Site icon Vistara News

Sapthami Gowda: ʻಯುವʼ ಸಿನಿಮಾದಲ್ಲಿನ ಪಾತ್ರ ಬಹಿರಂಗ ಪಡಿಸಿದ ಹೊಂಬಾಳೆ; ಇದು ಸಪ್ತಮಿ ಗೌಡ ಬರ್ತಡೇ ಸ್ಪೆಷಲ್‌!

Yuva Movie

ಬೆಂಗಳೂರು: ಕಾಂತಾರ ಸಿರಿ ಸಪ್ತಮಿ ಗೌಡ (Sapthami Gowda) ಅವರಿಗೆ ಜೂನ್‌ 8ರಂದು ಜನುಮದಿನದ ಸಂಭ್ರಮ. ಈ ಶುಭದಿನದಂದು ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್‌ ಅವರ ಚೊಚ್ಚಲ ಸಿನಿಮಾ ʻಯುವʼ (Yuva Film) ಸಿಹಿ ಸುದ್ದಿ ನೀಡಿದೆ. ಈ ಸಿನಿಮಾದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಸಪ್ತಮಿ ಅವರ ಯಾವ ರೀತಿಯ ಪಾತ್ರ ಮತ್ತು ಪಾತ್ರದ ಹೆಸರೇನು ಎನ್ನುವುದನ್ನು ರಿವೀಲ್ ಮಾಡಿದೆ.

ಈ ಸಿನಿಮಾದಲ್ಲಿ ಯುವ ರಾಜಕುಮಾರ್ (Yuvraj Kumar) ನಾಯಕನಾಗಿ ನಟಿಸುತ್ತಿದ್ದಾರೆ. ಸಪ್ತಮಿ ಗೌಡ ಅವರು ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ ರಾಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.  ಈ ವರ್ಷದ ಡಿಸೆಂಬರ್ 22ಕ್ಕೆ ʻಯುವʼ ಚಿತ್ರ ತೆರೆಗೆ ಅಬ್ಬರಿಸಲಿದೆ.

ʻಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ಸಪ್ತಮಿ. ಡಾಲಿಗೆ ನಾಯಕಿಯಾಗಿ ಮೊದಲ ಸಿನಿಮಾದಲ್ಲೇ ಸೈ ಎನಿಸಿಕೊಂಡರು. ಬಳಿಕ `ಕಾಂತಾರ’ (Kantara) ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದ ಬಳಿಕೆ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ.

ಇದನ್ನೂ ಓದಿ: Sapthami Gowda: ಯುವ ರಾಜ್‌ಕುಮಾರ್‌ಗೆ ಜೋಡಿಯಾದ ಸಪ್ತಮಿ ಗೌಡ: ತೆರೆ ಮೇಲೆ ಮಿಂಚಲಿದ್ದಾರೆ ಯುವ-ಸಪ್ತಮಿ

ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಬಾಲಿವುಡ್‌ಗೆ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದು, ಈ ಬಾರಿಯ ಸಂಕ್ರಾಂತಿಯನ್ನು ʻದಿ ವ್ಯಾಕ್ಸಿನ್ ವಾರ್ʼ ಶೂಟಿಂಗ್ ಸೆಟ್ ನಲ್ಲೇ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದು ಬಯಸದೇ ಬಂದಿರುವ ಭಾಗ್ಯ ಎಂದೂ ಅವರು ಹೇಳಿಕೊಂಡಿದ್ದರು.

ಅಷ್ಟೇ ಅಲ್ಲದೇ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಅವರ ಕಾಳಿ ಸಿನಿಮಾದಲ್ಲಿಯೂ ಸಪ್ತಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪೈಲ್ವಾನ್‌, ಗಜಕೇಸರಿ, ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿರುವ ಕೃಷ್ಣ ಅವರು ಕಾಳಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

Exit mobile version