Site icon Vistara News

KCET Guidance : KCET ಮಾರ್ಗದರ್ಶನ; ಗ್ರಾಮೀಣ ವಿದ್ಯಾರ್ಥಿಗಳಿಗೆ ಬಲ ತುಂಬಲಿದೆ ವಿಕಸನ ಪ್ರತಿಷ್ಠಾನ

KCET Exam Guidance

ಬೆಂಗಳೂರು: ರಾಮಕೃಷ್ಣ ಮಠ (Ramakrishna Matt) ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಟೀಚರ್ ಆ್ಯಪ್ (Teacher App), ಬಿ.ಎನ್.ಎಂ ತಾಂತ್ರಿಕ ವಿದ್ಯಾಲಯಗಳು ರೂಪಿಸಿರುವ ವಿಕಸನ ಫೌಂಡೇಶನ್ (Vikasana Foundation) ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವೃತ್ತಿಪರ ಕೋರ್ಸ್‌ ಪ್ರವೇಶಕ್ಕಾಗಿ ನಡೆಯುವ KCET ಪರೀಕ್ಷೆಗೆ (KCET Exam) ಸಜ್ಜುಗೊಳಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣ ಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಯುವ ʻವಿದ್ಯಾಮೃತ 2024ʼ ಯೋಜನೆಗೆ (Vidyamrita 2024 programme) ಬುಧವಾರ ಚಾಲನೆ (KCET Guidance) ನೀಡಲಾಯತು.

ಶ್ರೀರಾಮಕೃಷ್ಣ ವಿದ್ಯಾರ್ಥಿ ಮಂದಿರಂನ ಮೇಲ್ವಿಚಾರಕರಾದ ಸ್ವಾಮಿ ತದುಕ್ತಾನಂದಜಿ ಮಹಾರಾಜ್ ಮತ್ತು ಬಿಎನ್ಎಂ ತಾಂತ್ರಿಕ ವಿದ್ಯಾಲಯದ ಕಾರ್ಯದರ್ಶಿಗಳಾದ ನಾರಾಯಣ್ ಆರ್ ರಾವ್ ಮಾನೆ ಅವರ ಉಪಸ್ಥಿತಿಯಲ್ಲಿ ಯೋಜನೆಯನ್ನು ಉದ್ಘಾಟಿಸಲಾಯಿತು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಬೇಕೆಂಬ ಬಹುದಿನಗಳ ಕನಸು ಇಂದು ಈ ಯೋಜನೆಯ ಮೂಲಕ ನನಸಾಗುತ್ತಿದೆ ಎಂದು ನಾರಾಯಣ್ ಆರ್ ರಾವ್ ಮಾನೆ ಅವರು ಸಂತಸ ವ್ಯಕ್ತಪಡಿಸಿದರು. ಶ್ರೀರಾಮಕೃಷ್ಣ ವಿದ್ಯಾರ್ಥಿ ಮಂದಿರಂನ ಮೇಲ್ವಿಚಾರಕರಾದ ಸ್ವಾಮಿ ತದುಕ್ತಾನಂದಜಿ ಮಹಾರಾಜ್ ಮಾತನಾಡಿ, “ಈ ಯೋಜನೆಯನ್ನು ರೂಪಿಸುವಲ್ಲಿ ಬಹಳಷ್ಟು ಜನರ ಪರಿಶ್ರಮವಿದೆ, ಸೇವಾ ಬದ್ಧತೆಯುಳ್ಳ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇದನ್ನು KCET ಪರೀಕ್ಷೆಯ ತಯಾರಿಯಲ್ಲಿರುವ ರಾಜ್ಯದ ಎಲ್ಲಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ, ಇದನ್ನೇ ಉಪಾಸನೆಯಂತೆ ಮಾಡಿ’ ಎಂದು ಕಿವಿ ಮಾತು ಹೇಳಿದರು.

ಟೀಚರ್ ಟೀಚರ್ ಆ್ಯಪ್ ಸಂಸ್ಥೆಯ ಮುಖ್ಯಸ್ಥರಾದ ಅಭಿರಾಮ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಒಟ್ಟು ಸ್ವರೂಪವನ್ನು ವಿವರಿಸಿದರು.

ಏನಿದು ವಿದ್ಯಾಮೃತ: KCET ಮಾರ್ಗದರ್ಶನ ಕಾರ್ಯಕ್ರಮ?

ಕರ್ನಾಟಕ ರಾಜ್ಯದ 31 ಜಿಲ್ಲೆಗಳು, 1 ಲಕ್ಷ ವಿದ್ಯಾರ್ಥಿಗಳ ಗುರಿ

ರಾಮಕೃಷ್ಣ ಮಠ ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಟೀಚರ್ ಆ್ಯಪ್, ಬಿ.ಎನ್.ಎಂ ತಾಂತ್ರಿಕ ವಿದ್ಯಾಲಯ ಇವುಗಳೊಂದಿಗೆ ಜೊತೆಗೂಡಿ ವಿಕಸನ ಫೌಂಡೇಶನ್ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುವ ಸದುದ್ದೇಶ ಹೊಂದಿದೆ. ರಾಜ್ಯದ ಸಾವಿರಕ್ಕೂ ಹೆಚ್ಚಿನ ಕಾಲೇಜಿನ ಒಂದು ಲಕ್ಷಕ್ಕೂ ಮೀರಿದ ವಿದ್ಯಾರ್ಥಿಗಳನ್ನು ತಲಪುವ ಗುರಿಯನ್ನು ಹೊಂದಿದ್ದು, ವಿಶೇಷವಾಗಿ ಆಫ್ ಲೈನ್ ಮತ್ತು ಆಸ್ಟ್ರೇನ್ ತರಗತಿಗಳ ಪಾಠ ಬೋಧನೆಯೇ ಈ ಯೋಜನೆಯ ವೈಶಿಷ್ಟ್ಯ, ಈ ಯೋಜನೆಯು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ.

ಕಾರ್ಯಕ್ರಮ ಹೇಗೆ ನಡೆಯುತ್ತದೆ?

ವಿದ್ಯಾಮೃತ 2024 ಸ್ಕಾಲರ್ ಶಿಪ್ ಕಾರ್ಯಕ್ರಮವು ಜನವರಿ ತಿಂಗಳ ಕೊನೆಭಾಗದಲ್ಲಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಯು K-CET ತಯಾರಿಯಿಂದ ವೃತ್ತಿಪರ ಕೋರ್ಸ್ ಆಯ್ಕೆಮಾಡಿಕೊಳ್ಳುವವರೆಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ.

ಇದನ್ನೂ ಓದಿ: SSLC, II PUC Exam: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಧ್ಯೇಯ: ವಿದ್ಯಾಮೃತ 2024 ಸ್ಕಾಲರ್ ಶಿಪ್ ಕಾರ್ಯಕ್ರಮವು 2024ನೇ ಸಾಲಿನ ಅರ್ಹ ವಿದ್ಯಾರ್ಥಿಗಳ KCET ಅಧ್ಯಯನ ಮತ್ತು ವೃತ್ತಿಪರ ಕೋರ್ಸ್ ಆಯ್ಕೆಗೆ ಸರ್ವರೀತಿಯಲ್ಲೂ ಸಹಕಾರ ಒದಗಿಸುತ್ತದೆ, ತನ್ಮೂಲಕ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ತನ್ನ ಗುರಿಯನ್ನು ಸಾಧಿಸಿ ಸಮಾಜದಲ್ಲಿ ಉನ್ನತಸ್ಥಾನಕ್ಕೇರಲು ವಿದ್ಯಾರ್ಥಿಯನ್ನು ಪ್ರೇರೇಪಿಸುತ್ತದೆ.

KCET ತರಬೇತಿ ಪಡೆಯಲು ಸಾಕಷ್ಟು ಮಾರ್ಗದರ್ಶನ, ಸಹಕಾರವಿಲ್ಲದ ಗ್ರಾಮೀಣ ಭಾಗದವರಿಗೆ ಸಹಾಯವಾಗಲೆಂದು ಯೋಜನೆಗೈದ ಅಪರೂಪದ ಕಾರ್ಯಕ್ರಮ ಇದಾಗಿದೆ. ಇದರ ಅನ್ವಯ ಡಿಜಿಟಲ್ ಶಿಕ್ಷಣದ ಮುಖಾಂತರ ಅತ್ಯುತ್ತಮ ಶಿಕ್ಷಕರನ್ನು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಾಗಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ಅಂಕ ಗಳಿಸುವಲ್ಲಿ ನೆರವಾಗುವುದಲ್ಲದೆ, ತಾನು ಯಾವ ಕೋರ್ಸ್ ಆಯ್ದುಕೊಂಡರೆ ಅತ್ಯುತ್ತಮ ಎನ್ನುವುದರಲ್ಲಿಯೂ ದಾರಿ ತೋರಿಸುತ್ತದೆ.

ಕಾರ್ಯಕ್ರಮದ ಮುನ್ನೋಟ

ವಿದ್ಯಾಮೃತ 2024 ಏಪ್ರಿಲ್ ಕೊನೆಯ ವಾರದಲ್ಲಿ KCET ಬರೆಯಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ Online ಮತ್ತು Offline ತರಗತಿ ಎರಡನ್ನೂ ಸಂಯೋಜಿಸಿ ವಿನ್ಯಾಸಗೊಳಿಸಿದ ವಿಶಿಷ್ಟ ಕಾರ್ಯಕ್ರಮ, ಗ್ರಾಮೀಣ ಭಾಗದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ

ವಿದ್ಯಾಮೃತ ಕಾರ್ಯಕ್ರಮದ ಪ್ರಯೋಜನಗಳೇನು?

ಈ ಕಾರ್ಯಕ್ರಮದಿಂದ ಪ್ರತಿಯೊಬ್ಬ ವಿದ್ಯಾರ್ಥಿ ಈ ಕೆಳಗಿನ ಪ್ರಯೋಜನ ಪಡೆಯಲು ಸಫಲನಾಗುತ್ತಾನೆ.

1.ವಾರ್ಷಿಕ ಪರೀಕ್ಷಗೆ ಸಹಕಾರ
2.KCET ಪರೀಕ್ಷೆಗಾಗಿಯೇ ವಿನ್ಯಾಸಗೊಳಿಸಿದ ವಿಡಿಯೊಗಳು
3. ಪ್ರತಿ ಅಧ್ಯಾಯದ ಮುಖ್ಯಾಂಶಗಳು
4. 2000ಕ್ಕೂ ಅಧಿಕ ಬಿಡಿಸಿದ ಪ್ರಶ್ನೆಗಳು
5. ಪ್ರತಿ ದಿನದ ಅಭ್ಯಾಸ ಪತ್ರಿಕೆಗಳು
6. ಆಫ್‌ಲೈನ್‌ ಮತ್ತು ಆನ್‌ಲೈನ್‌ ಅಣಕು ಪರೀಕ್ಷೆಗಳು
7. ಲೈವ್‌ ಮತ್ತು ಸಂದೇಹ ಬಗೆಹರಿಸಲು ತರಗತಿಗಳು
8. ವೃತ್ತಿಪರ ಕೋರ್ಸ್‌ಗಳ ಕುರಿತು ಮಾರ್ಗದರ್ಶನ

KCET ಆಫ್‌ಲೈನ್‌ ಕಾರ್ಯಕ್ರಮಗಳು

ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಅಪರೂಪದ ತರಗತಿಗಳು, ತರಗತಿಗಳನ್ನು ಅಂತಿಮ ವಾರ್ಷಿಕ ಪರೀಕ್ಷೆಯ ಬಳಿಕ ನಡೆಸಲಾಗುತ್ತದೆ. KCET ಪರೀಕ್ಷೆಯ ನಂತರ ಅನುಭವಿಗಳಿಂದ KCET Councelling ಕುರಿತು ಮಾರ್ಗದರ್ಶನ

ಕೋರ್ಸ್‌ ಅವಧಿ: ಪ್ರಾರಂಭ: ಜನವರಿ 26, 2024ರಿಂದ ಆಗಸ್ಟ್‌ 31, 24

“ವಿದ್ಯಾಮೃತ 2024” ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ ಎನ್ ಎಂ ಸಂಸ್ಥೆಯ ಮುಖ್ಯಸ್ಥರು, ಟೀಚರ್ ಸಂಸ್ಥೆಯ ಉದ್ಯೋಗಿಗಳು, ಪಿಯುಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version