Site icon Vistara News

Actor Yash: ಅಗಲಿದ ಯಶ್‌ ಅಭಿಮಾನಿಗಳ ಕುಟುಂಬಸ್ಥರ ಕೈಸೇರುತ್ತಿದೆ ಚೆಕ್!

Yash to send check fans family in gadag issue

ಬೆಂಗಳೂರು: ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್‌ ಗಾತ್ರದ ಕಟೌಟ್‌ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್‌ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು. ಇದಾದ ಬಳಿಕ ಯಶ್‌ ಅವರು ಮೃತಪಟ್ಟ ಮೂವರು ಅಭಿಮಾನಿಗಳ (Actor Yash) ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು. ಇಂದು (ಜ.17) ಸೂರಣಗಿ ಮೃತ ಯುವಕರ ಕುಟುಂಬಸ್ಥರನ್ನು ಯಶ್ ಆಪ್ತ ಬಳಗ ಭೇಟಿ ಮಾಡಲಿದೆ. ಯಶ್ ಅಭಿಮಾನಿ ಬಳಗದ‌ ಅಧ್ಯಕ್ಷ ಮಂಜುನಾಥ ಭೇಟಿ ನೀಡಿ ಸಹಾಯ ಹಸ್ತ ಚಾಚಲಿದ್ದಾರೆ. ಯಶ್ ಸೂಚನೆ ಮೇರೆಗೆ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ.

ಅಭಿಮಾನಿಗಳು ಹುಟ್ಟು ಹಬ್ಬದ ಸಂದರ್ಭದಲ್ಲಿ (Yash Birthday) ತಮ್ಮ ಅಭಿಮಾನವನ್ನು ಬ್ಯಾನರ್‌, ಕಟೌಟ್‌ಗಳ ಮೂಲಕ ತೋರಿಸುವ ಬದಲು ಒಳ್ಳೆಯ ಕೆಲಸದ ಮೂಲಕ, ಒಳ್ಳೆಯ ಬದುಕಿನ ಮೂಲಕ ತೋರಿಸಬೇಕು ಎಂದು ಯಶ್‌ ಈ ಹಿಂದೆ ಮನವಿ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರ ನಟ ಯಶ್‌ ಅವರು ಸಂಜೆಯ ಹೊತ್ತಿಗೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ಮೂಲಕ ಸೂರಣಗಿಗೆ ಆಗಮಿಸಿದ್ದರು. ಅಲ್ಲಿ ಮೃತರ ಮನೆಗಳಿಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದ್ದರು.

ಇದನ್ನೂ ಓದಿ: Actor Yash: ನಾನೇ ನಿರ್ದೇಶಿಸುವುದು ಡೌಟ್‌; ಕೆಜಿಎಫ್‌ 3ಗೆ ಯಶ್‌ ಮಾತ್ರ ಫಿಕ್ಸ್‌ ಎಂದ ನೀಲ್‌!

ಒಬ್ಬನೇ ಮಗನನ್ನು ಕಳೆದುಕೊಂಡವರು, ಬದುಕಿಗೆ ದಿಕ್ಕಾದ ಮಗನನ್ನು ಕಳೆದುಕೊಂಡವರು ಯಶ್‌ ಮುಂದೆ ಕಣ್ಣೀರಿಟ್ಟಿದ್ದರು. ಮೃತಪಟ್ಟ ತಂದೆ ತಾಯಿಯ ಕೈ ಹಿಡಿದು ಅವರಿಗೆ ಸಾಂತ್ವನ ಹೇಳಿದ ಯಶ್‌ ಅವರ ಕಣ್ಣೀರು ಒರೆಸಿದ್ದರು. ಮೂರೂ ಕುಟುಂಬಗಳನ್ನು ಭೇಟಿ ಮಾಡಿದ ಯಶ್‌ ಅವರು, ಬಳಿಕ ಮಾಧ್ಯಮಗಳ ಜತೆ ಮಾತನಾಡಿ, “ನಾವು ಯಾರೂ ಈ ಬರ್ತ್‌ಡೇ ಸೆಲೆಬ್ರೇಷನ್‌ ಅನ್ನು ಇಷ್ಟಪಡಲ್ಲ. ಈ ಬರ್ತ್‌ಡೇ ಅಂದರೆನೇ ನನಗೆ ಭಯ ಆಗ್ತಿದೆ. ನಿಜವಾಗಲೂ ಈ ಬರ್ತ್‌ಡೇ ಆಚರಿಸದಿರಲು ಇಂಥ ಘಟನೆಗಳೇ ಕಾರಣ. ನನ್ನ ಬರ್ತ್‌ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂದು ಹೇಳಿದ್ದರು.

Exit mobile version