Site icon Vistara News

NEET UG 2024: ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು? ಈ ಟಾಪರ್‌ ಹೇಳೋದು ಕೇಳಿ

NEET UG 2024

ಮಹಾರಾಷ್ಟ್ರ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (NEET-UG) ಮಹಾರಾಷ್ಟ್ರ (maharastra) ನಾಗ್ಪುರದ ವೇದ್ ಸುನೀಲ್‌ಕುಮಾರ್ ಶೆಂದೆ (Ved Sunilkumar Shende) ಅವರು ಭಾರತದಲ್ಲೇ (India) ಅಗ್ರ ಸ್ಥಾನವನ್ನು ಗಳಿಸಿದ್ದಾರೆ. ಇವರು ಶೇ. 99.99 ಅಂಕಗಳನ್ನು ಗಳಿಸಿ ಅಖಿಲ ಭಾರತ ಶ್ರೇಣಿ (AIR) 1 ಅನ್ನು ಗಳಿಸಿದ್ದಾರೆ.

ತಮ್ಮ ಈ ಸಾಧನೆಯ ಕುರಿತು ಮಾತನಾಡಿರುವ ಅವರು, ನೀಟ್ ಫಲಿತಾಂಶದಿಂದ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಕಾಲ ಶ್ರದ್ಧೆಯಿಂದ ಪರೀಕ್ಷೆಗೆ ತಯಾರಿ ನಡೆಸಿರುವ ಅವರು ತಮ್ಮ ಅನುಭವವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಅಧ್ಯಯನ ಮತ್ತು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ನಿರಂತರ ಪರೀಕ್ಷೆಗಳನ್ನು ನಡೆಸಿ ಅಭ್ಯಾಸ ನಡೆಸುತ್ತಿದ್ದೆ. ನಿರಂತರ ಪರೀಕ್ಷೆಗಳನ್ನು ಬರೆಯುತ್ತಿದ್ದೆ. ಪರೀಕ್ಷೆಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.

ಸಮಯ ನಿರ್ವಹಣೆಯ ಕುರಿತು ಮಾತನಾಡಿರುವ ಅವರು, ಬೆಳಗ್ಗೆ 4 ಗಂಟೆಗೆ ಎದ್ದು ಪೂರ್ಣ ಪಠ್ಯಕ್ರಮ ಪರೀಕ್ಷೆಗಳನ್ನು ಅಭ್ಯಾಸ ಮಾಡುತ್ತೇನೆ. ಆಗಾಗ ವಿರಾಮದೊಂದಿಗೆ ಮತ್ತು ನಿಗದಿತ ಸಮಯವಿಲ್ಲದೆ ಒಟ್ಟು ಆರರಿಂದ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ ಹೇಳಿದ್ದಾರೆ.

ನನಗೆ ಯಾವುದೇ ಒತ್ತಡವಿರಲಿಲ್ಲ. ಕೊನೆಯವರೆಗೂ ಆಸಕ್ತಿಯಿಂದಲೇ ಅಧ್ಯಯನ ನಡೆಸಿದ್ದೇನೆ ಎಂದು ಹೇಳಿದ ಅವರು, ಅಧ್ಯಯನದ ವೇಳೆಯಲ್ಲಿ ನಾನು ಯಾವುದೇ ಒತ್ತಡವನ್ನು ಅನುಭವಿಸಲಿಲ್ಲ. ಆದರೆ ಹೆಚ್ಚು ಅಧ್ಯಯನಕ್ಕೆ ಒತ್ತು ಕೊಟ್ಟಿದ್ದರಿಂದ ನನಗೆ ಆಯಾಸವಾಗಿದ್ದು ನಿಜ ಎಂದಿದ್ದಾರೆ.

ಒತ್ತಡ ನಿರ್ವಹಣೆ ಹೇಗಿತ್ತು?

ಒತ್ತಡ ನಿರ್ವಹಣೆ ಕುರಿತು ಮಾತನಾಡಿರುವ ಅವರು, ದೈನಂದಿನ ಓದಿನಿಂದ ಒತ್ತಡ ಉಂಟಾದಾಗ ಅದನ್ನು ನಿರ್ವಹಿಸುವಲ್ಲಿ ಸ್ನೇಹಿತರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಉತ್ತಮ ಸ್ನೇಹಿತರನ್ನು ಹೊಂದುವುದು ಮುಖ್ಯ ಮತ್ತು ನಾನು ಉತ್ತಮ ಸ್ನೇಹಿತರನ್ನು ಹೊಂದಲು ಅದೃಷ್ಟಶಾಲಿಯಾಗಿದ್ದೇನೆ. ನನ್ನ ಸ್ನೇಹಿತರೊಬ್ಬರು ಸಹ 720 ಅಂಕಗಳನ್ನು ಗಳಿಸಿದರು ಮತ್ತು AIR 1 ಗಳಿಸಿದರು. ಅವರ ಸಮರ್ಪಣೆಯನ್ನು ನೋಡಿ ನನಗೆ ಪ್ರೇರಣೆಯಾಯಿತು. ಯಾಕೆಂದರೆ ಅವರು ನನಗಿಂತ ಹೆಚ್ಚು ಅಧ್ಯಯನ ಮಾಡಿದ್ದಾರೆ. ಅವರು 10-12-14 ಗಂಟೆಗಳ ಕಾಲ ಅಧ್ಯಯನಕ್ಕೆ ಸಮಯ ಮೀಸಲು ಇಟ್ಟಿದ್ದರು. ಆದರೆ ಪರೀಕ್ಷೆಗಳಲ್ಲಿ ನಮ್ಮ ಅಂಕಗಳನ್ನು ಹೋಲಿಸಲಾಗುವುದಿಲ್ಲ ಎಂದರು.

ಭವಿಷ್ಯದ ಕುರಿತು ಮಾತನಾಡಿದ ಅವರು, ಎಐಐಎಂಎಸ್ ದೆಹಲಿಗೆ ಅರ್ಜಿ ಸಲ್ಲಿಸುವ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

ವೈದ್ಯಕೀಯ ವೃತ್ತಿಯ ಒಲವು

ವೈದ್ಯಕೀಯ ವೃತ್ತಿ ಮತ್ತು ಜೀವಶಾಸ್ತ್ರದ ಮೇಲಿನ ಆಸಕ್ತಿಯಿಂದಾಗಿ ಶೆಂಡೆ ಅವರು ನೀಟ್ ಯುಜಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಒಲವು ತೋರಿರುವುದಾಗಿ ಹೇಳಿದರು.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ಶೆಂಡೆ ಅವರ ತಾಯಿ ಇಂದಿರಾಗಾಂಧಿ ಮತ್ತು ಶೆಂಡೆ ಅವರ ತಂದೆ ಇಎನ್‌ಟಿ ಶಸ್ತ್ರಚಿಕಿತ್ಸಕರಾದ ಸುನೀಲಕುಮಾರ ಶೆಂದೆ ಮಗನ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆತನ ಕಠಿಣ ಪರಿಶ್ರಮ ಮತ್ತು ಅಧ್ಯಯನದ ಬಗ್ಗೆ ಸ್ಥಿರತೆ ಅಂತಿಮವಾಗಿ ಫಲ ನೀಡಿದೆ. ಕಲಿಸಿದ ವಿಷಯಗಳನ್ನು ಆತ ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದ. ಎಂದಿಗೂ ಒತ್ತಡಕ್ಕೆ ಒಳಗಾಗಲಿಲ್ಲ; ಕೆಲವೊಮ್ಮೆ ಒತ್ತಡವನ್ನು ನಿವಾರಿಸಲು ಚೆಸ್ ಆಡುತ್ತಿದ್ದ ಎಂದು ತಿಳಿಸಿದರು.

Exit mobile version