ಮಂಗಳೂರು: ಪ್ರಥಮ ಪಿಯುಸಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ (1st PUC Result 2023 ) ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿಯೇ ತಮ್ಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲರ ಸಂಘ (ಡಿಕೆಪಿಯುಸಿಪಿಎ) ಪ್ರಾರಂಭಿಸಿರುವ ವೆಬ್‌ಸೈಟ್‌ನಲ್ಲಿ ಎಲ್ಲ ಕಾಲೇಜುಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ರಿಜಿಸ್ಟರ್ ನಂಬರ್ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್ ಆಗಿ ತಮ್ಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಫಲಿತಾಂಶದ ಪ್ರಿಂಟ್ ಔಟ್ ತೆಗೆದುಕೊಳ್ಳಲೂ ಅವಕಾಶ ನೀಡಲಾಗಿದೆ.
ಕೋವಿಡ್ ಕಾರಣದಿಂದ 2020 ರಲ್ಲಿ ಫಲಿತಾಂಶ ಪ್ರಕಟಿಸಲು ತೊಂದರೆಯಾದ ಕಾರಣ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲರ ಸಂಘವು ʻಸುವಿದ್ಯಾʼ ಎಂಬ ವೆಬ್‌ಸೈಟ್ ಆರಂಭಿಸಿತ್ತು. ಆಗಿನಿಂದಲೂ ವೆಬ್‌ಸೈಟ್‌ನಲ್ಲಿಯೇ ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ.
ಫಲಿತಾಂಶ ನೋಡಲು ವೆಬ್‌ಸೈಟ್ ವಿಳಾಸ ಇಂತಿದೆ; https://result.dkpucpa.com/
ರಾಜ್ಯದ ಇತರ ಜಿಲ್ಲೆಗಳಲ್ಲಿ ಕಾಲೇಜುಗಳಲ್ಲಿಯೇ ಈ ಫಲಿತಾಂಶ ಪ್ರಕಟಿಸಲಾಗುತ್ತದೆ. ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರಜಿಲ್ಲೆಗಳಲ್ಲಿಯೂ ಈ ರೀತಿ ವೆಬ್‌ಸೈಟ್ ಮೂಲಕ ಫಲಿತಾಂಶ ಪ್ರಕಟಿಸುವ ಪ್ರಯೋಗಗಳು ನಡೆದಿವೆ.
ಈ ವರ್ಷ ಫೆಬ್ರವರಿ 20ರಿಂದ ಮಾ.4 ರವರೆಗೆ ಪ್ರಥಮ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪ್ರಥಮ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಅದಕ್ಕೂ ಮೊದಲು ನಡೆಸಲಾಗಿತ್ತು. ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಅಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಸಿದ್ಧಪಡಿಸಿ ಒದಗಿಸಲಾಗಿರುತ್ತದೆ. ಫಲಿತಾಂಶವನ್ನು ಕಾಲೇಜುಗಳಲ್ಲಿಯೇ ಪ್ರಕಟಿಸಲಾಗುತ್ತಿದೆ.
ಇದನ್ನೂ ಓದಿ: PUC Exam 2023 : ದ್ವಿತೀಯ ಪಿಯುಸಿ ಪರೀಕ್ಷೆ; ವಿಷಯವಾರು ಮಾದರಿ ಉತ್ತರ ಪ್ರಕಟ