Site icon Vistara News

Zeenat Aman: 71ನೇ ವಯಸ್ಸಲ್ಲಿ ‘ದಮ್‌ ಮಾರೊ ದಮ್‌’ ಖ್ಯಾತಿಯ ಜೀನತ್‌ ಅಮಾನ್‌ ಇನ್‌ಸ್ಟಾಗ್ರಾಂಗೆ ಎಂಟ್ರಿ, ಸ್ವಾಗತ ಎಂದ ಫ್ಯಾನ್ಸ್

Zeenat Aman Instagram

#image_title

ಮುಂಬೈ: ಬಾಲಿವುಡ್‌ನ ಹರೇ ರಾಮ ಹರೇ ಕೃಷ್ಣ ಸಿನಿಮಾದ ‘ದಮ್‌ ಮಾರೊ ದಮ್‌’ ಹಾಡು, ಹಾಡಿಗೆ ಹೆಜ್ಜೆ ಹಾಕಿದ ಜೀನತ್‌ ಅಮಾನ್‌ (Zeenat Aman) ಎಂಬ ಮೋಹಕ ನಟಿ ಯಾರಿಗೆ ನೆನಪಿಲ್ಲ ಹೇಳಿ. ಸಾಲು ಸಾಲು ಸಿನಿಮಾಗಳು, ಹಿಟ್‌ ಹಾಡುಗಳು, ಮನಮೋಹಕ ಸೌಂದರ್ಯದಿಂದಲೇ ೧೯೭೦ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆಗೆ ಕಿಚ್ಚುಹಚ್ಚಿದ್ದ ನಟಿ ಜೀನತ್‌ ಅಮಾನ್‌ ಅವರು ಕೊನೆಗೂ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ.

ಬಾಲಿವುಡ್‌ ನಟಿಯು ತಮ್ಮ ೭೧ನೇ ವಯಸ್ಸಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು, ಫೋಟೊಗಳನ್ನು ಅಪ್‌ಲೋಡ್ ಮಾಡುತ್ತಲೇ ಅವರ ಅಭಿಮಾನಿಗಳು ನಟಿಯನ್ನು ಸಾಮಾಜಿಕ ಜಾಲತಾಣಕ್ಕೆ ಸ್ವಾಗತಿಸಿದ್ದಾರೆ. ಮೊದಲ ಪೋಸ್ಟ್‌ನಲ್ಲಿಯೇ ನಟಿಯು ಸಿನಿಮಾ, ಫ್ಯಾಷನ್‌, ಯುವ ಪೀಳಿಗೆ, ಮೇಕಪ್‌, ಪ್ರತಿಭೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಖಾತೆ ತೆರೆಯುತ್ತಲೇ ಸಾವಿರಾರು ಜನ ನಟಿಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ.

ಸತ್ಯಂ ಶಿವಂ ಸುಂದರಂ, ಡಾನ್‌, ಯಾದೋ ಕಿ ಬಾರಾತ್‌, ಹರೇ ರಾಮ ಹರೇ ಕೃಷ್ಣ, ಕುರ್ಬಾನಿ, ಕುರ್ಬಾನಿ, ದೋಸ್ತಾನಾ ಸೇರಿ ಹಲವು ಸಿನಿಮಾಗಳ ಮೂಲಕ ಜೀನತ್‌ ಅಮಾಣ್‌ ಅವರು ದೇಶದ ಮನೆಮಾತಾಗಿದ್ದರು. ಇದಾದ ಬಳಿಕ ಅವರು ಸಿನಿಮಾದಿಂದ ಬ್ರೇಕ್‌ ಪಡೆದಿದ್ದರು. ಇತ್ತೀಚೆಗೆ ಕೆಲ ವಿಶೇಷ ಪಾತ್ರಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Chahat Khanna: ನಟಿ ಚಾಹತ್‌ ಖನ್ನಾಗೆ 100 ಕೋಟಿ ರೂ. ಲೀಗಲ್‌ ನೋಟಿಸ್‌ ಕಳುಹಿಸಿದ ಸುಕೇಶ್ ಚಂದ್ರಶೇಖರ್‌ ವಕೀಲ

Exit mobile version