Site icon Vistara News

Yogaraj Bhat | ʻನೀನು ಬೆಳೆಯೋ ಮಗ ಅಲ್ಲʼ: ಜೀ ಟಿವಿಯ ಹುಣಸೂರ್‌ಗೆ ಯೋಗರಾಜ್‌ ಭಟ್‌ ಅವಾಚ್ಯ ಬೈಗುಳ!

Yogaraj Bhat

ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ, ಚಿತ್ರ ಸಾಹಿತಿ‌ ಯೋಗರಾಜ್‌ ಭಟ್‌ (Yogaraj Bhat) ಅವರು ಜೀ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಎರಡು ಆಡಿಯೊಗಳು ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಯೋಗರಾಜ್‌ ಭಟ್‌ ಅವರು ನಿರ್ದೇಶಿಸಿರುವ ಮುಂದಿನ ಚಿತ್ರಗಳ ಡಿಜಿಟಲ್‌ ಹಕ್ಕನ್ನು ಖರೀದಿಸುವುದಾಗಿ ರಾಘವೇಂದ್ರ ಹುಣಸೂರು ಹೇಳಿದ್ದರು. ಆದರೆ ಇದೀಗ ರಾಘವೇಂದ್ರ ಹುಣಸೂರು ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಯೋಗರಾಜ್‌ ಭಟ್‌ ಗರಂ ಆಗಿದ್ದಾರೆ ಎನ್ನಲಾಗುತ್ತಿದೆ.

ಜೀ ಕನ್ನಡ ವಾಹಿನಿಯಲ್ಲಿ ಡ್ರಾಮಾ, ಕಾಮಿಡಿ ಕಿಲಾಡಿಗಳು ರೀತಿಯ ಕಾರ್ಯಕ್ರಮಗಳಿಗೆ ಜಡ್ಜ್ ಆಗಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ಯೋಗರಾಜ್ ಭಟ್ ಈಗ ಅದೇ ವಾಹಿನಿಯ ಮನರಂಜನೆಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಮುಗಿ ಬಿದ್ದಿದ್ದಾರೆ. ಈ ಕುರಿತ ಆಡಿಯೊಗಳು ವೈರಲ್‌ ಆಗಿದೆ. ಯೋಗರಾಜ್‌ ಭಟ್‌ ಮಾತನಾಡಿ ʻʻರಾಘಪ್ಪ, ನಿನ್ನನ್ನು ನಂಬಿರುವ ಇಂಡಸ್ಟ್ರೀಯವರನ್ನು ಉದ್ದಾರ ಮಾಡು. ʻಪದವಿ ಪೂರ್ವʼ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಈ ಹಿಂದೆ ಡಿಜಿಟಲ್‌, ಟವಿ ಹಕ್ಕುಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದೆ. ನಾವು ಪ್ರಪೋಸಲ್‌ ಕಳುಹಿಸಿದ್ದೇವೆ. ಆದರೆ ನೀನು ಫೋನ್‌ ತೆಗೆಯುತ್ತಿಲ್ಲ. ನಮಗೆ ಈ ಬಗ್ಗೆ ಸರಿಯಾದ ಕ್ಲಾರಿಟಿ ಬೇಕುʼʼಎಂದು ಒಂದು ಆಡಿಯೊದಲ್ಲಿ ಹೇಳಿದ್ದಾರೆ.

ಜೀ ಟಿವಿಯ ರಾಘವೇಂದ್ರ ಹುಣಸೂರ್‌ಗೆ ಯೋಗರಾಜ್‌ ಭಟ್‌ ಅವಾಚ್ಯ ಬೈಗುಳದ ಆಡಿಯೊ :

https://vistaranews.com/wp-content/uploads/2022/11/Yogaraj-Bhat.mp3
https://vistaranews.com/wp-content/uploads/2022/11/Yogaraj-Bhat-2.mp3
Yogaraj Bhat

ಇದನ್ನೂ ಓದಿ | Kantara movie | ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಅವಮಾನ ಆರೋಪ: ಪ್ರದರ್ಶನ ನಿಲ್ಲಿಸಲು ಒತ್ತಾಯ

ನಾವೆಲ್ಲ ನಿನ್ನ ಪಾಲಿಗೆ ಸತ್ತೋಗ್‌ ಬಿಟ್ಟಿದ್ದೇವೆ!
ಸಹನಾಮೂರ್ತಿ‌ ಎಂದು ಕರೆಸಿಕೊಳ್ಳುವ ಯೋಗರಾಜ್ ಭಟ್ ಇನ್ನೊಂದು ಆಡಿಯೊದಲ್ಲಿ ಕೆಟ್ಟ ಪದ ಬಳಕೆಯೊಂದಿಗೆ ರಾಘವೇಂದ್ರ ಹುಣಸೂರು ಅವರಿಗೆ ಖಡಕ್‌ ವಾರ್ನಿಂಗ್‌ ನೀಡಿರುವುದು ಅಚ್ಚರಿ ಮೂಡಿಸಿದೆ. ಯೋಗರಾಜ್‌ ಭಟ್‌ ಮಾತನಾಡಿ ʻಅಲ್ಲ ರಾಘು, ಯಥಾಪ್ರಕಾರ ಫೋನ್ ತೆಗಿತಾ ಇಲ್ಲ, ಇಪ್ಪತ್ತು ದಿನದಿಂದ ಕಾಲ್ ಮಾಡುತ್ತಾ ಇದ್ದೇನೆ. ವಾಪಸ್ಸು ಫೋನ್ ಮಾಡಿಲ್ಲ. ಈಗ ಸರಿಯಾಗಿ ಉಗೀತಿನಿ, ಸರಿಯಾಗಿ ಕೇಳಿಸಿಕೊ. ಒಂದೂ ನೀನು ತುಂಬಾ ಬೆಳದಿದ್ದೀಯ ಎಂದು ಅರ್ಥ. ಇನ್ನೊಂದು ನಾವೆಲ್ಲ ನಿನ್ನ ಪಾಲಿಗೆ ಸತ್ತೋಗ್‌ ಬಿಟ್ಟಿದ್ದೇವೆ ಎಂದು ಅರ್ಥ. ನೀನು ಯಾವುದೇ ಕಾರಣಕ್ಕೂ ಬೆಳೆಯೋ ಮಗ ಅಲ್ಲ. ನಾವೂ ಸಾಯೋ ಮಕ್ಕಳು ಅಲ್ಲ. ಅದು ನಮಗೂ ಗೊತ್ತು. ನಿನ್ನ ಅವನತಿ ಶುರುವಾಗಿದೆ ಎಂದು ಕ್ಲೀನ್‌ ಆಗಿ ಹೇಳಬಹುದುʼʼ ಎಂದಿದ್ದಾರೆ.

ಚಿತ್ರಗಳ ವ್ಯವಹಾರವನ್ನು ಬೇರೆಯವರ ಜತೆ ಮಾಡುತ್ತೇನೆ
ʻʻಪದವಿಪೂರ್ವ, ಗರಡಿ, ಶಿವಣ್ಣನ ಕರಕಟ ದಮನಕ ಚಿತ್ರಗಳ ವ್ಯವಹಾರವನ್ನು ಬೇರೆಯವರ ಜತೆ ಮಾಡುತ್ತೇನೆ. ನಿನ್ನ ಜತೆಯಂತೂ ಮಾಡಲ್ಲ, ನಿನ್ನ ಜತೆ ವ್ಯವಹಾರಕ್ಕೆ ಇಳಿಯಲ್ಲ, ಫೋನ್ ಕೂಡ ಮಾಡಲ್ಲ, ಸಹವಾಸ ಸಾಕು, ನಿನ್ನನ್ನು ತಿದ್ದಿಕೋ ಅಂತಾನೂ ಹೇಳಲ್ಲ. ಏಕೆಂದರೆ ನೀನು ತುಂಬಾ ಹೈಟ್‌ಗೆ ಹೋಗಿದ್ದೀಯ ನಿನ್ನ ಬರಿಗೈನಲ್ಲಿ ಹಿಡಿದುಕೊಳ್ಳೋಕೆ ನನ್ನಂತ ಬಡವನಿಂದ ಆಗಲ್ಲ. ನಾವು ನೌಕರರು, ಮೇಸ್ತ್ರಿಗಳು, ಕಾರ್ಪೋರೇಷನ್ ಅವರು ಅನ್ಕೊಳಪ್ಪʼʼ ಎಂದು ಯೋಗರಾಜ್‌ ಭಟ್‌ ಮಾತನಾಡಿದ್ದಾರೆ.

ಇದನ್ನೂ ಓದಿ | Kannada New Movie | ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಸಿನಿಮಾ ಟೀಸರ್‌ ಔಟ್‌ : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹೇಳಿದ್ದೇನು?

Exit mobile version