Site icon Vistara News

PSI Exam: ಲೋಕಸಭೆ ಚುನಾವಣೆ; ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆ ಮುಂದೂಡಿಕೆ

PSI exam scheduled for May 8 postponed due to Lok Sabha elections

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 8 ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆಯನ್ನು (PSI Exam) ಮುಂದೂಡಲಾಗಿದೆ. ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್)‌, ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 402 ಖಾಲಿ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿತ್ತು. ಅದರಂತೆ ಮೇ. 8ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು.

ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ಮೇ.8ಕ್ಕೆ ನಡೆಯಬೇಕಿದ್ದ ಎಲ್ಲ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷೆಯ ದಿನಾಂಕ‌ವನ್ನು ಪ್ರಾಧಿಕಾರದ ವೈಬ್‌ಸೈಟ್‌ನಲ್ಲಿ ಹೊರಡಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.

ಯುಪಿಎಸ್‌ಸಿ ಪರೀಕ್ಷೆಯೂ ಮುಂದೂಡಿಕೆ

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗದ (UPSC) ಪೂರ್ವಭಾವಿ ಪರೀಕ್ಷೆಯನ್ನು (UPSC Prelims) ಮುಂದೂಡಿಕೆ ಮಾಡಲಾಗಿದೆ. 2024ನೇ ಸಾಲಿನ ಪೂರ್ವಭಾವಿ ಪರೀಕ್ಷೆಯನ್ನು ಮೇ 26ರ ಬದಲು ಜೂನ್‌ 16ರಂದು ನಡೆಸಲಾಗುವುದು ಎಂದು ಯುಪಿಎಸ್‌ಸಿ ತಿಳಿಸಿದೆ. ಮೇ 26ರಂದು ನಡೆಸಲಾಗುವುದು ಎಂದು ಯುಪಿಎಸ್‌ಸಿಯು ಮಾರ್ಚ್‌ 19ರಂದು ಘೋಷಿಸಿತ್ತು. ಈಗ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ.

“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎಸ್‌ಸಿಯು ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ತೀರ್ಮಾನಿಸಿದೆ. ಜೂನ್‌ 16ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಭಾರತೀಯ ಅರಣ್ಯ ಸೇವಾ ಪರೀಕ್ಷೆಯನ್ನೂ ಜೂನ್‌ 16ರಂದು ನಡೆಸಲು ತೀರ್ಮಾನಿಸಲಾಗಿದೆ” ಎಂದು ಮಾಹಿತಿ ನೀಡಿದೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯು ಸೆಪ್ಟೆಂಬರ್‌ 20ರಿಂದ 5 ದಿನಗಳವರೆಗೆ ನಡೆಯಲಿದೆ. ಪ್ರತಿ ವರ್ಷವೂ ಯುಪಿಎಸ್‌ಯು ಮೂರು ಹಂತಗಳಲ್ಲಿ ನಾಗರಿಕ ಸೇವಾ ಪರೀಕ್ಷೆ ನಡೆಸುತ್ತದೆ.

ಹೀಗಿದೆ 7 ಹಂತಗಳಲ್ಲಿ ಚುನಾವಣೆ ದಿನಾಂಕ

ಮೊದಲ ಹಂತ: ಏಪ್ರಿಲ್‌ 19102 ಕ್ಷೇತ್ರಗಳು

2ನೇ ಹಂತ: ಏಪ್ರಿಲ್‌ 2689 ಕ್ಷೇತ್ರಗಳು

3ನೇ ಹಂತ: ಮೇ 794 ಕ್ಷೇತ್ರಗಳು

4ನೇ ಹಂತ: ಮೇ 1396 ಕ್ಷೇತ್ರಗಳು

5ನೇ ಹಂತ: ಮೇ 2049 ಕ್ಷೇತ್ರಗಳು

6ನೇ ಹಂತ: ಮೇ 2557 ಕ್ಷೇತ್ರಗಳು

7ನೇ ಹಂತ: ಜೂನ್‌ 157 ಕ್ಷೇತ್ರಗಳು

ಏಪ್ರಿಲ್‌ 19ರಿಂದ ಜೂನ್‌ 1ರ ಅವಧಿಯಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನವು ಏಪ್ರಿಲ್‌ 19ರಿಂದ ಆರಂಭವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version