Site icon Vistara News

SSLC Topper: ದೇಹರೂಪದ ಕಾರಣ ಟ್ರೋಲ್ ಗೆ ಗುರಿಯಾದ ಎಸ್ ಎಸ್ ಎಲ್ ಸಿ ಟಾಪರ್ ಬೆಂಬಲಕ್ಕೆ ನಿಂತ ನೆಟ್ಟಿಗರು

SSLC Topper

ಲಖನೌ: ಎಸ್ ಎಸ್ ಎಲ್ ಸಿಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲೇ ಟಾಪರ್ (SSLC Topper) ಆಗಿರುವ ಬಾಲಕಿಯೊಬ್ಬಳು ತನ್ನ ದೇಹರೂಪದ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ (social media) ಟ್ರೋಲ್ ಗೆ (troll) ಗುರಿಯಾದರೂ ಸಾಕಷ್ಟು ಮಂದಿಯಿಂದ ಅವಳಿಗೆ ಬೆಂಬಲ ಸಿಕ್ಕಿದೆ.

ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಾ ಪರಿಷತ್ ಇತ್ತೀಚೆಗೆ 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ಸೀತಾಪುರದ (sitapur) ನಿವಾಸಿ ಪ್ರಾಚಿ ನಿಗಮ್ (prachi nigam) 10ನೇ ತರಗತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದ್ದಾಳೆ. ಅವಳ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಕೆಲವರು ಅವಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಿಗಮ್ ತನ್ನ ಸಾಧನೆಯಿಂದ ಕುಟುಂಬಕ್ಕೆ ಹೆಮ್ಮೆ ತಂದಿದ್ದರೆ ಆಕೆಯ ಮುಖದ ವೈಶಿಷ್ಟ್ಯಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಗುರಿಯಾದರು.

ಸಾಕಷ್ಟು ಮಂದಿ ಆಕೆಯನ್ನು ಟ್ರೋಲ್ ಮಾಡಿದರೂ ಈ ಟ್ರೋಲಿಂಗ್ ಅನ್ನು ಗಮನಿಸಿದ ಕೆಲವು ನೆಟ್ಟಿಗರು ಪ್ರಾಚಿ ನಿಗಮ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೇ ಆಕೆಯನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Which is best after SSLC: ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಇಲ್ಲಿದೆ ಉಪಯುಕ್ತ ಮಾಹಿತಿ

ಇನ್ನು ಕೆಲವರು ಆನ್‌ಲೈನ್ ಟ್ರೋಲ್‌ಗಳು ನಿಗಮ್ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂದು ಗಮನ ಸೆಳೆದಿದ್ದಾರೆ. ಇನ್ನು ಕೆಲವರು ಹುಡುಗಿಯನ್ನು ಅಭಿನಂದಿಸುತ್ತಾ ಅವಳನ್ನು ತಮಾಷೆ ಮಾಡುತ್ತಿದ್ದವರಿಗೆ ತಿರುಗೇಟು ನೀಡಿದರು.


ಯುಪಿ 10ನೇ ತರಗತಿಯ ಫಲಿತಾಂಶ

ಪ್ರಾಚಿ ನಿಗಮ್ 10ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 600ರಲ್ಲಿ 591 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ಅದ್ಭುತ ಸಾಧನೆಯಿಂದ ಅವರ ಕುಟುಂಬ, ಬಂಧುಗಳು, ಶಾಲೆ, ಶಿಕ್ಷಕರು, ಸ್ನೇಹಿತರಿಗೆ ಗೌರವ ತಂದಿದ್ದಾರೆ. ಐಐಟಿ-ಜೆಇಇ ತೇರ್ಗಡೆಯಾಗಿ ಎಂಜಿನಿಯರ್ ಆಗಬೇಕೆಂಬ ಕನಸು ಅವರದ್ದಾಗಿದೆ.

ಯುಪಿ ಬೋರ್ಡ್ ನ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.89.55ರಷ್ಟು ಉತ್ತೀರ್ಣರಾಗಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ. 93.40ರಷ್ಟು ಬಾಲಕಿಯರು ಮತ್ತು ಶೇ.86.05ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ಹೈಸ್ಕೂಲ್ ಮತ್ತು ಇಂಟರ್ಮೀಡಿಯೇಟ್ ಅಂತಿಮ ಪರೀಕ್ಷೆಗಳನ್ನು ಫೆಬ್ರವರಿ 22 ರಿಂದ ಮಾರ್ಚ್ 9 ರವರೆಗೆ UPMSP ನಿರ್ವಹಿಸಿತು. ಒಟ್ಟು 55,25,308 ಅಭ್ಯರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. 12 ನೇ ತರಗತಿ ವಿದ್ಯಾರ್ಥಿಗಳು 25,77,997 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು 29,47,311 ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ.


ಪ್ರಾಚಿ ನಿಗಮ್ ಬಳಿಕ ದೀಪಿಕಾ ಸೋಂಕರ್ 600ರಲ್ಲಿ 590 ಅಂಕಗಳೊಂದಿಗೆ ರಾಜ್ಯದಲ್ಲೇ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಎನ್ ಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತನ್ನ ಯಶಸ್ಸಿಗೆ ತಂದೆಯೇ ಕಾರಣ ಎಂದು ಹೇಳಿದ್ದಾಳೆ. ಮುಂದೆ ಆಕೆ ಐಐಟಿಯಲ್ಲಿ ಪ್ರವೇಶ ಪಡೆಯಲು ಬಯಸಿದ್ದು, ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ ನಲ್ಲಿ ಅಧ್ಯಯನ ಮುಂದುವರಿಸವ ಆಸೆ ವ್ಯಕ್ತಪಡಿಸಿದ್ದಾರೆ.

Exit mobile version