Site icon Vistara News

Young Rebel Star ಅಭಿಷೇಕ್‌ ಅಂಬರೀಶ್‌ ‘ಕಾಳಿ’ ಫಸ್ಟ್‌ ಲುಕ್‌ ರಿವೀಲ್‌

Abhishek Ambarish

ಬೆಂಗಳೂರು: ನಟ, ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ 70 ನೇ ಜನ್ಮ ದಿನದ ಸಂದರ್ಭದಲ್ಲೇ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅವರ ಹೊಸ ಚಿತ್ರ ʼಕಾಳಿʼ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಪೈಲ್ವಾನ್‌, ಗಜಕೇಸರಿ, ಹೆಬ್ಬಲಿ ಚಿತ್ರವನ್ನು ನಿರ್ದೇಶಿಸಿದ ಕೃಷ್ಣ ಅವರು ಈ ಚಿತ್ರದಲ್ಲಿ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ಕಾವೇರಿ ನದಿಯ ಹೋರಾಟದ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಯನ್ನು ಬರೆದಿದ್ದಾರೆ. ಈ ಹೋರಾಟದ ದಿನಗಳಲ್ಲಿ ನಡೆದ ನೈಜ ಘಟನೆಯನ್ನೇ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕೆ ಸೂರಿ ಅವರ ನಿರ್ದೇಶನದ ʼಬ್ಯಾಡ್‌ ಮ್ಯಾನರ್ಸ್‌ʼ ಚಿತ್ರಿದಲ್ಲಿ ಅಭಿಷೇಕ್‌ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ | Kshetrapati : ಚಿತ್ರದ ಫಸ್ಟ್‌ ಲುಕ್‌ ರಿವೀಲ್‌

ʼಅಂಬರೀಶ್‌ ಅವರು ಜೀವಂತವಾಗಿ ಇನ್ನೂ ಇದ್ದಾರೆ ಎನ್ನುವ ರೀತಿಯಲ್ಲಿ ಅಭಿಮಾನಿಗಳು ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಅವರ ಅಭಿಮಾನ ಹೀಗೇ ಇರಲಿ. ಅಂಬರೀಶ್‌ ಅವರು ಅಷ್ಟು ಪ್ರೀತಿಯನ್ನು ಸಂಪಾದಿಸಿದ್ದಾರೆ. ಇಂದು ಕಾಳಿ ಪೋಸ್ಟ್‌ರ್‌ ರಿಲೀಸ್‌ ಆಗಿದೆ. ಕಾಳಿ ಚಿತ್ರೀಕರಣ ಇನ್ನೇನು ಶುರುವಾಗುತ್ತದೆʼ ಎಂದರು ಅಭಿಷೇಕ್‌.

ಅಭಿಷೇಕ್‌ ಅವರ ನಾಲ್ಕನೇ ಚಿತ್ರ ಇದಾಗಿದೆ. ಸದ್ಯಕ್ಕೆ ಮಹೇಶ್‌ ನಿರ್ದಶನದ ಹೊಸ ಸಿನಿಮಾ ʼಎಎ04ʼ , ಎಂದರೆ ಅಭಿಷೇಕ್‌ ಅಂಬರೀಶ್‌ ನಾಲ್ಕನೇ ಚಿತ್ರ ಎಂದಷ್ಟೇ ಕರೆಯಲಾಗಿದೆ.

ಅಕ್ಟೋಬರ್‌ 3 ರಂದು ಅಭಿಷೇಕ್‌ ಅವರ ಜನ್ಮದಿನವಾಗಿದ್ದು, ಹೆಚ್ಚಿನ  ವಿವರವನ್ನು ಬಹಿರಂಗಪಡಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ | ಬಾನದಾರಿಯಲ್ಲಿ: ರೀಷ್ಮಾ ನಾಣಯ್ಯ ಫಸ್ಟ್‌ ಲುಕ್‌ ರಿವೀಲ್‌

Exit mobile version