Site icon Vistara News

JEE Main 2022 Result: ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ; ಡೌನ್‌ಲೋಡ್‌ ಮಾಡುವ ವಿಧಾನ ಹೀಗಿದೆ

JEE Main

ನವ ದೆಹಲಿ: ಜೆಇಇ ಮುಖ್ಯ ಪರೀಕ್ಷೆ (ಜಂಟಿ ಪ್ರವೇಶ ಮುಖ್ಯ ಪರೀಕ್ಷೆ) 2022ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ) ಇಂದು ಬಿಡುಗಡೆ ಮಾಡಿದೆ. ಜೆಇಇ ಮುಖ್ಯ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು jeemain.nta.nic.in. ವೆಬ್‌ಸೈಟ್‌ಗೆ ಭೇಟಿ ಕೊಟ್ಟು ತಮ್ಮ ಫಲಿತಾಂಶ ವೀಕ್ಷಿಸಬಹುದು ಮತ್ತು ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಫಲಿತಾಂಶ ವೀಕ್ಷಣೆ ಹೇಗೆ?
1. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಜೆಇಇ ಮುಖ್ಯ ಪರೀಕ್ಷೆಗೆ ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ jeemain.nta.nic.in.ಗೆ ಭೇಟಿ ನೀಡಿ.
2. ಹೋಂ ಪೇಜ್‌ನಲ್ಲಿ ಕಾಣಿಸುವ JEE Main 2022 Session 1 Result download ಎಂಬಲ್ಲಿ ಕ್ಲಿಕ್‌ ಮಾಡಿ.
3. ಅಲ್ಲಿ ನಿಮ್ಮ ರೋಲ್‌ ನಂಬರ್‌, ಡೇಟ್‌ ಆಫ್‌ ಬರ್ತ್‌, ಕ್ಯಾಪ್ಚಾ ಕೋಡ್‌ ಮತ್ತು ಅಲ್ಲಿ ಕೇಳಲಾದ ಎಲ್ಲ ವಿವರಗಳನ್ನು ನಮೂದಿಸಿ ಲಾಗಿನ್‌ ಆಗಿ.
4. ಆಗ ನಿಮ್ಮ ಫಲಿತಾಂಶ ಸ್ಕ್ರೀನ್‌ ಮೇಲೆ ತೆರೆದುಕೊಳ್ಳುತ್ತದೆ. ಅದನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳಿ.

ಇದೀಗ ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪಡೆದವರು ಐಐಟಿ ಜೆಇಇ ಅಡ್ವಾನ್ಸ್ಡ್‌ (IIT JEE Advanced) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ. ಶಾರ್ಟ್‌ಲಿಸ್ಟ್‌ ಮಾಡಲಾದ ಅಭ್ಯರ್ಥಿಗಳು ಐಐಐಟಿ, ಎನ್‌ಐಟಿ ಅಥವಾ ಇನ್ಯಾವುದೇ ಸರ್ಕಾರಿ ಚಾಲಿನ ಟೆಕ್ನಿಕಲ್‌ ಇನ್‌ಸ್ಟಿಟ್ಯೂಶನ್‌ಗಳಲ್ಲಿ ನಡೆಯುವ ಜೆಒಎಸ್‌ಎಎ (Joint Seat Allocation Authority) ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಬಹುದು. JEE Advanced ಪರೀಕ್ಷಾರ್ಥಿಗಳ ನೋಂದಣಿ ಪ್ರಕ್ರಿಯೆ ಆಗಸ್ಟ್‌ 7ರಿಂದ ಪ್ರಾರಂಭವಾಗುತ್ತದೆ. ನೋಂದಣಿಗೆ ಕೊನೇ ದಿನ ಆಗಸ್ಟ್‌ 11.

ಇದನ್ನೂ ಓದಿ: JEE Main 2022 Session 2: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದ ಎನ್‌ಟಿಎ

Exit mobile version