Site icon Vistara News

NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

NEET PG-2024

ಹೊಸದಿಲ್ಲಿ: ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (NBEMS) ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಸ್ನಾತಕೋತ್ತರ ಅಥವಾ ನೀಟ್ ಪಿಜಿ- 2024ಕ್ಕಾಗಿ (NEET PG-2024) ರಾಷ್ಟ್ರೀಯ ಅರ್ಹತೆ (National Eligibility) ಮತ್ತು ಪ್ರವೇಶ ಪರೀಕ್ಷೆಗಾಗಿ ( Entrance Test) ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ.

ಪರೀಕ್ಷೆ ಬರೆಯಲು ಅರ್ಹರಾಗಿರುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ natboard.edu.in ಮತ್ತು nbe.edu.inನಲ್ಲಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಮೇ 6ರಂದು ರಾತ್ರಿ 11.55ರವರೆಗೆ ಅವಕಾಶವಿದೆ. ಕೊನೆಯ ಕ್ಷಣದವರೆಗೆ ಕಾಯುವ ಬದಲು ತಕ್ಷಣದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

ಈ ಕುರಿತು ಎನ್‌ಬಿಇ ಮಾಹಿತಿ ಕರಪತ್ರವನ್ನೂ ಬಿಡುಗಡೆ ಮಾಡಿದ್ದು, ಅಧಿಕೃತ ವೇಳಾಪಟ್ಟಿಯ ಪ್ರಕಾರ NEET PG- 2024 ಪರೀಕ್ಷೆಯು ಜೂನ್ 23 ರಂದು ನಡೆಯಲಿದೆ ಮತ್ತು ಫಲಿತಾಂಶಗಳನ್ನು ಜುಲೈ 15 ರಂದು ಘೋಷಿಸಲಾಗುತ್ತದೆ. NEET PG- 2024 ಪರೀಕ್ಷೆಯ ಬರೆಯುವ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳನ್ನು ಜೂನ್ 18ರಂದು ನೀಡಲಾಗುತ್ತದೆ.

ಇದನ್ನೂ ಓದಿ: New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

ಅರ್ಜಿ ಸಲ್ಲಿಸಲು ಸಿದ್ಧರಿರುವ ಅಭ್ಯರ್ಥಿಗಳು ಕಟ್-ಆಫ್ ದಿನಾಂಕವನ್ನು ಗಮನಿಸಿ. NEET- PG 2024ರ ಅರ್ಹತೆ ಪಡೆಯಲು ಇಂಟರ್ನ್‌ಶಿಪ್ ಆಗಸ್ಟ್ 15ರಂದು ಪೂರ್ಣಗೊಳ್ಳಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯ ವಿವರಗಳು ಮತ್ತು ಅನ್ವಯವಾಗುವ ಮೀಸಲಾತಿಗಳನ್ನು ಒಳಗೊಂಡಿರುವ ಪ್ರತ್ಯೇಕ ಕೈಪಿಡಿಯನ್ನು ಅನಂತರ ಗೊತ್ತುಪಡಿಸಿದ ಕೌನ್ಸೆಲಿಂಗ್ ಪ್ರಾಧಿಕಾರ ಬಿಡುಗಡೆ ಗೊಳಿಸಲಿದೆ.

ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪ್ಲಾಟ್‌ಫಾರ್ಮ್‌ನಲ್ಲಿ ಜೂನ್ 23ರಂದು NEET PG- 2024ರ ಪರೀಕ್ಷೆ ನಡೆಸಲಿದೆ. ಅರ್ಹತಾ ಮಾನದಂಡಗಳು, ಶುಲ್ಕ ರಚನೆ, ಪರೀಕ್ಷೆಯ ಯೋಜನೆ ಮತ್ತು ಇತರ ವಿವರಗಳು NBEMS ವೆಬ್‌ಸೈಟ್ https://natboard.edu.in ಅನ್ನು ಏಪ್ರಿಲ್ 16ರಿಂದ ಲಭ್ಯವಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?

NEET PG- 2024ರ ಪರೀಕ್ಷೆ ಬರೆಯಲು ಆಸಕ್ತರಿರುವ ಅಭ್ಯರ್ಥಿಗಳು NBEಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ ಕಾಣಿಸುವ NEET PG ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳಿಕ ತೆರೆಯುವ ಹೊಸ ಪುಟದಲ್ಲಿ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಕೇಳಿರುವ ಮಾಹಿತಿಯನ್ನು ಹಾಕಿ ನೊಂದಾಯಿಸಿಕೊಳ್ಳಿ.
ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಿ. ಬಳಿಕ ಸಲ್ಲಿಸು ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿಯನ್ನು ಸ್ವೀಕರಿಸುವವರೆಗೆ ಕಾಯಿರಿ. ಶುಲ್ಕವನ್ನು ಪಾವತಿಸಿ. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ. ಅಗತ್ಯಕ್ಕಾಗಿ ಅದರ ಹಾರ್ಡ್ ಪ್ರತಿಯನ್ನು ತೆಗೆದಿರಿಸಿಕೊಳ್ಳಿ.

ಅರ್ಜಿ ಶುಲ್ಕಗಳು

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 3,500 ರೂ., ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ 2,500 ರೂ. ಆಗಿದೆ.

ಹೇಗಿರುತ್ತದೆ ಪ್ರಶ್ನೆ ಪತ್ರಿಕೆ?

NEET PG ಪ್ರವೇಶ ಪರೀಕ್ಷೆಯನ್ನು ರಾಷ್ಟ್ರದ ವೈದ್ಯಕೀಯ ಎಂಡಿ, ಎಂಎಸ್ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಪರೀಕ್ಷೆಯ ಪತ್ರಿಕೆಯು 800 ಅಂಕಗಳನ್ನು ಹೊಂದಿರುತ್ತದೆ ಮತ್ತು ಒಟ್ಟು 200 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಸರಿಯಾದ ಉತ್ತರಕ್ಕಾಗಿ, ಅಭ್ಯರ್ಥಿಗೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ ಮತ್ತು ಪ್ರತಿ ತಪ್ಪಾದ ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ.

Exit mobile version