ಪ್ರಾಕೃತಿಕ ವಿಕೋಪದ (Natural disaster) ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಹೀಗಾಗಿ ಪರಿಸರ ಸಂರಕ್ಷಣೆಗೆ (Environmental protection) ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಲೇ ಬೇಕಾದ ಅನಿವಾರ್ಯತೆ ಈಗ ಎಲ್ಲರಿಗೂ ಇದೆ. ಪರಿಸರ ಸಂರಕ್ಷಣೆಗಾಗಿ ನಡೆಸುವ ಕಾರ್ಯಗಳನ್ನು ಬೆಂಬಲಿಸಲು ವಿಶ್ವದಾದ್ಯಂತ (world) ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು (Earth day 2024) ಆಚರಿಸಲಾಗುತ್ತದೆ.
1970ರಲ್ಲಿ ಅಮೆರಿಕ (US) ಕಾಲೇಜು ಕ್ಯಾಂಪಸ್‌ಗಳಲ್ಲಿ ಮೊದಲ ಬಾರಿಗೆ ವಿಶ್ವ ಭೂಮಿ ದಿನವನ್ನು ಆಚರಿಸಲಾಯಿತು. ವಿಶ್ವದ 192 ದೇಶಗಳಲ್ಲಿ ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್’ ಎಂಬ ಜಾಗತಿಕ ಥೀಮ್‌ನೊಂದಿಗೆ ಈ ಬಾರಿ ಭೂಮಿ ದಿನವನ್ನು ಸೋಮವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.
ಯಾರ ಕಲ್ಪನೆ?
ಜಾಗತಿಕವಾಗಿ ಗುರುತಿಸಲ್ಪಟ್ಟ ವಿಶ್ವ ಭೂಮಿ ದಿನವನ್ನು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಆಚರಿಸಲಾಗುತ್ತದೆ. ಯುಎಸ್ ನ ವಿಸ್ಕಾನ್ಸಿನ್‌ನ ಜೂನಿಯರ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಅವರು ಮೊದಲ ಬಾರಿಗೆ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜು ಕ್ಯಾಂಪಸ್‌ಗಳಲ್ಲಿ ಈ ದಿನವನ್ನು ಆಚರಿಸಲು ಈ ಮೂಲಕ ವಿದ್ಯಾರ್ಥಿಗಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ತಮ್ಮ ಕಲ್ಪನೆಯನ್ನು ಘೋಷಿಸಿದರು. ಇದರಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಏಪ್ರಿಲ್ 22 ಅನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!
ಯುನೈಟೆಡ್ ನೇಷನ್ಸ್ 2016 ರ ಏಪ್ರಿಲ್ 22 ಅನ್ನು ಪ್ಯಾರಿಸ್ ಒಪ್ಪಂದದ ದಿನವಾಗಿ ಘೋಷಿಸಿತ್ತು. ಈ ದಿನ ವಿಶ್ವದ 196 ರಾಷ್ಟ್ರಗಳ ನಾಯಕರು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಕಾನೂನುಬದ್ಧ ಒಪ್ಪಂದವನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡು ಸಹಿ ಮಾಡಿದರು.
ಈ ಒಪ್ಪಂದದ ಅಡಿಯಲ್ಲಿ ದೇಶಗಳು ಜಾಗತಿಕ ತಾಪಮಾನ ಏರಿಕೆಯನ್ನು 1.5 ° ಸೆಲ್ಸಿಯಸ್ ಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತವೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗಳು 2025ಕ್ಕಿಂತ ಮೊದಲು ಗರಿಷ್ಠ ಮಟ್ಟದಲ್ಲಿ ಮತ್ತು 2030 ರ ವೇಳೆಗೆ ಶೇ. 43ರಷ್ಟು ಕಡಿಮೆ ಮಾಡುವ ಯೋಜನೆಯನ್ನು ಹೊಂದಿದೆ.
ಭೂಮಿಯ ದಿನ ಹುಟ್ಟಿದ್ದು ಯಾವಾಗ?
ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಭಾರೀ ತೈಲ ಸೋರಿಕೆಯ ಕೆಲವು ತಿಂಗಳ ನಂತರ ಅಮೆರಿಕದಲ್ಲಿ ಭೂಮಿ ದಿನ ಹುಟ್ಟಿಕೊಂಡಿತು. ಅಮೆರಿಕದ ಸೆನೆಟರ್ ಗೇಲಾರ್ಡ್ ನೆಲ್ಸನ್ ಈ ಸಮಯದಲ್ಲಿ ವಾಯು ಮತ್ತು ನೀರಿನ ಮಾಲಿನ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಇದಕ್ಕಾಗಿ ಅವರು ಕಾರ್ಯಕರ್ತ ಡೆನಿಸ್ ಹೇಯ್ಸ್ ಅವರನ್ನು ನೇಮಿಸಿಕೊಂಡರು. ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸಲು ಏಪ್ರಿಲ್ 22 ಅನ್ನು ವಿಶ್ವ ಭೂಮಿ ದಿನವನ್ನಾಗಿ ಆಯ್ಕೆ ಮಾಡಿಕೊಂಡರು.
Earthday.org ವೆಬ್‌ಸೈಟ್‌ನ ಪ್ರಕಾರ ಹೇಯ್ಸ್ ಅವರು 85 ಮಂದಿಯನ್ನು ಒಗ್ಗೂಡಿಸಿ ವಿಶ್ವದಾದ್ಯಂತ ಭೂಮಿ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಉತ್ತೇಜನ ನೀಡಿದರು.
ಥೀಮ್ ಏನು?
ಭೂಮಿ ವರ್ಸಸ್ ಪ್ಲಾಸ್ಟಿಕ್ಸ್ ಎಂಬ ಸಂದೇಶದೊಂದಿಗೆ ಭೂಮಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಗ್ಗೂಡಬೇಕು ಎನ್ನುವ ಸಂದೇಶದೊಂದಿಗೆ ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಶೇ. 60ರಷ್ಟು ಕಡಿಮೆಯಾಗಬೇಕು ಎನ್ನುವ ಉದ್ದೇಶ ಇದು ಹೊಂದಿದೆ. 2040ರ ವೇಳೆಗೆ ಪ್ಲಾಸ್ಟಿಕ್‌ಗಳು ಮತ್ತು ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಭವಿಷ್ಯವನ್ನು ನಿರ್ಮಿಸುವುದು ಇದರ ಗುರಿಯಾಗಿದೆ.