Yash Radhika: ಅಪ್ಪ ನನ್ನ ಆಧಾರ, ನನ್ನ ಹೀರೊ, ನಾನು ʻಡ್ಯಾಡಿ ಗರ್ಲ್ʼ ಎಂದ ರಾಧಿಕಾ ಪಂಡಿತ್! Yashaswi Devadiga 2 ವರ್ಷಗಳು ago ಅಪ್ಪಂದಿರ ದಿನಾಚರಣೆ ಪ್ರಯುಕ್ತ ರಾಧಿಕಾ ಪಂಡಿತ್ (Yash Radhika) ಸ್ಪೆಷಲ್ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಕ್ಕಳ ಜತೆ ಯಶ್ ಸಮಯ ಕಳೆದ ವಿಶೇಷ ಕ್ಷಣಗಳು, ಮಗ ಯಥರ್ವ ಜತೆ ಯಶ್ ಚೆಸ್ ಆಡುತ್ತಿರುವ ಫೋಟೊ, ಮಗಳು ಐರಾಗೆ ಯಶ್ ನೈಲ್ ಪಾಲಿಶ್ ಹಚ್ಚುತ್ತಿರುವ ಫೋಟೊ ಪೋಸ್ಟ್ ಮಾಡಿದ್ದಾರೆ ರಾಧಿಕಾ. ರಾಧಿಕಾ ಪಂಡಿತ್ ತಂದೆ ತಾಯಿ ಹಾಗೂ ಅಣ್ಣನೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡು ʻʻನಾನು ಯಾವಾಗಲೂ ಅಪ್ಪನ ಮಗಳು, ಎಲ್ಲದಕ್ಕೂ, ಏನೇ ಇದ್ದರೂ ಅಪ್ಪನ ಬಳಿಯೇ ಮೊದಲು ಓಡುತ್ತೇನೆ. (ಅಮ್ಮನಿಂದ ಅನುಮತಿ ನಿರಾಕರಿಸಬಹುದು, ಸಲಹೆಗಾಗಿ, ಕೆಲವೊಮ್ಮೆ ಸುಮ್ಮನೆ ಮಾತನಾಡಲು) ನನಗೆ ಅಪ್ಪನೇ ನನ್ನ ಮಾರ್ಗದರ್ಶಿ, ನನ್ನ ಆಧಾರ, ನನ್ನ ಹೀರೊ !! ನನ್ನ ತಂದೆ ಜತೆಗಿನ ಬಾಂಧವ್ಯ ಇರುವ ಹಾಗೆಯೇ, ಐರಾ ಮತ್ತು ಯಥರ್ವ್ ಅವರ ತಂದೆ ಯಶ್ ಜೊತೆಯಿದೆ. ಎಲ್ಲಾ ಅತ್ಯುತ್ತಮ ಅಪ್ಪಂದಿರಿಗೆ ತಂದೆಯ ದಿನದ ಶುಭಾಶಯಗಳು!!ʼʼಎಂದು ಬರೆದುಕೊಂಡಿದ್ದಾರೆ. See more ರಾಧಿಕಾ ಅವರ ಸಕ್ಸಸ್‌ಗೆ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಅವರ ಬೆಂಬಲ ಅಪಾರ. ಹೀಗಿರುವಾಗ ನಟಿ ಕೂಡ ತಂದೆಯ ಮುದ್ದಿನ ಮಗಳು ನಾನು ಎಂದು ಮಾತನಾಡಿದ್ದಾರೆ. ‘ಯಶ್ 19’ ಸಿನಿಮಾ ಬಗ್ಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.