ಬೆಂಗಳೂರು: ಜೂನ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-3ರ (2nd PUC Exam 3) ಶುಲ್ಕ ಪಾವತಿಸಲು ಇಂದೇ (ಜೂ.3) ಕೊನೆ ದಿನವಾಗಿದೆ. ವಿದ್ಯಾರ್ಥಿಗಳು ದಂಡಸಹಿತ ಶುಲ್ಕ ಪಾವತಿ ಮಾಡಬೇಕಾಗಿದ್ದು, ದಿನಕ್ಕೆ 50 ರೂ.ಅಂತೆ ಪಾವತಿಸಬೇಕಾಗಿದೆ.
ಈ ಹಿಂದೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 28ಕ್ಕೆ ಕೊನೆ ದಿನವಾಗಿತ್ತು. ಆದರೆ ಪೋಷಕರು ಹಾಗೂ ವಿದಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಪರೀಕ್ಷೆಗೆ ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿತ್ತು. ಇದು ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವಾಗಿದ್ದು, ಮುಂದೆ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಶಾಲಾ ಶಿಕ್ಷಿಣ ಇಲಾಖೆ ಸೂಚನೆ ನೀಡಿತ್ತು.
ಅದರಂತೆ ವಿದ್ಯಾರ್ಥಿಗಳು ತಮ್ಮ ಕಾಲೇಜು ಅಥವಾ KSEAB ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬಹುದು. 2023-24ನೇ ಸಾಲಿನ ಫಲಿತಾಂಶ ಪೂರ್ಣಗೊಂಡಿರದ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ಹೊಸಬರು ಮತ್ತು ಖಾಸಗಿಯಾಗಿ ನೋಂದಾವಣೆಯಾದ ವಿದ್ಯಾರ್ಥಿಗಳು ಮಂಡಲಿಯ ವೆಬ್‌ಸೈಟ್ ಮೂಲಕ ನೇರವಾಗಿ ಪರೀಕ್ಷೆ 3ಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಮೊದಲು ಮೇ 23ರಿಂದ 28ರವರಗೆ ದಂಡ ರಹಿತ ನೋಂದಣಿ ಮಾಡಿಕೊಳ್ಳಬಹುದಿತ್ತು. ಒಂದು ವೇಳೆ ಮೇ 28ರೊಳಗೆ ಅರ್ಜಿ ಸಲ್ಲಿಸದೇ ಹೋದರೆ ಮೇ 29ರಿಂದ 30ರವರೆಗೆ ದಂಡ ಸಹಿತ ನೋಂದಣಿ ಮಾಡಿಕೊಳ್ಳಬೇಕಾಗಿತ್ತು. ಆದರೆ ವಿದ್ಯಾರ್ಥಿಗಳ ಮನವಿ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿತ್ತು. ಸದ್ಯ ಜೂನ್ 3ರಂದು ದಂಡ ಸಹಿತ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅಂದಹಾಗೇ ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ಮೇ 31 ದಂಡರಹಿತ ಕೊನೆ ದಿನವಾಗಿತ್ತು. ದಂಡ ಸಹಿತ ಜೂ. 1 ರಿಂದ 3 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಕೆಎಸ್‌ಇಎಬಿ ತಂತ್ರಾಂಶದಲ್ಲಿ ಸಲ್ಲಿಸಬೇಕು. ಇದಕ್ಕೆ ದಂಡ ರಹಿತ ಜೂ.3ರಂದು ಕೊನೆ ದಿನವಾದರೆ, ದಂಡಸಹಿತ ಜೂ.5ರಂದು ನಿಗಧಿ ಮಾಡಲಾಗಿದೆ.
2024ರ ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕವನ್ನು ನಿಗಧಿಸಲಾಗಿದೆ. ಒಂದು ವಿಷಯಕ್ಕೆ 140 ರೂ ಹಾಗೂ ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ನಿಗದಿ ಮಾಡಲಾಗಿದೆ. ಇನ್ನೂ ಫಲಿತಾಂಶ ತಿರಸ್ಕರಣಾ ಪದ್ಧತಿಯನ್ನು ರದ್ದುಪಡಿಸಲಾಗಿದೆ. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024ರ ದ್ವಿತೀಯ ಪಿಯುಸಿ ಪರೀಕ್ಷೆ 3ರಲ್ಲಿ ಹಾಜರಾಗಬೇಕಾದರೆ ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಬೇಕಾಗುತ್ತದೆ.
ಇದನ್ನೂ ಓದಿ: Stock Market News: ಮೋದಿ ಸರಕಾರ ಪುನರಾಗಮನಕ್ಕೆ ಷೇರು ಮಾರುಕಟ್ಟೆ ಹರ್ಷ, ಸೆನ್ಸೆಕ್ಸ್- ನಿಫ್ಟಿ ದಾಖಲೆ ಏರಿಕೆ
ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ ಹೀಗಿದೆ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (2nd PUC Exam) 3ನೇ ಪೂರಕ ಪರೀಕ್ಷೆಯು ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್ 24 ರಿಂದ ಜುಲೈ 5ರವರೆಗೆ ಪರೀಕ್ಷೆಯು ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಹಾಗೂ ಮಧ್ಯಾಹ್ನ 2:15ರಿಂದ 4:30 ಪರೀಕ್ಷೆಯ ಸಮಯವಾಗಿದೆ.
ದಿನಾಂಕ- ವಿಷಯ
ಜೂನ್ 24- ಕನ್ನಡ, ಅರೇಬಿಕ್
ಜೂನ್ 25- ಇಂಗ್ಲೀಷ್
ಜೂನ್ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಜೂನ್ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಜೂನ್ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಜೂನ್ 29 – ಇತಿಹಾಸ, ಭೌತಶಾಸ್ತ್ರ
ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
ಜುಲೈ 4- ಹಿಂದಿ
ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ,ರೀಟೈಲ್, ಆಟೋ ಮೊಬೈಲ್, ಬ್ಯೂಟಿ ಮತ್ತು ವೆಲ್‌ನೆಸ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ