Site icon Vistara News

Nalanda University: ನಳಂದಾ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್‌ನಲ್ಲಿ ಏನೇನಿವೆ?

Nalanda University

ಬಿಹಾರದ ನಳಂದಾ ವಿಶ್ವವಿದ್ಯಾಲಯದ (Nalanda University) ಹೊಸ ಕ್ಯಾಂಪಸ್ (new campus) ಅನ್ನು (bihar) ರಾಜ್‌ಗಿರ್‌ನಲ್ಲಿ ಪ್ರಧಾನಿ (PM) ನರೇಂದ್ರ ಮೋದಿ (narendra modi) ಅವರು ಬುಧವಾರ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ (External Affairs Minister) ಎಸ್. ಜೈಶಂಕರ್ (S Jaishankar) ಮತ್ತು 17 ರಾಷ್ಟ್ರಗಳ ರಾಯಭಾರಿಗಳು ಕೂಡ ಭಾಗವಹಿಸಿದ್ದರು. ಈ ಕ್ಯಾಂಪಸ್‌ ಹಲವು ವಿಶೇಷತೆಗಳನ್ನು ಹೊಂದಿದೆ.

ನಳಂದಾ ವಿಶ್ವವಿದ್ಯಾನಿಲಯವು 137 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈ ವಿಶ್ವವಿದ್ಯಾನಿಲಯವು ಸ್ಕೂಲ್ ಆಫ್ ಹಿಸ್ಟಾರಿಕಲ್ ಸ್ಟಡೀಸ್; ಸ್ಕೂಲ್ ಆಫ್ ಎಕಾಲಜಿ ಮತ್ತು ಎನ್ವಿರಾನ್ಮೆಂಟಲ್ ಸ್ಟಡೀಸ್; ಸ್ಕೂಲ್ ಆಫ್ ಸಸ್ಟೈನಬಲ್ ಡೆವಲಪ್ಮೆಂಟ್ ಅಂಡ್ ಮ್ಯಾನೇಜ್ಮೆಂಟ್ ಹೀಗೆ ಬೌದ್ಧ ಅಧ್ಯಯನಗಳು, ತತ್ತ್ವಶಾಸ್ತ್ರ ಮತ್ತು ತುಲನಾತ್ಮಕ ಧರ್ಮಗಳು ಸೇರಿದಂತೆ ಆರು ಶಾಖೆಗಳನ್ನು ಹೊಂದಿದೆ.


ವಿಶ್ವದ ಮೊದಲ ವಸತಿ ವಿವಿ

ವಿಶ್ವವಿದ್ಯಾನಿಲಯವು ಇತಿಹಾಸದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಸುಮಾರು 1,600 ವರ್ಷಗಳ ಹಿಂದೆ ಸ್ಥಾಪಿಸಲಾದ ಮೂಲ ನಳಂದಾ ವಿಶ್ವವಿದ್ಯಾನಿಲಯವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. 2016ರಲ್ಲಿ ನಳಂದಾದ ಅವಶೇಷಗಳನ್ನು ವಿಶ್ವಸಂಸ್ಥೆಯ ಹೆರಿಟೇಜ್ ಸೈಟ್ ಎಂದು ಘೋಷಿಸಲಾಯಿತು. ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ನಳಂದಾದ ಪ್ರಾಚೀನ ಅವಶೇಷಗಳ ಸ್ಥಳಕ್ಕೆ ಸಮೀಪದಲ್ಲಿದೆ.


ಈ ಕ್ಯಾಂಪಸ್‌ನಲ್ಲಿರುವ ಪ್ರಮುಖ ಸೌಲಭ್ಯಗಳು ಏನೇನು?


ಇದನ್ನೂ ಓದಿ: Narendra Modi: 3ನೇ ಸಲ ಗೆಲ್ಲಿಸಿದ ವಾರಾಣಸಿ ಜನತೆಗೆ ಧನ್ಯವಾದ ಎಂದ ಮೋದಿ; ಗೆದ್ದ ಬಳಿಕ ಮೊದಲ ಭೇಟಿ!

Exit mobile version