ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 2022ರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ (KCET 2022) ಆನ್‌ಲೈನ್‌ನಲ್ಲಿಯೇ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದು, ಆಫ್‌ಲೈನ್ ದಾಖಲಾತಿ ಪರಿಶೀಲನೆಯ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ಈ ಬಾರಿಯ ಪರೀಕ್ಷೆಯಲ್ಲಿ 1,71,000 ವಿದ್ಯಾರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಗೆ ಅರ್ಹರಿರುತ್ತಾರೆ. ಇವರುಗಳ ಕೆಲ ದಾಖಲೆಗಳ ಪರಿಶೀಲನೆಯನ್ನು ಆನ್‌ಲೈನ್‌ನಲ್ಲಿಯೇ ಕೆಇಎಯೇ ನಡೆಸುತ್ತಿದೆ. ವಿದ್ಯಾರ್ಥಿಗಳು ಸಲ್ಲಿಸಿರುವ ಕಂದಾಯ ಇಲಾಖೆಯಿಂದ ನೀಡಲಾಗುವ ದಾಖಲೆಗಳಾದ ಜಾತಿ /ಆದಾಯ/371ಜೆ ಪ್ರಮಾಣ ಪತ್ರಗಳನ್ನು ಆರ್‌ಡಿ ಸಂಖ್ಯೆಯ ಆಧಾರದ ಮೇರೆಗೆ ಆನ್‌ಲೈನ್ ಮುಖಾಂತರ ಪರಿಶೀಲನೆ ನಡೆಸಲಾಗುತ್ತಿದೆ. ಇದರ ಜತೆಗೆ 10ನೇ ತರಗತಿಯ ಅಂಕಪಟ್ಟಿಯನ್ನು ಅವರ ಜನ್ಮ ದಿನಾಂಕ, ತಂದೆ, ತಾಯಿ ಹೆಸರುಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಡಾಟಾದೊಂದಿಗೆ ಆನ್‌ಲೈನ್‌ನಲ್ಲಿಯೇ ಹೋಲಿಸಿ ನೋಡಲಾಗುತ್ತಿದೆ.
ಹೀಗೆ ನಡೆಯಲಿದೆ ದಾಖಲೆ ಪರಿಶೀಲನೆ;
ದ್ವಿತೀಯ ಪಿಯುಸಿ/12ನೇ ತರಗತಿಯ ಅಂಕಗಳನ್ನೂ ಪದವಿ ಪೂರ್ವ ಇಲಾಖೆಯ ಡಾಟದೊಂದಿಗೆ ಆನ್‌ಲೈನ್ ಮೂಲಕ ಪರಿಶೀಲಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮೂಲ ಪವೇಶ ಪತ್ರ ಸರಿಯಾಗಿದೆಯೇ ಎಂದು ಕೂಡ ಆನ್‌ಲೈನ್‌ನಲ್ಲಿಯೇ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆಇಎ ತಿಳಿಸಿದೆ.
ವ್ಯಾಸಂಗ ಪ್ರಮಾಣ ಪತ್ರ ಪರಿಶೀಲನೆ ಹೇಗೆ?
ಎಲ್ಲ ವಿದ್ಯಾರ್ಥಿಗಳು ತಾವು ಶಾಲೆ/ ಕಾಲೇಜುಗಳಲ್ಲಿ ಒದಿದ ದಾಖಲೆಗಳನ್ನು ಅಯಾ ಶಾಲೆಗಳಿಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿಯೇ ಪರಿಶೀಲನೆಗೆ ಒಳಪಡಿಸಬೇಕಿದೆ.
ವಿದ್ಯಾರ್ಥಿಗಳು ಎಲ್ಲ ದಾಖಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರೋಗ್ರಾಮರ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಮುಂದೆ ಹಾಜರು ಪಡಿಸಿ, ಪರಿಶೀಲನೆಗೊಳಪಡಿಸಿ, ಆನ್‌ಲೈನ್ ಮೂಲಕ ಕೆಇಎ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿಸಬೇಕೆಂದು ಸೂಚಿಸಲಾಗಿದೆ.
ಇದಕ್ಕೆ ಆಗಸ್ಟ್ 22 ರಿಂದ ಸೆಪ್ಟೆಂಬರ್ 7 ರವರೆಗೆ ಕಾಲಾವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಹಾಗು ಅಗತ್ಯತೆ ಇದ್ದಲ್ಲಿ ಪೋಷಕರ ವ್ಯಾಸಂಗ ಪ್ರಮಾಣ ಪತ್ರದ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ, ಪರಿಶೀಲನೆಗೆ ಒಳಪಡಿಸಬೇಕೆಂದು ಕೆಇಎ ಸೂಚಿಸಿದೆ.
ಬೆಂಗಳೂರಿನ ಸುಮಾರು ೪೦ ಸಾವಿರ ವಿದ್ಯಾರ್ಥಿಗಳು ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಬೇಕಾಗಿಲ್ಲ. ಇವರುಗಳ ದಾಖಲೆಗಳನ್ನು ಬೆಂಗಳೂರಿನ ಕೆಇಎ ಕಚೇರಿಯ ಆರವಣದಲ್ಲಿಯೇ ಪರಿಶೀಲಿಸಲಾಗುತ್ತದೆ. ಬೆಂಗಳೂರಿನಲ್ಲಿ ಯಾವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಜರಾಗಬೇಕೆಂದು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುತ್ತದೆ ಎಂಬ ಕಾರಣಕ್ಕೆ ಕೆಇಎ ಇದಕ್ಕೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಯಾವ ವಿದ್ಯಾರ್ಥಿ, ಎಂದು ಯಾವ ಸಮಯಕ್ಕೆ ಹಾಜರಾಗಬೇಕೆಂಬ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.
ವೇಳಾಪಟ್ಟಿ ಇಂತಿದೆ;
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea/cet2022