Site icon Vistara News

Actor Yash: ಹಾಲಿವುಡ್‌ ಸ್ಟಂಟ್‌ ಡೈರೆಕ್ಟರ್‌ ಜತೆ ರಾಕಿಂಗ್‌ ಸ್ಟಾರ್‌ ಯಶ್‌!

Yash meets Hollywood director JJ Perry

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಸಿನಿಮಾ’ ಮೂಲಕ ಯಶ್ (Actor Yash) ಜಾಗತಿಕ ಯಶಸ್ಸನ್ನು ಕಂಡರು. ‘ಕೆಜಿಎಫ್ 2’ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಯಶ್‌ ಯಾವುದೇ ಹೊಸ ಸಿನಿಮಾ ಅಪ್‌ಡೇಟ್‌ ಹಂಚಿಕೊಂಡಿಲ್ಲ. ಆಗಾಗ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ‘ಯಶ್ 19’ ಟ್ರೆಂಡ್ ಮಾಡಿ ಹೊಸ ಅಪ್‌ಡೇಟ್‌ಗಾಗಿ ಕಾಯುತ್ತಲೇ ಇರುತ್ತಾರೆ. ಇತ್ತೀಚೆಗೆ ರಾಕಿಂಗ್‌ ಸ್ಟಾರ್‌ ಯಶ್‌ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು (JJ Perry in London) ಲಂಡನ್​ನಲ್ಲಿ ಭೇಟಿ ಆಗಿದ್ದಾರೆ.

ನಿರ್ದೇಶಕಿ ಗೀತು ಮೋಹನ್ ದಾಸ್ ಜತೆ ಯಶ್ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಗೆ ಕಾಯಬೇಕಿದೆ. ಸೆಪ್ಟೆಂಬರ್ 26ರಂದು, ಯಶ್ ಹಾಲಿವುಡ್ ಸ್ಟಂಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು ಅವರನ್ನು ಭೇಟಿಯಾದರು. ಯಶ್​ ಅವರ ಮುಂದಿನ ಸಿನಿಮಾಕ್ಕೆ ಜೆಜೆ ಪೆರ್ರಿ ಆ್ಯಕ್ಷನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಯಶ್, ಜೆಜೆ ಪೆರ್ರಿಯವರ ಗನ್ ಶೂಟಿಂಗ್ ಯಾರ್ಡ್​ಗೆ ಭೇಟಿ ನೀಡಿ ಗನ್​ ಶೂಟಿಂಗ್ ಅಭ್ಯಾಸ ಮಾಡಿದ್ದರು. ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Actor Yash : ರಾಕಿ ಭಾಯ್​ ಯಶ್​ ನಾಪತ್ತೆ; ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ!

‘ಅವತಾರ್’, ‘ಎಕ್ಸ್​ಎಕ್ಸ್​ಎಕ್ಸ್’, ಫಾಸ್ಟ್ ಆ್ಯಂಡ್ ಫ್ಯೂರಿಯಸ್, ‘ಜಾನ್ ವಿಕ್’, ‘ಸ್ಪೈ’, ‘ದಿ ಎಕ್ಸ್​ಪ್ಯಾಂಡೆಬಲ್ಸ್ 3’ ಇನ್ನೂ ಹಲವು ಹಾಲಿವುಡ್ ಆ್ಯಕ್ಷನ್ ಸಿನಿಮಾಗಳಿಗೆ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ.  ಲೇವಿಸ್ ಹ್ಯಾಮಿಲ್ಟನ್ (Lewis Hamilton) ಅವರನ್ನೂ ಕೂಡ ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿ ಮಾಡಿದ್ದಾರೆ ಎಂಬ ವರದಿಯಿದೆ. ಜಗತ್ತಿನ ಅತ್ತುತ್ತಮ ಕಾರ್ ರೇಸರ್‌ನಲ್ಲಿ ಹ್ಯಾಮಿಲ್ಟನ್ ಕೂಡ ಒಬ್ಬರು. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಡೈರೆಕ್ಷನ್‌ನಲ್ಲಿ ಯಶ್ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೊಸ ಪ್ರಾಜೆಕ್ಟ್​​ಗಾಗಿ ಯಶ್​ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಕೆಲವು ದಿನಗಳ ಹಿಂದೆ ಮಲೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ದೊಡ್ಡ ಸಿನಿಮಾ ಮಾಡುತ್ತಿಲ್ಲ. ಚೆನ್ನಾಗಿರುವ ಕತೆಯ ಸಿನಿಮಾ ಕೊಡುವ ಪ್ರಯತ್ನದಲ್ಲಿದ್ದೀನಿ. ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡುತ್ತೇನೆ ಎಂದಿದ್ದರು. ಕೆಲವು ಮೂಲಗಳ ಪ್ರಕಾರ, ಯಶ್​ರ ಮುಂದಿನ ಸಿನಿಮಾಕ್ಕೆ ಕತೆ ಸಿದ್ಧಗೊಂಡಿದ್ದು ಶೀಘ್ರದಲ್ಲೇ ಘೋಷಣೆಯಾಗಲಿದೆ.

Exit mobile version