Site icon Vistara News

NIRF 2024 Rank: ದೇಶದಲ್ಲೇ ಮದ್ರಾಸ್ ಐಐಟಿ ಬೆಸ್ಟ್; ಬೆಂಗಳೂರಿನ ಐಐಎಸ್‌ಸಿ ನೆಕ್ಸ್ಟ್;‌ ಇಲ್ಲಿದೆ ಪೂರ್ಣ ಪಟ್ಟಿ

NIRF 2024 Rank

ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಐಐಟಿ ಮದ್ರಾಸ್ (IIT Madras) ಅಗ್ರ ಸ್ಥಾನ ಪಡೆದಿದ್ದು, ಬೆಂಗಳೂರಿನ ಐಐಎಸ್‌ಸಿ (IISC Bangalore) ಎರಡನೇ ಸ್ಥಾನ ಪಡೆದಿದೆ. ಬಾಂಬೆ ಐಐಟಿ (Bombay IIT) ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿಗೆ ಶ್ರೇಯಾಂಕ ನೀಡುವ The National Institutional Ranking Framework (NIRF) ನೀಡಿರುವ ಈ ಶ್ರೇಯಾಂಕಗಳನ್ನು (NIRF 2024 Rank) ಭಾರತದ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಎನ್‌ಐಆರ್‌ಎಫ್ 2024ರ ಶ್ರೇಯಾಂಕವನ್ನು ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ವರ್ಷ ಐಐಟಿ ಮದ್ರಾಸ್ ಮೊದಲ ಸ್ಥಾನ ಗಳಿಸಿದ್ದು, ಐಐಎಸ್‌ಸಿ ಬೆಂಗಳೂರು ಮತ್ತು ಐಐಟಿ ಬಾಂಬೆ ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವವಿದ್ಯಾನಿಲಯ, ಕಾಲೇಜು, ಸಂಶೋಧನಾ ಸಂಸ್ಥೆ, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು, ನಾವೀನ್ಯತೆ, ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 16 ವಿವಿಧ ವಿಭಾಗಗಳಿಗೆ ಶ್ರೇಯಾಂಕಗಳನ್ನು ಇದರಲ್ಲಿ ಬಿಡುಗಡೆ ಮಾಡಲಾಗಿದೆ. ರಾಜ್ಯ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ ಮತ್ತು ಮುಕ್ತ ವಿಶ್ವವಿದ್ಯಾನಿಲಯ ಶ್ರೇಯಾಂಕಗಳು ಎನ್ ಐಆರ್ ಎಫ್ ಶ್ರೇಯಾಂಕದ ವರ್ಗಗಳಿಗೆ ಇತ್ತೀಚಿನ ಸೇರ್ಪಡೆಗಳಾಗಿವೆ.

NIRF 2024 Rank


ಟಾಪ್ 10ನಲ್ಲಿರುವ ಸಂಸ್ಥೆಗಳು

ಎನ್‌ಐಆರ್‌ಎಫ್ ನೀಡಿರುವ ಶ್ರೇಯಾಂಕದ ಆಧಾರದ ಮೇಲೆ ಟಾಪ್ ಹತ್ತರಲ್ಲಿ ಈ ಕೆಳಗಿನ ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಂಡಿವೆ. ಐಐಟಿ ಮದ್ರಾಸ್, ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ಖರಗ್‌ಪುರ, ಏಮ್ಸ್, ಹೊಸದಿಲ್ಲಿ, ಐಐಟಿ ರೂರ್ಕಿ, ಐಐಟಿ ಗುವಾಹಟಿ, ಜೆಎನ್‌ಯು, ಹೊಸದಿಲ್ಲಿ.


ಎನ್ಐಆರ್‌ಎಫ್ ರಾಂಕಿಂಗ್ 2024 ಅನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತದ ಒಂಬತ್ತನೇ ಆವೃತ್ತಿಯ ಶ್ರೇಯಾಂಕವನ್ನು ಬಿಡುಗಡೆ ಮಾಡಿದರು. ಸಚಿವಾಲಯವು 2025ರಿಂದ ಸುಸ್ಥಿರತೆಯ ಶ್ರೇಯಾಂಕದ ವರ್ಗವನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು ಎಂಹೆಚ್ ಆರ್ ಡಿ ಸ್ಥಾಪಿಸಿದ ಕೋರ್ ಕಮಿಟಿಯಿಂದ ಬಂದ ಶಿಫಾರಸುಗಳನ್ನು ಆಧರಿಸಿ ಎನ್ಐಆರ್‌ಎಫ್ ಈ ಶ್ರೇಯಾಂಕವನ್ನು ನೀಡಿದೆ. ಕೋರ್ ಕಮಿಟಿಯು ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು ಎಂಎಚ್‌ಆರ್‌ಡಿ ಸ್ಥಾಪಿಸಿದ ಶ್ರೇಯಾಂಕ ಸಂಸ್ಥೆಗಳಿಗೆ ವಿವಿಧ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಪ್ರಭಾವ ಮತ್ತು ಒಳಗೊಳ್ಳುವಿಕೆ ಮತ್ತು ಗ್ರಹಿಕೆಗಳ ಮೇಲೆ ಸಂಸ್ಥೆಗಳಿಗೆ ಶ್ರೇಣಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Submarines: ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳಿಗಾಗಿ ಕೇಂದ್ರಕ್ಕೆ ಭಾರತೀಯ ನೌಕಾಪಡೆ ಮನವಿ

ಕಳೆದ ವರ್ಷದ ಶ್ರೇಯಾಂಕ ಹೇಗಿತ್ತು?

2023ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು. ಅನಂತರ ಐಐಎಸ್‌ಸಿ ಬೆಂಗಳೂರು ಎರಡನೇ ಸ್ಥಾನ ಮತ್ತು ಐಐಟಿ ದೆಹಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. 2023ರಲ್ಲಿ ಐಐಟಿ ಮದ್ರಾಸ್ ಶೇ. 86.69 ಅಂಕಗಳನ್ನು ಪಡೆದುಕೊಂಡಿದ್ದು, ಐದನೇ ಬಾರಿಗೆ ಅಗ್ರಸ್ಥಾನದಲ್ಲಿ ಹೊರಹೊಮ್ಮಿತ್ತು. ಎನ್‌ಐಆರ್‌ಎಫ್ ಅನ್ನು ಎಂಎಚ್‌ಆರ್‌ಡಿ ಅನುಮೋದಿಸಿದ್ದು, 2015ರ ಸೆಪ್ಟೆಂಬರ್ 29ರಲ್ಲಿ ಇದನ್ನು ಮೊದಲಬಾರಿಗೆ ಬಿಡುಗಡೆ ಮಾಡಲಾಗಿದೆ.

Exit mobile version