Site icon Vistara News

NCC Training : ಎನ್‌ಸಿಸಿ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದಲ್ಲಿ ಐಟಿಐ ಸೆಂಟ್ರಲ್‌ ಶಾಲೆಯ NCC TEAM ಭಾಗಿ

ITI School students

ಬೆಂಗಳೂರು: ಜಕ್ಕೂರಿನ ವಿದ್ಯಾಶಿಲ್ಪ ಅಕಾಡೆಮಿ (VidyaShilpa Academy) (ಓಲ್ಡ್)‌ ಶಾಲೆಯಲ್ಲಿ ಆಯೋಜಿಸಲಾದ ನಂ. 2 ಕರ್ನಾಟಕ ಏರ್‌ (ಟೆಕ್ನಿಕಲ್)‌ ಸ್ಕ್ವಾಡ್ರನ್ ಎನ್.ಸಿ.ಸಿ. ಯೂನಿಟ್‌ನ (NCC Training) ಸಂಯೋಜಿತ ವಾರ್ಷಿಕ ತರಬೇತಿ ಶಿಬಿರದಲ್ಲಿ (Composite Annual Training Camp) ಬೆಂಗಳೂರಿನ ದೂರವಾಣಿ ನಗರದ ಐಟಿಐ ಸೆಂಟ್ರಲ್‌ ಶಾಲೆಯ (ITI Central school) 22 ಕೆಡೆಟ್‌ಗಳು ಭಾಗವಹಿಸಿದ್ದರು. ಎನ್.ಸಿ.ಸಿ. ಸಹ ಅಧಿಕಾರಿ ಬಾಲಕೃಷ್ಣ ಅವರು ತಂಡದ ನೇತೃತ್ವ ವಹಿಸಿದ್ದರು.

ಜಕ್ಕೂರು ಕಾಲೇಜಿನಲ್ಲಿ 10 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಬೆಂಗಳೂರಿನ ಸುಮಾರು 17 ಶಾಲೆಗಳ 570ಕ್ಕೂ ಹೆಚ್ಚು ಕೆಡೆಟ್‌ಗಳು ಭಾಗವಹಿಸಿದ್ದರು. ಪ್ರತಿ ನಿತ್ಯ ಹಲವು ತರಬೇತಿ ಚಟುವಟಿಕೆಗಳು ನಡೆಯುತ್ತಿದ್ದವು. ಒಟ್ಟಾರೆಯಾಗಿ ಇಡೀ ಶಿಬಿರವು ಯೂನಿಟ್‌ನ ಕಮ್ಯಾಂಡಿಂಗ್‌ ಅಧಿಕಾರಿ ಕ್ಯಾಪ್ಟನ್‌ ಪಿ.ಎಫ್.‌ ಖಾನ್‌ರ ನೇತೃತ್ವದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

ಶಿಬಿರದಲ್ಲಿ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆಗಳನ್ನು ತಾವೇ ಮಾಡಿಕೊಳ್ಳುವುದು, ಬೇರೆ ವಿದ್ಯಾರ್ಥಿಗಳ ಜತೆ ಬೆರೆಯುವುದು, ಸಾಮಾಜಿಕ ನಡವಳಿಕೆಗಳನ್ನು ಅರ್ಥ ಮಾಡಿಕೊಂಡರು. ವಿವಿಧ ಉಪನ್ಯಾಸಗಳಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಯಿತು.

ಎನ್‌ಸಿಸಿ ತರಬೇತಿ ಶಿಬಿರದಲ್ಲಿ ನಡೆದ ಚಟುವಟಿಕೆಗಳು

  1. ಬೆಳಗ್ಗೆ 5.30 -6.30 ರವರೆಗೆ ಕರಾಟೆ/ಲಘು ವ್ಯಾಯಾಮ
  2. 7.00 -8.00 ಬೆಳಗಿನ ತಿಂಡಿ ಸ್ವೀಕರಿಸುವ ಸಮಯ
  3. 8.00 -10.00 ಒಂದು ಗಂಟೆಗಳ ಕಾಲ ಕವಾಯತು
  4. 10.00 -10.30 ಟೀ ವಿರಾಮ
  5. 10.30 -12.00 ಪ್ರತಿ ದಿನ ಒಂದೊಂದು ವಿಷಯದ ಬಗ್ಗೆ ಉಪನ್ಯಾಸ
  6. 12.00 -1.00 ಎನ್.ಸಿ.ಸಿ ತರಗತಿಗಳು ನಡೆದವು.
  7. 1.00 -3.00 ಮಧ್ಯಾಹ್ನ ಊಟ ಮತ್ತು ವಿರಾಮ
  8. 3.00 -4.00 ಎನ್‌ಸಿಸಿ ತರಬೇತಿ ತರಗತಿಗಳು
  9. 4.00 -4.30 ಕೆಡೆಟ್‌ಗಳಿಗೆ ಟೀ ವಿರಾಮ
  10. 4.30-6.30 ಕ್ರೀಡಾ ಚಟುವಟಿಕೆ
  11. 7.30 -8.30 ರಾತ್ರಿ ಊಟ
  12. 8.30 -9.30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಇದನ್ನೂ ಓದಿ : 75 Years To NCC: ಎನ್‌ಸಿಸಿಗೆ 75ನೇ ವಾರ್ಷಿಕೋತ್ಸವ, 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಮೋದಿ

ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಬಿರದಿಂದ ಏನೇನು ಅನುಕೂಲ?

  1. ಶಿಬಿರದಲ್ಲಿ ವಿದ್ಯಾರ್ಥಿಗLu ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಸ್ತು ಸಂಯಮ, ಸಮಯಪಾಲನೆಯನ್ನು ಅರಿತರು.
  2. ಐಕ್ಯತೆ, ದೇಶಪ್ರೇಮ, ಸಹ ವಿದ್ಯಾರ್ಥಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಯಿತು.
  3. ಟ್ರಾಫಿಕ್‌ ಸಮಸ್ಯೆ, ಸೈಬರ್‌ ಕ್ರೈಮ್‌, ಅಂಗಾಂಗ ದಾನದ ಮಹತ್ವ, ಆರೋಗ್ಯ ಮತ್ತು ನೈರ್ಮಲ್ಯ ಹೀಗೆ ವಿವಿಧ ಉಪನ್ಯಾಸಗಳಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಯಿತು.
  4. ಎಲ್ಲಾ ವಿದ್ಯಾರ್ಥಿಗಳಿಗೂ ಜಕ್ಕೂರಿನ ಏರೋಡ್ರೋಮ್‌ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
  5. ಏರ್‌ ಟ್ರಾಫಿಕ್‌ ಕಂಟ್ರೋಲ್‌ ಮತ್ತು ಏರ್‌ಕ್ರಾಫ್ಟ್ ನ ವಿವಿಧ ಭಾಗಗಳ ಬಗ್ಗೆ ಮಾಹಿತಿ ನೀಡಲಾಯಿತು.

Exit mobile version