Site icon Vistara News

Yuva Rajkumar: ʻಯುವʼನ ಆರ್ಭಟ ಶುರು: ಸಿನಿಮಾ ನೋಡಿ ಬೆಳ್ಳುಳ್ಳಿ ಕಬಾಬ್‌ ಚಂದ್ರು ಏನಂದ್ರು?

Yuva Rajkumar Yuva cutout

ಬೆಂಗಳೂರು: ಸಂತೋಷ್ ಆನಂದ್‌ರಾಮ್‌ ನಿರ್ದೇಶನ ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ (Yuva Rajkumar) ಚೊಚ್ಚಲ ಸಿನಿಮಾ ‘ಯುವ’ ಇಂದು (ಮಾರ್ಚ್ 29) ರಿಲೀಸ್ ಆಗಿದೆ. ಬೆಂಗಳೂರಿನ ಸಿದ್ದೇಶ್ವರ ಥಿಯೇಟರ್​ನಲ್ಲಿ ಮುಂಜಾನೆಯಿಂದಲೇ ಫ್ಯಾನ್ಸ್​ ಶೋ ಪ್ರದರ್ಶನ ಕಂಡಿದೆ. ರಾಜ್ಯದಲ್ಲಿ 350ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಇದೀಗ ಸಿನಿಮಾ ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು ಬೆಳ್ಳುಳ್ಳಿ ಕಬಾಬ್‌ ಚಂದ್ರು ಸಿನಿಮಾ ನೋಡಿ ʻಒನ್ ಮೋರ್‌ ಒನ್‌ ಮೋರ್‌ ಅಂತಾನೆ ಇರಬೇಕುʼ ಎಂದು ಹೊಗಳಿದ್ದಾರೆ.

ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ ಎದುರು ಯುವ ಅವರ ಕಟೌಟ್​ಗಳನ್ನು ಹಾಕಲಾಗಿದೆ. ಜ್ಯೂನಿಯರ್‌ ಅಪ್ಪು ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ಯುವ (Yuva Rajkumar), ಅದ್ಧೂರಿಯಾಗಿ ದರ್ಶನ ಕೊಟ್ಟಿದ್ದಾನೆ. ಇನ್ನು ಸಿನಿಮಾದಲ್ಲಿ ಯುವನ “ಒಬ್ಬನೇ ಶಿವ ಒಬ್ಬನೇ ಯುವ” ಹಾಡಿಗೆ ಸ್ಕ್ರೀನ್ ಮುಂದೆ ದೊಡ್ಮನೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದೀಗ ಸಿನಿಮಾ ಕುರಿತು ಪ್ರೇಕ್ಷಕರು ಮೆಚ್ಚುಗೆ ಹೊರ ಹಾಕಿದ್ದಾರೆ. ಒಬ್ಬ ಅಭಿಮಾನಿ ʻʻಖಂಡಿತವಾಗಿ ಸಿನಿಮಾ ನಮ್ಮನ್ನು ಭಾವುಕರನ್ನಾಗಿಸುತ್ತದೆʼʼಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hookah Bar: ಕರ್ನಾಟಕದಲ್ಲಿ ಹುಕ್ಕಾ ಬಾರ್ ಸಂಪೂರ್ಣ ನಿಷೇಧ; ರಾಜ್ಯ ಸರ್ಕಾರ ಆದೇಶ

ಇನ್ನು ಬೆಳ್ಳುಳ್ಳಿ ಕಬಾಬ್‌ ಚಂದ್ರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻಸಿನಿಮಾ ತುಂಬ ಚೆನ್ನಾಗಿದೆ. ಫ್ಯಾಮಿಲಿ ಕರ್ಕೊಂಡು ಬರ್ತಾ ಇರಬೇಕು, ನೋಡ್ತಾ ಇರಬೇಕು. ಫೈಟ್ಸ್‌ ಡ್ಯಾನ್ಸ್‌ ಎಲ್ಲ ಸೂಪರ್‌ ಆಗಿದೆ. ತುಂಬ ಚೆನ್ನಾಗಿದೆ. ಒನ್ ಮೋರ್‌ ಒನ್‌ ಮೋರ್‌ ಅಂತಾನೆ ಇರಬೇಕು. ಒಟ್ಟಾರೆಯಾಗಿ ಒಂದು ಕುಟುಂಬ ಕುಳಿತು ನೋಡುವ ಸಿನಿಮಾ. ಹೊಸ ಹೀರೋ ಅಲ್ಲ. ಹಳೇ ಹೀರೋ. ಅವ್ರು ಬಂದಿರೋದು ಎಲ್ಲಿಂದ ಗೊತ್ತಲ್ಲ? ಫೈಟ್‌ ನೋಡುತ್ತಿದ್ದರೆ ಬಾಸ್‌ ನೆನಪಾಗುತ್ತೆʼʼ ಎಂದಿದ್ದಾರೆ ಬೆಳ್ಳುಳ್ಳಿ ಕಬಾಬ್‌ ಚಂದ್ರು.

ಇದನ್ನೂ ಓದಿ: Bellulli Kabab Chandru: `ರಾಹುಲ್ಲಾ ಅಲ್ಲ.. ಸುನಿಲ್ಲಾ’ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಎಂದ ಬೆಳ್ಳುಳ್ಳಿ ಕಬಾಬ್​ ಚಂದ್ರು!

ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಯುವ ರಾಜ್‌ಕುಮಾರ್ (Yuva Rajkumar) ಬಣ್ಣ ಹಚ್ಚಿದ್ದಾರೆ. ‘ಯುವ’ ಚಿತ್ರದಲ್ಲಿ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದಾರೆ. ಕಿಶೋರ್, ಅಚ್ಯುತ್‌ ಕುಮಾರ್ ಹಾಗೂ ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.

“ಒಬ್ಬನೇ ಶಿವ ಒಬ್ಬನೇ ಯುವ” ಸಾಂಗ್‌ಗೆ ಮೆಚ್ಚುಗೆ

ಈ ಚಿತ್ರದ ಮೊದಲ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಸುಮಾರು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.

Exit mobile version