Site icon Vistara News

Sanskrit Classes | ಮಕ್ಕಳಿಗೆ ಆನ್‌ಲೈನ್‌ನಲ್ಲಿ ಸಂಸ್ಕೃತ ಕಲಿಯಲು ಅವಕಾಶ

Sanskrit Classes

ಬೆಂಗಳೂರು: ಮಕ್ಕಳಿಗೆ ದೇವನಾಗರೀ ಲಿಪಿಯ ಪರಿಚಯ ಮಾಡಿಸಲು ಮತ್ತು ಸಂಸ್ಕೃತ ಶ್ಲೋಕಗಳನ್ನು ಕಲಿಸಲು ಡಾ. ಗಣಪತಿ ಹೆಗಡೆ ಆನ್‌ಲೈನ್‌ನಲ್ಲಿ “ಸಂಸ್ಕೃತಮ್‌ʼʼ ಎಂಬ ತರಗತಿಗಳನ್ನು (Sanskrit Classes) ಆರಂಭಿಸಲಿದ್ದಾರೆ.

ಜನವರಿ 20 ರಿಂದ ಈ ತರಗತಿಗಳು ಆರಂಭವಾಗಲಿದ್ದು, ಸಂಸ್ಕಾರ ಶ್ಲೋಕಗಳನ್ನು ಮತ್ತು ಶ್ಲೋಕಾರ್ಥಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಸಂಸ್ಕೃತ ಲೇಖನಾಭ್ಯಾಸ ಮತ್ತು ಸಂಸ್ಕೃತ ಮಾತನಾಡಲು, ಲಘುವಾಕ್ಯ ನಿರ್ಮಾಣ ಮಾಡಲು, ಪದಗಳ ಪರಿಚಯ, ಭಾಷಾ ಪ್ರವೇಶ ಕಲಿಸಲಾಗುತ್ತದೆ.

ನಿತ್ಯ ಸಂಜೆ 6 ರಿಂದ 6.30 ರವರೆಗೆ 15 ದಿನಗಳ ಕಾಲ ಪಾಠ ನಡೆಯುತ್ತದೆ. ಪಿಪಿಟಿ, ವಿಡಿಯೋ, ಚಾರ್ಟ್‌ಗಳ ಮೂಲಕ ಸರಳವಾಗಿ ಮತ್ತು ಸಲಭ ವಿಧಾನಗಳ ಮೂಲಕ ಸಂಸ್ಕೃತವನ್ನು ಕಲಿಸಲಾಗುತ್ತದೆ. 6 ರಿಂದ 12ವರ್ಷದೊಳಗಿನ ಮಕ್ಕಳು ಮಾತ್ರ ಈ ತರಗತಿಯಲ್ಲಿ ಭಾಗವಹಿಸಬಹುದಾಗಿದೆ.

ಆಸಕ್ತರು whatsapp ಸಂಖ್ಯೆ 8867099655 ಮೂಲಕ ಹೆಸರು ನೊಂದಾಯಿಸಿಕೊಂಡು (ಕರೆ ಮಾಡಲು ಅವಕಾಶವಿರುವುದಿಲ್ಲ) ಹೆಚ್ಚಿನ ಮಾಹಿತಿ ಪಡೆಯಬಹುದು.

ಇದನ್ನೂ ಓದಿ| ಕನ್ನಡ ಸಾಹಿತ್ಯ ಸಮ್ಮೇಳನ | ದ್ರಾವಿಡ ಭಾಷೆಗಳು ಸಂಸ್ಕೃತದ ಸಾಕು ಮಕ್ಕಳು: ಪ್ರಧಾನ್‌ ಗುರುದತ್‌

Exit mobile version