Site icon Vistara News

Karnataka DCET 2022 | ಡಿಸಿಇಟಿ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ; ಹೊಸ ನಿಯಮ ಜಾರಿ

KEA Recruitment 2023 answer key released on kea website

kea key

ಬೆಂಗಳೂರು: ಡಿಪ್ಲೊಮಾ ಮಾಡಿರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಪದವಿ ಪ್ರವೇಶಕ್ಕೆ (ಲ್ಯಾಟರಲ್‌ ಎಂಟ್ರಿ) ನಡೆಸಲಾಗುವ ಪ್ರವೇಶ ಪರೀಕ್ಷೆ “ಡಿಸಿಇಟಿ ಪರೀಕ್ಷೆʼʼ (Karnataka DCET 2022)ಯಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಈ ವಿಷಯವನ್ನು ಪರೀಕ್ಷೆ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಣೆಯಲ್ಲಿ ತಿಳಿಸಿದ್ದು, ಸರ್ಕಾರದ ಸೂಚನೆಯಂತೆ ಈ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದೆ. ಇನ್ನು ಮುಂದೆ ಪ್ರವೇಶ ಪರೀಕ್ಷೆ ಅಂಕಗಳನ್ನು 180ರಿಂದ 100ಕ್ಕೆ ಇಳಿಸಲಾಗುತ್ತದೆ, ಡಿಪ್ಲೊಮೊ ವ್ಯಾಸಂಗಕ್ಕೆ ಅಪ್ಲೈಡ್‌ ವಿಜ್ಞಾನ ಮತ್ತು ಗಣಿತವಿಷಯಗಳನ್ನು ಮಾತ್ರ ಪರಿಗಣಿಸಿ ಎಲ್ಲ ಕೋರ್ಸ್‌ಗಳಿಗೆ ಅನ್ವಯವಾಗು ವಂತೆ ಪರೀಕ್ಷೆ ನಡೆಸಲಾಗುತ್ತದೆ.

ಯಾವುದೇ ಎಂಜಿನಿಯರಿಂಗ್‌ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಅಭ್ಯರ್ಥಿಗಳು ಬೇರೆ ಯಾವುದೇ
ಎಂಜಿನಿಯರಿಂಗ್‌ ಪದವಿ ಪ್ರವೇಶಕ್ಕೆ ಅರ್ಹರು ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) 2020ರಲ್ಲಿ ನಿಯಮಗಳನ್ನು ಬದಲಾವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೂತನ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ಬದಲಾವಣೆ?
೧. ಡಿಪ್ಲೊಮೊ ವ್ಯಾಸಂಗದಲ್ಲಿ ಅಭ್ಯಾಸ ಮಾಡಿರುವ Applied Science and Applied Mathematics ವಿಷಯಗಳನ್ನು ಮಾತ್ರ ಪರಿಗಣಿಸಿ ಎಲ್ಲ ಟ್ರೇಡ್‌ಗಳಿಗೆ ಅನ್ವಯಿಸುವಂತೆ ಒಂದು ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪರೀಕ್ಷೆಯನ್ನು 100ಅಂಕಗಳಿಗೆ 3 ಗಂಟೆಯ ಅವಧಿಯಲ್ಲಿ ನಡೆಸುವುದು.
೨. ಅಂತಿಮ ವರ್ಷದ (05 ಮತ್ತು06 ನೇ ಸೆಮಿಸ್ಟರ್‌) ಪರೀಕ್ಷೆಯ ತೇರ್ಗಡೆಯಾದ ಫಲಿತಾಂಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದು.
೩. ಡಿಸಿಇಟಿ-2022ರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 100 ಅಂಕಗಳಿಗೆ ಗಳಿಸಿದ ಅಂಕಗಳ ಶೇ.50 ಅನ್ನು ಪರಿಗಣಿಸುವುದು ಹಾಗೂ ಅದೇ ರೀತಿಯಲ್ಲಿ ಅಂತಿಮ ವರ್ಷದ ಡಿಪ್ಲೊಮಾದಲ್ಲಿ ತೇರ್ಗಡೆಯಾದ ಪಡೆದ ಒಟ್ಟಾರೆ ಅಂಕಗಳ ಶೇ. 50 ಅನ್ನು ಪರಿಗಣನೆಗೆ ತೆಗೆದುಕೊಂಡು, ಇವೆರಡನ್ನೂ ಸೇರಿಸಿ ವಿಧ್ಯಾರ್ಥಿಗಳ ರ‍್ಯಾಂಕ್‌ ಅನ್ನು ನಿಗದಿಪಡಿಸುವುದು.

ಈಗ ಕೆಇಎಯು ಡಿಪ್ಲೊಮಾದಲ್ಲಿ ಬೇರೆ ಬೇರೆ ಕೋರ್ಸ್‌ಗಳನ್ನು ಕಲಿಯುವವರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಈ ಪರೀಕ್ಷೆ ನಡೆಸಲಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಇದನ್ನು ಗಮನಿಸಬೇಕೆಂದು ಕೆಇಎಯು ಪ್ರಕಟಣೆಯಲ್ಲಿ ಕೋರಿದೆ.

ಇದನ್ನೂ ಓದಿ | ಎಸ್‌ಎಸ್‌ಎಲ್‌ಸಿ-ಪಿಯುಗೆ ಇನ್ಮುಂದೆ ಒಂದೇ ಮಂಡಳಿ; ವಿಲೀನ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ

Exit mobile version