Site icon Vistara News

Yuva Rajkumar: ʻಸಲಾರ್‌ʼ ರಿಲೀಸ್‌ ದಿನ ಆಗ್ತಿಲ್ಲ ʻಯುವʼ ರಾಜ್‌ಕುಮಾರ್ ಚಿತ್ರ; ಹೊಸ ಡೇಟ್‌ ಅನೌನ್ಸ್‌!

Yuva Rajkumar Yuva

ಬೆಂಗಳೂರು: ಯುವ ರಾಜ್‌ಕುಮಾರ್ (Yuva Rajkumar) ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. ಯುವ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಮುಂಚೆ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿತ್ತು. ‘ಯುವ’ ಸಿನಿಮಾವು ಡಿಸೆಂಬರ್ 22ಕ್ಕೆ ಬದಲಿಗೆ 2024ರ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಹೊಸ ಪೋಸ್ಟರ್​ ಮೂಲಕ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

ಯುವ ರಾಜ್‌ಕುಮಾರ್‌ಗೆ ‘ಕಾಂತಾರ’ ಸುಂದರಿ ಸಪ್ತಮಿ ಗೌಡ (Sapthami Gowda) ನಾಯಕಿಯಾಗಲಿದ್ದಾರೆ. ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಆದ್ಯತೆಯಿದ್ದು, ನಟಿ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ-ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್‌ ರಾಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.  

ಸೆಪ್ಟೆಂಬರ್ 29ಕ್ಕೆ ಬಿಡುಗಡೆ ಆಗಬೇಕಿದ್ದ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟು, ಡಿಸೆಂಬರ್ 22ಕ್ಕೆ ಬಿಡುಗಡೆ ಆಗುತ್ತಿರುವ ಕಾರಣ, ‘ಯುವ’ ಸಿನಿಮಾವನ್ನು ಮಾರ್ಚ್ 28ಕ್ಕೆ ಬಿಡುಗಡೆ ಮಾಡುವ ನಿರ್ಧಾರವನ್ನು ನಿರ್ಮಾಣ ಸಂಸ್ಥೆ ಮಾಡಿದೆ.

ಇದನ್ನೂ ಓದಿ: Karnataka Bandh : ಬಂದ್ ನಡುವೆ ಯುವ ರಾಜ್‌ಕುಮಾರ್‌ ಸಿನಿಮಾ ಶೂಟಿಂಗ್‌; ಸೆಟ್‌ಗೆ ನುಗ್ಗಿದ ಹೋರಾಟಗಾರರು

ಹೊಂಬಾಳೆ ಫಿಲ್ಮ್ಸ್‌ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಬಘೀರ’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ‘ಸಲಾರ್’ ಆ ಬಳಿಕ ಕ್ರಮವಾಗಿ ಮಲಯಾಳಂ ಸಿನಿಮಾ ‘ಟೈಸನ್’, ತಮಿಳಿನ ‘ರಘು ತಾತ’, ರಕ್ಷಿತ್ ಶೆಟ್ಟಿಯ ‘ರಿಚರ್ಡ್ ಆಂಟೋನಿ’ ಸಿನಿಮಾಗಳು ಬಿಡುಗಡೆ ಆಗುವ ಸಾಧ್ಯತೆ ಇವೆ.

Exit mobile version