ನವ ದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. ಶೇ. 92.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗಳಾದ results.cbse.nic.in and cbse.gov.in.ಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಅಷ್ಟೇ ಅಲ್ಲ, ಡಿಜಿ ಲಾಕರ್ (DigiLocker)ನಲ್ಲಿ ಕೂಡ ಲಾಗಿನ್ ಆಗುವ ಮೂಲಕ ರಿಸಲ್ಟ್ ನೋಡಬಹುದು.
ಈ ಸಲ ಕೇರಳದ ತಿರುವನಂತಪುರಂ ಅತ್ಯುತ್ತಮ ಸಾಧನೆ ( ಶೇ.98.83)ಮಾಡಿದ್ದರೆ, ಉತ್ತರ ಪ್ರದೇಶದ ಪ್ರಯಾಗ್ ರಾಜ್ ಫಲಿತಾಂಶ ಕಳಪೆ (ಶೇ.83.71) ಆಗಿದೆ. ಪರೀಕ್ಷೆಯಲ್ಲಿ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ.95ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದರೆ, 1.34 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಸ್ಕೋರ್ ಮಾಡಿದ್ದಾರೆ. ಶೇ. 94.54ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾಗಿದ್ದರೆ, ಗಂಡುಮಕ್ಕಳ ಪಾಸ್ ಪ್ರಮಾಣ ಶೇ.91.25ರಷ್ಟಿದೆ.
ಫಲಿತಾಂಶ ವೀಕ್ಷಣೆ ಹೇಗೆ?
1. cbse.gov.in, cbseresults.nic.in ಅಥವಾ results.gov.in. ವೆಬ್‌ಸೈಟ್‌ಗೆ ಹೋಗಿ.
2. ಹೋಂ ಪೇಜ್‌ಗೆ ಹೋಗಿ ಅಲ್ಲಿ ಕಾಣುವ latest notifications ಮೇಲೆ ಕ್ಲಿಕ್ ಮಾಡಿ ಮತ್ತು Download CBSE 12th Class Term 2 Result 2022 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಒಂದು ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.
3. ನಿಮ್ಮ ರೋಲ್ ನಂಬರ್, ಡೇಟ್ ಆಫ್ ಬರ್ತ್ ಮತ್ತು ಕೇಳಲಾದ ಕ್ರೆಡೆನ್ಷಿಯಲ್‌ಗಳನ್ನು ಹಾಕಿ ಲಾಗಿನ್ ಆಗಿ, ಸಬ್‌ಮಿಟ್ ಮಾಡಿ.
4. ಆಗ ನಿಮ್ಮ ಫಲಿತಾಂಶ ಕಾಣಿಸುತ್ತದೆ. ಅದನ್ನು ನೀವು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಡಿಜಿ ಲಾಕರ್‌ನಲ್ಲಿ ನೋಡೋದು ಹೇಗೆ?
1. digilocker.gov.in ಗೆ ಭೇಟಿ ಕೊಡಿ.
2. ಹೋಂ ಪೇಜ್‌ನಲ್ಲಿ ಲಾಗಿನ್ ಎಂಬಲ್ಲಿ ಕ್ಲಿಕ್ ಮಾಡಿ.
3. ಆಗ ತೆರೆದುಕೊಳ್ಳುವ ಪೇಜ್‌ನಲ್ಲಿ ನಿಮ್ಮ ಸಿಬಿಎಸ್‌ಇ ರೋಲ್ ನಂಬರ್, ಹೆಸರು, ಶಾಲೆಯಲ್ಲಿ ನಿಮಗೆ ಕೊಡಲಾದ PINನ್ನು ಹಾಕಿ ಲಾಗಿನ್ ಆಗಿ.
4. ನಿಮ್ಮ 12 ನೇ ತರಗತಿ ಅಂಕಪಟ್ಟಿ ಆಗ ತೆರೆದುಕೊಳ್ಳುತ್ತದೆ.
5. ನೀವು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಿಬಿಎಸ್‌ಇ 12 ನೇ ತರಗತಿ ಟರ್ಮ್ 1 ಮತ್ತು 2ನೇ ಪರೀಕ್ಷೆಯನ್ನು 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಇದೀಗ ಫಲಿತಾಂಶ ಹೊರಬಿದ್ದಿರುವ ಟರ್ಮ್ 2 ಪರೀಕ್ಷೆ 2022ರ ಏಪ್ರಿಲ್ 26ರಿಂದ ಜೂನ್ 15 ರವರೆಗೆ ನಡೆದಿತ್ತು. ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶವೂ ಇಂದು ಮಧ್ಯಾಹ್ನ 2ಗಂಟೆಗೆ ಹೊರಬೀಳಲಿದೆ.
ಇದನ್ನೂ ಓದಿ: CBSE Result | ಜುಲೈ ತಿಂಗಳಲ್ಲಿ ಸಿಬಿಎಸ್‌ಇ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳು ನಿರಾಳ