Site icon Vistara News

KSOU Admission : ಮುಕ್ತ ವಿವಿ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ

KSOU Admission ಮುಕ್ತ ವಿವಿ ಪ್ರವೇಶ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ (KSOU Admission) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 31 ಕೊನೆಯ ದಿನವಾಗಿದೆ.

ಆಸಕ್ತ ವಿದ್ಯಾರ್ಥಿಗಳು ವಿವಿಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಿ, ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯನುಸಾರ ದಾಖಲಾತಿಗಳೊಂದಿಗೆ ವಿವಿ ನಿಲಯದ ಕೇಂದ್ರ ಕಚೇರಿ, ವಿವಿಧ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳಲ್ಲಿ ಅದನ್ನು ಸಲ್ಲಿಸಿ, ಪ್ರವೇಶಾತಿ ಪಡೆಯಬಹುದಾಗಿದೆ.

ಆಯಾ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರ, ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ, ವಿದ್ಯಾರ್ಥಿಗಳು ಸಲ್ಲಿಸಬೇಕಿರುವ ಶೈಕ್ಷಣಿಕ ಮತ್ತು ಇತರೆ ದಾಖಲಾತಿಗಳು ಹಾಗೂ ಶುಲ್ಕಗಳ ವಿವರಗಳನ್ನು ಆಯಾ ಶಿಕ್ಷಣ ಕ್ರಮಗಳ ವಿವರಣಾ ಪುಸ್ತಕ (ಪ್ರಾಸ್‌ಪೆಕ್ಟಸ್‌) ಹಾಗೂ ಪ್ರೋಗ್ರಾಮ್‌ ಗೈಡ್‌ನಲ್ಲಿ ನೀಡಲಾಗಿದೆ. ವಿವರಣಾ ಪುಸ್ತಕಾ ವಿವಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಮೊದಲು ಇದನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಈಗಾಗಲೇ ಪ್ರಥಮ/ದ್ವಿತೀಯ ಸಾಲಿನ ಯುಜಿ/ಪಿಜಿ ಶಿಕ್ಷಣ ಕ್ರಮವನ್ನು ಪೂರೈಸಿ, ನಾನಾ ಕಾರಣಗಳಿಗಾಗಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರದೇ ಇರುವ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ನಿಯಮಗಳನುಸಾರ ದ್ವಿತೀಯ/ ತೃತೀಯ ಯುಜಿ/ಪಿಜಿ ಕೋರ್ಸ್‌ಗಳಿಗೆ ನೇರವಾಗಿ ಪ್ರವೇಶಾತಿ ಪಡೆಯಬಹುದಾಗಿದೆ.

ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳ ವಿವರ ಮತ್ತು ವಿಳಾಸ, ದೂರವಾಣಿ ಸಂಖ್ಯೆಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 8690544544/8800335638 ಸಂಪರ್ಕಿಸಬಹುದಾಗಿದೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ ಇಂತಿದೆ: https://ksoumysuru.ac.in

ಇದನ್ನೂ ಓದಿ | SSLC Exam 2023 | ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಗಣಿತ, ಸಮಾಜ ಶಾಸ್ತ್ರ ಪರೀಕ್ಷಾ ದಿನ ಬದಲು

Exit mobile version