Site icon Vistara News

CBSE 10th Result | ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಘೋಷಣೆ; ಚೆಕ್‌ ಮಾಡುವ ವಿಧಾನ ಹೇಗೆ?

CBSE 10

ನವ ದೆಹಲಿ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ 2ಗಂಟೆಗೆ ಪ್ರಕಟವಾಗಿದೆ. ವಿದ್ಯಾರ್ಥಿಗಳು parikshasangam.cbse.gov.in, cbse.gov.in, results.cbse.nic.in, results.nic.in ಮತ್ತು results.gov.in ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ನೋಡಬಹುದು. 7738299899 ಈ ನಂಬರ್‌ ಮೂಲಕವೂ ರಿಸಲ್ಟ್‌ ಪಡೆಯಬಹುದು. ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳು ಏಪ್ರಿಲ್‌ 26ರಿಂದ ಮೇ 24ವರೆಗೆ ನಡೆದಿತ್ತು.

ಫಲಿತಾಂಶ ವೀಕ್ಷಣೆ ಹೇಗೆ?
1. results.cbse.nic.in ವೆಬ್‌ಸೈಟ್‌ಗೆ ಮೊದಲು ಲಾಗಿನ್‌ ಆಗಿ.
2. ಅಲ್ಲಿ ಕಾಣುವ CBSE 10th term 2 result 2022 ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
3.ಅಲ್ಲಿ ಕಾಣುವ ಲಾಗಿನ್‌ ಪೇಜ್‌ನಲ್ಲಿ ನಿಮ್ಮ ರೋಲ್‌ ನಂಬರ್‌, ಡೇಟ್‌ ಆಫ್‌ ಬರ್ತ್‌ ಮತ್ತು ಶಾಲೆಯ ನಂಬರ್‌ ಹಾಕಿ ಸಬ್‌ಮಿಟ್‌ ಮಾಡಿ.
4.ಆಗ ಸ್ಕ್ರೀನ್‌ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ. ಆ ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿ.

ಡಿಜಿ ಲಾಕರ್‌ನಲ್ಲಿ ನೋಡೋದು ಹೇಗೆ?
1. digilocker.gov.inಗೆ ಲಾಗಿನ್‌ ಆಗಿ.
2. Central Board Of Secondary Education ಮೇಲೆ ಕ್ಲಿಕ್‌ ಮಾಡಿ.
3. ಅದರಲ್ಲಿ CBSE Class 10 result 2022 ಮೇಲೆ ಕ್ಲಿಕ್‌ ಮಾಡಿ.
4 ಆಗ ನಿಮ್ಮ ರಿಸಲ್ಟ್‌ ಅಲ್ಲಿ ಕಾಣಿಸುತ್ತದೆ.

ಇದರೊಂದಿಗೆ cbse10 ಎಂದು ಟೈಪ್‌ ಮಾಡಿ ಅದರ ಎದರು ನಿಮ್ಮ ರೋಲ್‌ ನಂಬರ್‌, ಶಾಲೆಯ ನಂಬರ್‌ ಮತ್ತು ಪರೀಕ್ಷಾ ಕೇಂದ್ರದ ನಂಬರ್‌ ಹಾಕಿ ನಂತರ 7738299899ಗೆ ಎಸ್‌ಎಂಎಸ್‌ ಕಳಿಸಿದರೆ, ನಿಮ್ಮ ಮೊಬೈಲ್‌ಗೆ ಫಲಿತಾಂಶ ಬರುತ್ತದೆ.

ಇದನ್ನೂ ಓದಿ: CBSE Result 2022 | ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ; ಶೇ. 92.71ರಷ್ಟು ವಿದ್ಯಾರ್ಥಿಗಳು ಪಾಸ್‌

Exit mobile version