Site icon Vistara News

Yuva Film: ಅಪ್ಪು ದಾರಿಯಲ್ಲೇ ನಡೆದರಾ ʻಯುವʼ ರಾಜ್‌ಕುಮಾರ್‌? ಸಿನಿಮಾ ಟೈಟಲ್‌ ಹಿಂದಿರೋ ಸತ್ಯವೇನು?

Yuva Film

ಬೆಂಗಳೂರು: ರಾಘವೇದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್‌ ಚೊಚ್ಚಲ ಸಿನಿಮಾ ʻಯುವʼ (Yuva Film) ಟೀಸರ್‌ ಬಿಡುಗಡೆಗೊಂಡಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ ರಾಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ಮುಹೂರ್ತ ಕೂಡ ನೆರವೇರಿದೆ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಯುವ ಟೀಸರ್‌ ಬಿಡುಗಡೆಯಾದಂತೆ ಟ್ವೀಟ್‌ನಲ್ಲಿ ದೊಡ್ಮನೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಚಿತ್ರದ ಅಣ್ಣಾವ್ರ ಫೋಟೊ ಜತೆ ‘ಯುವ’ ಫಸ್ಟ್ ಲುಕ್ ಪೋಸ್ಟರ್ ಕೊಲಾಜ್ ಮಾಡಿ ಶೇರ್ ಮಾಡಿದ್ದಾರೆ. ಇದೀಗ ಯುವ ಅವರ ಕಣ್ಣುಗಳು ಅಣ್ಣಾವ್ರ ರೀತಿ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಅಪ್ಪು ದಾರಿಯಲ್ಲೇ…

20 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ‘ಅಪ್ಪು’ ಆಗಿ ಚಿತ್ರರಂಗದಲ್ಲಿ ಖ್ಯಾತಿ ಪಡೆದರು. ಮನೆಯಲ್ಲಿ ಎಲ್ಲರೂ ಪುನೀತ್ ರಾಜ್‌ಕುಮಾರ್ ಅವರನ್ನು ಅಪ್ಪು ಎಂದೇ ಕರೆಯುತ್ತಿದ್ದರು. ಹಾಗಾಗಿ ತಮ್ಮದೇ ಹೆಸರಿನ ಟೈಟಲ್ ಸಿನಿಮಾದಲ್ಲಿ ನಟಿಸಿ ಪುನೀತ್ ಗೆದ್ದರು. ಈಗ ಯುವ ಕೂಡ ತಮ್ಮದೇ ಹೆಸರಿನ ಟೈಟಲ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇದೀಗ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುತ್ತಿದ್ದಾರೆ ಅಭಿಮಾನಿಗಳು. ಪೋಸ್ಟರ್‌ನಲ್ಲಿ ಯುವ ಜಾವಾ ಬೈಕ್ ಏರಿ ಲುಕ್‌ ರಿವೀಲ್‌ ಮಾಡಿದ್ದಾರೆ. ಅವರ ಪೋಸ್ಟರ್‌ನಲ್ಲಿ ಇದ್ದ ಬೈಕ್ ನಂಬರ್(M 144) ಹಾಗೂ ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ಕಾರುಗಳ ನಂಬರ್ ಸೇಮ್ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Kannada New Movie: ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 12 ಸಿನಿಮಾಗಳು ರಿಲೀಸ್‌!

https://twitter.com/RRK_Official_/status/1631781552538652673?s=20

ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ. ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ, ಯುವ ರಾಜ್‌ಕುಮಾರ್‌ ಅವರಲ್ಲಿ ಅಪ್ಪುವನ್ನು ನೋಡಲು ಬಯಸುತ್ತೇವೆ ಎಂದು ಅಭಿಮಾನಿಗಳು ಹೇಳಿಕೊಂಡು ಭಾವುಕರಾಗಿದ್ದರು.

Exit mobile version