಜಯ್-1.2M
  6. ಗೋಲ್ಡನ್ ಸ್ಟಾರ್ ಗಣೇಶ್-952K
  7. ರಿಷಬ್ ಶೆಟ್ಟಿ-815K
  8. ಶಿವರಾಜ್ ಕುಮಾರ್-380K
  9. ರಾಜ್ ಬಿ ಶೆಟ್ಟಿ-225K

ಇದನ್ನೂ ಓದಿ: Yash Actor: ಅವಕಾಶ ಕೊಡಿ ಎಂದು ಕಣ್ಣೀರಿಟ್ಟಿದ್ರಾ ರಾಕಿಂಗ್ ಸ್ಟಾರ್ ಯಶ್? ಆ ತಮಿಳು ನಟ ಹೇಳಿದ್ದೇನು?

ಇಷ್ಟಾದರೂ ಯಶ್‌ ಮಾತ್ರ ಫಾಲೋ ಮಾಡುತ್ತಿರುವುದು ರಾಧಿಕಾ ಒಬ್ಬರನ್ನೇ. ನಂದಗೋಕುಲ ಧಾರಾವಾಹಿ, ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿಯಾಗಿತ್ತು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9ರಂದು ಮದುವೆ ಆಗಿದ್ದರು. ಐರಾ ಮತ್ತು ಯಥರ್ವ ಇಬ್ಬರು ಮಕ್ಕಳು ಇದ್ದಾರೆ.

ಯಶ್ ಕೊನೆಯದಾಗಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಅಭಿಮಾನಿಗಳು ಮುಂದಿನ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.ಇನ್ನೊಂದೆಡೆ ಯಶ್‌ “19ʼ ಸಿನಿಮಾದ ಬಗ್ಗೆಯೂ ಮಾತುಕತೆ ಜೋರಾಗಿಯೇ ನಡೆಯುತ್ತಿದೆ. ಆದರೆ ಈ ಸಿನಿಮಾದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.

Exit mobile version