ಬೆಂಗಳೂರು : ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾಗೆ (Chiranjeevi Sarja ) ಅಕ್ಟೋಬರ್ 17ರಂದು ಜನುಮದಿನ. 2020ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಪ್ರೀತಿಸಿ ಮದುವೆಯಾದ ಮೇಘನಾ ರಾಜ್ ಚಿರು ನೆನಪಿನಲ್ಲಿ ಕಳೆಯುತ್ತಿದ್ದಾರೆ. ಒಳಗೆ ಎಷ್ಟೇ ನೋವಿದ್ದರೂ ಎಲ್ಲವನ್ನೂ ಸಹಿಸಿಕೊಂಡು ಮಗನಿಗಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಚಿರು ಹುಟ್ಟುಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಅನ್ನು ಇನ್‌ಸ್ಟಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಮೇಘನಾ ರಾಜ್ ಮದುವೆಯ ಫೋಟೊ ಹಂಚಿಕೊಂಡು ಪೋಸ್ಟ್ ಶೇರ್ ಮಾಡಿಕೊಂಡಿದ್ದು ʻʻನನ್ನ ಸಂತೋಷಕ್ಕೆ ಜನುಮದಿನದ ಶುಭಾಶಯ. ನಾನು ಮುಗುಳ್ನಗಲು ಕಾರಣ ಅದು ನಿನಗಾಗಿ. ನನ್ನ ಪ್ರೀತಿಯ ಪತಿ ಚಿರು. ನಾನು ನಿನ್ನನ್ನು ಪ್ರೀತಿಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.
ಮೇಘನಾ ರಾಜ್ ಹಾಕಿರುವ ಪೋಸ್ಟ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ನಟ ನಟಿಯರು, ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.
ಮೇಘನಾ ರಾಜ್ 5 ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡರು. ಚಿರಂಜೀವಿ ಜೂನ್ 7, 2020ರಂದು ನಿಧನರಾದರು. ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ಕೂಡಾ ಈಗ ಸಖತ್ ಫೇಮಸ್ ಆಗಿದ್ದಾನೆ. ಅವನ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ.
ಇದನ್ನೂ ಓದಿ | ಚಿರು ಸರ್ಜಾ ಕೊನೆ ಚಿತ್ರ ರಾಜಮಾರ್ತಾಂಡ ಬಿಡುಗಡೆ ಯಾವಾಗ? 23ರಂದು ಗೊತ್ತಾಗುತ್ತೆ!