Site icon Vistara News

Yuva Rajkumar: ಯುವ ರಾಜ್‌ಕುಮಾರ್‌ ಮೊದಲ ಸಿನಿಮಾ ಟೈಟಲ್‌ ಅನೌನ್ಸ್‌: `ಯುವ’ ಪರ್ವ ಆರಂಭ

Yuva Rajkumar

ಬೆಂಗಳೂರು: ಯುವ ರಾಜ್‌ಕುಮಾರ್ (Yuva Rajkumar) ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. (ಫೆ.3) ಇದೀಗ ಯುವರಾಜ್‌ಕುಮಾರ್‌ ಅವರ ಚೊಚ್ಚಲ ಸಿನಿಮಾ ಶೀರ್ಷಿಕೆ ರಿವೀಲ್ ಆಗಿದೆ. ʻಯುವʼ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಮಿಂಚಲು ಬರುತ್ತಿದ್ದಾರೆ ದೊಡ್ಮನೆ ಹುಡುಗ.

ಶೀರ್ಷಿಕೆ ಅನಾವರಣ ಆಗುವ ಮುಂಚೆಯ ಶೇಷಾದ್ರಿಪುರಂನಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಗೆ ಯುವ ಮತ್ತು ಚಿತ್ರತಂಡ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂತೋಷ್ ಆನಂದ್ ರಾಮ್- ಯುವ ಕಾಂಬಿನೇಷನ್ ಈ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿವಾಗ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ವಿಜಯ್‌ ಕಿರಗಂದೂರು ಸಾಥ್‌ ನೀಡಿದ್ದಾರೆ.

ಇದನ್ನೂ ಓದಿ: Real Star Upendra | ಚಂದನವನಕ್ಕೆ ಸೂಪರ್ ಸ್ಟಾರ್‌ ಮಕ್ಕಳ ಗ್ರ್ಯಾಂಡ್‌ ಎಂಟ್ರಿ: ಹೊಂಬಾಳೆ ಫಿಲ್ಮ್ಸ್‌ಗೆ ಮುಂದಿನ ನಾಯಕಿ ಉಪ್ಪಿ ಪುತ್ರಿ?

Yuva Rajkumar

ಈ ಚಿತ್ರದ ಟೀಸರನ್ನು ಮಾರ್ಚ್‌ 17 ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ರಿಲೀಸ್‌ ಮಾಡಲಾಗುವುದು ಎನ್ನಲಾಗುತ್ತಿದೆ. ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ, ಯುವ ರಾಜ್‌ಕುಮಾರ್‌ ಅವರಲ್ಲಿ ಅಪ್ಪುವನ್ನು ನೋಡಲು ಬಯಸುತ್ತೇವೆ ಎಂದು ಅಭಿಮಾನಿಗಳು ಹೇಳಿಕೊಂಡು ಭಾವುಕರಾಗಿದ್ದರು.

Exit mobile version