ಬೆಂಗಳೂರು: ಎಂಜಿನಿಯರ್ (engineering) ಆಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ (students) ಒಂದು ಸಿಹಿ ಸುದ್ದಿ. ಈ ಬಾರಿ ರಾಜ್ಯದಲ್ಲಿ ಹೆಚ್ಚುವರಿಯಾಗಿ ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸುವರ್ಣ ಅವಕಾಶ ಸಿಗಲಿದೆ.
ಎಂಜಿನಿಯರಿಂಗ್ ಸೀಟುಗಳಿಗೆ (Engineering Seats) ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ತಾಂತ್ರಿ ಕ ಶಿಕ್ಷಣ ಪರಿಷತ್ (AICTE) ಇನ್ ಟೇಕ್ (IN-Take) ಸಡಿಲಗೊಳಿಸಿದ್ದರಿಂದ ಎಂಟು ಸಾವಿರಕ್ಕೂ ಹೆಚ್ಚು ಸೀಟುಗಳು ಈ ವರ್ಷದಲ್ಲಿ ಸಿಗಲಿದೆ.
ಉನ್ನತ ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಸೀಟ್ ಲಭ್ಯತೆ ಬಗ್ಗೆ ಅಧಿಸೂಚನೆ ಹೊರಡಿಸಿದೆ. 2024- 25ನೇ ಸಾಲಿನ ಎಂಜಿನಿಯರಿಂಗ್ ಪ್ರವೇಶಕ್ಕೆ ಎಲ್ಲ ಮಾದರಿಯ 245 ಎಂಜಿನಿಯರಿಂಗ್ ಕಾಲೇಜುಗಳಿಂದ 1,32,309 ಸೀಟುಗಳ ಇನ್ ಟೆಕ್ ಆಗಿದೆ. ಇದರಲ್ಲಿ ಸರ್ಕಾರಿ ಕೋಟಾದಡಿಯಲ್ಲಿ 62,930 ಸೀಟುಗಳು, COMED-K ಕೋಟಾದ ಅಡಿಯಲ್ಲಿ 28,656 ಸೀಟುಗಳು ಮತ್ತು ಸೂಪರ್ ನ್ಯೂಮರರಿ ಕೋಟಾದ ಅಡಿಯಲ್ಲಿ 5,155 ಸೀಟುಗಳು ಸೇರಿವೆ.
ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) 62,930 ಸೀಟುಗಳ ಲಭ್ಯ ವಾಗಿದೆ. 2023ರಲ್ಲಿ 245 ಕಾಲೇಜುಗಳಿಂದ 1,24,551 ಸೀಟುಗಳು ಲಭ್ಯವಾಗಿದ್ದು, ಇದರಲ್ಲಿ ಕೆಇಎಗೆ 58,845 ಸೀಟುಗಳಿದ್ದವು.
ಕಳೆದ ವರ್ಷ ಒಟ್ಟು ಸೀಟುಗಳ ಸಂಖ್ಯೆ 1,24,551 ಮತ್ತು ಸರ್ಕಾರಿ ಕೋಟಾದ ಸೀಟುಗಳು 58,845 ಆಗಿತ್ತು. ಈ ಬಾರಿ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಎಂಜಿನಿಯರಿಂಗ್ ಪ್ರವೇಶದ ಮೇಲಿನ ಮಿತಿಯನ್ನು ತೆಗೆದುಹಾಕುವುದರೊಂದಿಗೆ, ಈ ಶೈಕ್ಷಣಿಕ ವರ್ಷದಲ್ಲಿ ಸೀಟುಗಳ ಸಂಖ್ಯೆ 7,758 ಹೆಚ್ಚಲಿದೆ. ಇದರಲ್ಲಿ ಸರ್ಕಾರಿ ಕೋಟಾದ ಅಡಿಯಲ್ಲಿ 4,085ರಷ್ಟು ಸೀಟು ಹೆಚ್ಚು ಸಿಗಲಿದೆ.
ಇನ್ನು 13 ಕಾಲೇಜುಗಳ ಸೀಟುಗಳು ಇದಕ್ಕೆ ಸೇರ್ಪಡೆಯಾಗಲಿದ್ದು, ಹೀಗಾಗಿ ಕೆಇಎಗೆ ಇನ್ನೂ ಹೆಚ್ಚಿನ ಸೀಟುಗಳು ಲಭ್ಯವಾಗುವ ನಿರೀಕ್ಷೆ ಇದೆ.
ಎಲ್ಲಿ ಎಷ್ಟು ಸೀಟು ?
ಕೆಇಎಗೆ ಲಭ್ಯವಾಗಿರುವ 62,930 ಸೀಟುಗಳಲ್ಲಿ ಖಾಸಗಿ ಕಾಲೇಜುಗಳಲ್ಲಿ 38,024 ಖಾಸಗಿ ವಿವಿಗಳಲ್ಲಿ 9,988 ಸೀಟುಗಳು ಸೇರಿವೆ. ಇದರಲ್ಲಿ 246 ಸೀಟುಗಳು ಆರ್ಕಿಟೆಕ್ಚರ್ ಗೆ ಸಂಬಂಧಿಸಿದೆ.
ಯಾವುದಕ್ಕೆ ಹೆಚ್ಚಿನ ಬೇಡಿಕೆ?
ಹೆಚ್ಚಿನ ಸೀಟುಗಳು ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ವಿಷಯಗಳಲ್ಲಿವೆ. ಈ ಶೈಕ್ಷಣಿಕ ವರ್ಷದಿಂದ, ಎಐಸಿಟಿಇ ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಮಿತಿಯನ್ನು ತೆಗೆದುಹಾಕಿದೆ. ಅದರ ಅನಂತರ ಹಲವಾರು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವಿಷಯಗಳಿಗೆ ಸೀಟು ಗಳ ಸಂಖ್ಯೆಯನ್ನು 500ರಿಂದ 1,000ಕ್ಕೆ ಹೆಚ್ಚಿಸಿವೆ.
ಇದನ್ನೂ ಓದಿ: NEET UG : ಫಿಸಿಕ್ಸ್ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ
ಎಂಜಿನಿಯರಿಂಗ್ ಆಕಾಂಕ್ಷಿಗಳು ಹೆಚ್ಚಳ
ಈ ವರ್ಷ ಸಿಇಟಿಗೆ ಹಾಜರಾದ 3.1೦ ಲಕ್ಷ ವಿದ್ಯಾರ್ಥಿಗಳ ಪೈಕಿ 2.74 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೇರಲು ಅರ್ಹರಾಗಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 2.03 ಲಕ್ಷ ಇತ್ತು. ಈ ವರ್ಷ 30 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದೆ.
ಈ ಹಿಂದೆ ಸೀಟು ಹೆಚ್ಚಳಕ್ಕೆ ಆಯಾ ವಿವಿಗಳಿಗೆ ಕಾಲೇಜುಗಳು ಪ್ರಸ್ತಾವನೆ ಸಲ್ಲಿಸಬೇಕಿತ್ತು. ಇದನ್ನು ಸ್ಥಳೀಯ ವಿಚಾರಣಾ ಸಮಿತಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುತ್ತಿತ್ತು. ಆದರೆ ಈ ಬಾರಿ ಕಾಲೇಜುಗಳು ಸೀಟು ಹೆಚ್ಚಳಕ್ಕೆ ನೇರವಾಗಿ ಎಐಸಿಟಿಇಯಿಂದ ಅನುಮೋದನೆಯನ್ನು ಪಡೆಯಬೇಕಾಗಿದೆ. ಇದನ್ನು ರಾಜ್ಯ ಸರ್ಕಾರ ವಿರೋಧಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.