ಬೆಂಗಳೂರು: `ಆ್ಯಂಗ್ರಿ ರಾಂಟ್‌ಮ್ಯಾನ್’ (Angry Rantman) ಎಂದು ಜನಪ್ರಿಯವಾಗಿರುವ ಯೂಟ್ಯೂಬರ್ ಅಭ್ರದೀಪ್ ಸಹಾ (Abhradeep Saha) ಅಲಿಯಾಸ್ `ಆ್ಯಂಗ್ರಿ ರಾಂಟ್‌ಮ್ಯಾನ್’ ನಿಧನರಾಗಿದ್ದಾರೆ. ಅಭ್ರದೀಪ್ ಸಹಾ ಅವರಿಗೆ 27 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾ ಮೂಲದ ಯೂಟ್ಯೂಬರ್ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು ಎಂದು ವರದಿಯಾಗಿದೆ. 2018ರಲ್ಲಿ ತೆರೆಕಂಡಿದ್ದ ಯಶ್ ಅಭಿನಯದ ಕೆಜಿಎಫ್ 1 ಹಾಗೂ 2022ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಬಗ್ಗೆ ಹಾಡಿ ಹೊಗಳಿದ್ದರು. ಈ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳು, ಅಭ್ರದೀಪ್ ಸಹಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಭ್ರದೀಪ್ ಸಹಾ ಅವರಿಗೆ ಶಸ್ತ್ತ ಚಿಕಿತ್ಸೆ ಮಾಡಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಮಗನ ಆರೋಗ್ಯದ ಬಗ್ಗೆ ಏ. 15ರಂದು ತಂದೆ ಟ್ವೀಟ್ ಮಾಡಿ, ಅಭ್ರದೀಪ್ ಅಭಿಮಾನಿಗಳು ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡಬೇಕಷ್ಟೇ ಎಂದು ಬರೆದುಕೊಂಡಿದ್ದರು. ಅದರೆ, ತಂದೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮರುದಿನವೇ ಸಾಹಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: Self Harming: 7ನೇ ಮಹಡಿಯಿಂದ ಜಿಗಿದು ಯೂಟ್ಯೂಬರ್ ಜೋಡಿ ಆತ್ಮಹತ್ಯೆ
ಅಭ್ರದೀಪ್ ಸಹಾ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ರೀಡೆ ಮತ್ತು ಚಲನಚಿತ್ರಗಳ ಕುರಿತು ಹೆಚ್ಚಾಗಿ ಹೇಳುತ್ತಿದ್ದರು. ಇಂಡಿಯನ್ ಸೂಪರ್ ಲೀಗ್ (ISL)ನ ಹಲವಾರು ಫುಟ್‌ಬಾಲ್ ಕ್ಲಬ್‌ಗಳು ಸಹಾ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸಂತಾಪ ಸೂಚಿಸಿವೆ. ಅಭ್ರದೀಪ್ ಸಹಾ ಅವರು ಯೂಟ್ಯೂಬ್‌ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿದ್ದರು.