ನವದೆಹಲಿ/ಬೆಂಗಳೂರು : ದೇಶಾದ್ಯಂತ ಸುಮಾರು 259 ಕೇಂದ್ರದಲ್ಲಿ ಜೂನ್ 23ಕ್ಕೆ ನೀಟ್ ಪಿಜಿ 2024 (NEETPG 2024) ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ. ಜೂನ್ 18ಕ್ಕೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗೆ ನೋಂದಾಯಿಸಿ ಕೊಂಡಿರುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನ ಅಧಿಕೃತ ವೆಬ್ಸೈಟ್ natboard.edu.in ಡೌನ್‌ಲೋಡ್ ಮಾಡಬಹುದು.
ಅರ್ಹ ಅಭ್ಯರ್ಥಿಗಳು ತಮ್ಮ ಲಾಗಿನ್ ಐಡಿ ಮೂಲಕ ನೀಟ್ ಪಿಜಿ ಹಾಲ್ ಟಿಕೆಟ್ 2024 ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಬೇಕು.
ಇದನ್ನೂ ಓದಿ: PGCET 2024: ಪಿಜಿಸಿಇಟಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ; ಶುಲ್ಕ ಪಾವತಿಗೂ ಅವಕಾಶ
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
- -ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ಅಧಿಕೃತ ವೆಬ್‌ಸೈಟ್‌ಗೆ nbe.edu.in ಹೋಗಿ.
- -ಮುಖಪುಟದಲ್ಲಿ “ನೀಟ್ ಪಿಜಿ” ಲಿಂಕ್ ಕ್ಲಿಕ್ ಮಾಡಿ. ಇದು ಸಾಮಾನ್ಯವಾಗಿ “ಪರೀಕ್ಷೆಗಳು” ಅಥವಾ “ಪ್ರಮುಖ ಲಿಂಕ್‌ಗಳು” ವಿಭಾಗದಲ್ಲಿ ಕಂಡುಬರುತ್ತದೆ.
- -ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ನಮೂದಿಸಿ.
- -ಒಮ್ಮೆ ಲಾಗ್ ಇನ್ ಆದ ನಂತರ, ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವ ಆಯ್ಕೆ ಇರುತ್ತದೆ.
- -ಡೌನ್ಲೋಡ್ ಮಾಡುವ ಮೊದಲು, ಪ್ರವೇಶ ಪತ್ರದಲ್ಲಿನ ಎಲ್ಲಾ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ನಿಮ್ಮ ಹೆಸರು, ಛಾಯಾಚಿತ್ರ, ಪರೀಕ್ಷಾ ದಿನಾಂಕ ಮತ್ತು ಪರೀಕ್ಷಾ ಕೇಂದ್ರದ ವಿವರಗಳು ಇರಲಿದೆ.
- -ಪ್ರವೇಶ ಪತ್ರವನ್ನು ಸೇವ್ ಮಾಡಲು ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ. ಫೈಲ್ ಸಾಮಾನ್ಯವಾಗಿ ಪಿಡಿಎಫ್ ರೂಪದಲ್ಲಿರುತ್ತದೆ.
- -ಪ್ರವೇಶ ಪತ್ರದ ಕನಿಷ್ಠ ಎರಡು ಪ್ರತಿಗಳ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಪ್ರವೇಶ ಪತ್ರದಲ್ಲಿ ಫೋಟೋ ಅಂಟಿಸಲು ಜಾಗ ಇರಲಿದೆ.
- -ಪರೀಕ್ಷಾ ಕೇಂದ್ರಕ್ಕೆ ಏನು ತರಬೇಕು, ನಿಷೇಧಿತ ವಸ್ತುಗಳ ಬಗ್ಗೆ ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನ ಓದಿಕೊಳ್ಳಿ. ಯಾವ ಸಮಯದೊಳಗೆ ನೀವೂ ಪರೀಕ್ಷಾ ಕೇಂದ್ರದೊಳಗೆ ಇರಬೇಕು ಎಂಬುದನ್ನೂ ಸೂಚಿಸಲಾಗುತ್ತದೆ.
ಪರೀಕ್ಷಾ ಕೇಂದ್ರದಲ್ಲಿ ಇದೆಲ್ಲವೂ ನಿರ್ಬಂಧ
ಪಠ್ಯ ಸಾಮಗ್ರಿ (ಮುದ್ರಿತ ಅಥವಾ ಲಿಖಿತ), ಟಿಪ್ಪಣಿಗಳು, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ರೈಟಿಂಗ್ ಪ್ಯಾಡ್ ಹಾಗೂ ಮೊಬೈಲ್ ಫೋನ್, ಬ್ಲೂಟೂತ್, ಇಯರ್ ಫೋನ್‌ಗಳು, ಮೈಕ್ರೊಫೋನ್, ಹೆಲ್ತ್ ಬ್ಯಾಂಡ್, ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್ ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಇನ್ನೂ ಹುಡುಗಿಯರು ಬ್ರೇಸ್ ಲೆಟ್ ಗಳು, ಉಂಗುರ, ಕಿವಿಯೋಲೆಗಳು, ನೋಸ್-ಪಿನ್, ಚೈನ್/ ನಂತಹ ಎಲ್ಲಾ ಆಭರಣಗಳು/ ಪೆಂಡೆಂಟ್, ಬ್ಯಾಡ್ಜ್, ಬ್ರೂಚ್ ಎಲ್ಲವನ್ನೂ ನಿಷೇಧಿಸಲಾಗಿದೆ. ಜತೆಗೆ ವ್ಯಾಲೆಟ್, ಕ್ಯಾಪ್ , ನೀರಿನ ಬಾಟೆಲ್ ಕೂಡ ಕೊಂಡೊಯ್ಯುವಂತಿಲ್ಲ.
ಜುಲೈ 15ರೊಳಗೆ ಫಲಿತಾಂಶ ಪ್ರಕಟ
ಇನ್ನೂ ನೀಟ್ ಪಿಜಿ ಫಲಿತಾಂಶವನ್ನು ಜುಲೈ 15ರೊಳಗಾಗಿ ಪ್ರಕಟಿಸಲಾಗುವುದು ಎಂದು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಮೆಡಿಕಲ್ ಸೈನ್ಸ್ ತಿಳಿಸಿದೆ. ನೀಟ್-ಪಿಜಿ 2024 ಗೆ ಅರ್ಹತೆ ಪಡೆಯಲು ಇಂಟರ್ನ್ಶಿಪ್ ಪೂರ್ಣಗೊಳಿಸಲು ಕಟ್ ಆಫ್ ದಿನಾಂಕವನ್ನು ಆಗಸ್ಟ್ 15ಕ್ಕೆ ನಿಗದಿ ಪಡಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ