Site icon Vistara News

Yash-Radhika Pandit: ದಸರಾ ಹಬ್ಬದ ಶುಭಾಶಯ ಹೇಳಲು ಯಶ್‌-ರಾಧಿಕಾ ಪಂಡಿತ್‌ ಹೊಸ ಫೋಟೊ ಶೂಟ್‌

yash radhika

yash radhika

ಬೆಂಗಳೂರು: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌-ರಾಧಿಕಾ ಪಂಡಿತ್‌ ದಂಪತಿ ಚಂದದ ಫೋಟೊ ಶೇರ್‌ ಮಾಡುವ ಮೂಲಕ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ʼʼಆನಂದದ ಮತ್ತು ಆಶೀರ್ವಾದಗಳಿಂದ ಕೂಡಿದ ದಸರಾ ಹಬ್ಬದ ಶುಭಾಶಯಗಳು!ʼʼ ಎಂದು ರಾಧಿಕಾ ಪಂಡಿತ್‌ ಬರೆದುಕೊಂಡಿದ್ದಾರೆ.

ದಸರಾ ಹಬ್ಬದ ನಿಮಿತ್ತ ಯಶ್​​ ಮತ್ತು ರಾಧಿಕಾ ಹೊಸ ಫೋಟೊ ಶೂಟ್​​​ ಮಾಡಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ರಾಧಿಕಾ ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದರೆ, ಯಶ್‌ ಗ್ರೇ ಬಣ್ಣದ ಪೈಜಾಮಾ ಹಾಕಿ ಫೋಸ್‌ ನೀಡಿದ್ದಾರೆ.

ಇತ್ತ ಯಶ್‌-ರಾಧಿಕಾ ಪಂಡಿತ್‌ ದಂಪತಿ ಮಕ್ಕಳಾದ ಐರಾ ಮತ್ತು ಯಥರ್ವ್​​​​ ಸೈಕಲ್​ಗೆ ಪೂಜೆ ಮಾಡುವ ಮೂಲಕ ಆಯುಧ ಪೂಜೆಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಈ ಫೋಟೊವನ್ನು ರಾಧಿಕಾ ಇನ್‌ಸ್ಟಾಗ್ರಾಮ್‌ ಸ್ಟೋರಿ ಮೂಲಕ ಹಂಚಿಕೊಂಡಿದ್ದಾರೆ.

ಯಶ್‌-ರಾಧಿಕಾ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಹಲವರು ಯಶ್‌ ಮುಂದಿನ ಚಿತ್ರ ಯಾವುದು? ಎಂದು ಕೇಳಿದ್ದಾರೆ. ಮಾತ್ರವಲ್ಲ ರಾಧಿಕಾ ಪಂಡಿತ್‌ ಚಿತ್ರರಂಗಕ್ಕೆ ಮರಳುವುದು ಯಾವಾಗ? ಎಂದೂ ಪ್ರಶ್ನಿಸಿದ್ದಾರೆ. 2019ರಲ್ಲಿ ತೆರೆಕಂಡ ʼಆದಿಲಕ್ಷ್ಮೀ ಪುರಾಣʼ ಚಿತ್ರದ ಬಳಿಕ ರಾಧಿಕಾ ಚಿತ್ರಗಳಲ್ಲಿ ಅಭಿನಯಿಸಿಲ್ಲ. ಇತ್ತ ಯಶ್‌ ಕೂಡ ʼಕೆಜಿಎಫ್‌ 2ʼ ಚಿತ್ರದ ಬಳಿಕ ಮುಂದಿನ ಸಿನಿಮಾವನ್ನು ಘೋಷಿಸಿಲ್ಲ. ಯಶ್‌ ಮುಂದಿನ ಚಿತ್ರಕ್ಕಾಗಿ ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದೆ.

ಇದನ್ನೂ ಓದಿ: Kerebete Movie: ಹಳ್ಳಿ ಸೊಗಡಿನ ಸಿನಿಮಾ ‘ಕೆರೆಬೇಟೆ’; ಮತ್ತೆ ಹೀರೊ ಆಗಿ ಮಿಂಚಲು ಗೌರಿ ಶಂಕರ್‌ ಸಜ್ಜು

Exit mobile version