Site icon Vistara News

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

International Cat Day

ನಾವು ಸಾಕುವ ಮುದ್ದಿನ ಪ್ರಾಣಿಗಳಲ್ಲಿ ಬೆಕ್ಕು (cat) ಕೂಡ ಒಂದಾಗಿದೆ. ವಿಶ್ವದಾದ್ಯಂತ ಇಂದು ಬೆಕ್ಕಿನ ದಿನವನ್ನು (International Cat Day) ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 8ರಂದು ಆಚರಿಸಲಾಗುವ ಈ ದಿನದಂದು ಮಾನವನ ಅತ್ಯಂತ ಹಳೆಯ ಮತ್ತು ಪ್ರೀತಿಯ ಪ್ರಾಣಿ ಸಹಚರರಲ್ಲಿ ಒಂದಾದ ಬೆಕ್ಕನ್ನು ಗೌರವಿಸಲಾಗುತ್ತದೆ.

ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಕೂಡ ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಪ್ರಾಚೀನ ಈಜಿಪ್ಟ್‌ನಲ್ಲಿ ಬೆಕ್ಕುಗಳನ್ನು ದೈವಿಕ ಜೀವಿಯಾಗಿ ಪೂಜಿಸಲಾಗುತ್ತಿತ್ತು. ಅವುಗಳು ತಮ್ಮ ಸ್ವಾತಂತ್ರ್ಯ, ಕುತೂಹಲ ಮತ್ತು ನಿರ್ಭೀತ ಮನೋಭಾವದಿಂದ ಎಲ್ಲರನ್ನೂ ಆಕರ್ಷಿಸುತ್ತವೆ. ಅವುಗಳ ಸೊಗಸಾದ ದೈಹಿಕ ಲಕ್ಷಣಗಳು ಮತ್ತು ಸಣ್ಣಪುಟ್ಟ ಗಾಯ, ಆರೋಗ್ಯ ಸಮಸ್ಯೆಗಳನ್ನು ಸ್ವಯಂ ಗುಣಪಡಿಸುವ ಸಾಮರ್ಥ್ಯವು ಅವುಗಳನ್ನು ವಿಶೇಷವನ್ನಾಗಿ ಮಾಡಿವೆ.

ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆಯ ಈ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.


ಬೆಕ್ಕುಗಳ ವಯಸ್ಸು ಎಷ್ಟು?

ಸಾಮಾನ್ಯವಾಗಿ ಬೆಕ್ಕುಗಳು ಮಾನವನ ವಯಸ್ಸಿಗೆ ಹೋಲಿಸಿದರೆ 116 ವರ್ಷಗಳ ಕಾಲ ಬದುಕುತ್ತವೆ. ಅವುಗಳ ಜೀವನವು ಆರು ಹಂತಗಳನ್ನು ಹೊಂದಿರುತ್ತದೆ. ಅದರಲ್ಲಿ ಆರು ತಿಂಗಳವರೆಗೆ ಅದು ಮಗುವಾಗಿರುತ್ತದೆ. ಬಳಿಕ 7 ತಿಂಗಳಿನಿಂದ 2 ವರ್ಷಗಳವರೆಗೆ ಜೂನಿಯರ್, 3ರಿಂದ 6 ವರ್ಷಗಳವರೆಗೆ ವಯಸ್ಕ, 7 ರಿಂದ 10 ವರ್ಷಗಳವರೆಗೆ ಪ್ರಬುದ್ಧ, 11ರಿಂದ 14 ವರ್ಷಗಳವರೆಗೆ ಹಿರಿಯ, 15 ರಿಂದ 25 ವರ್ಷಗಳವರೆಗೆ ಬಹು ಹಿರಿಯ ವಯಸ್ಕ ಆಗಿರುತ್ತದೆ.


ವಿಶೇಷ ಸಾಮರ್ಥ್ಯ

ಬೆಕ್ಕುಗಳು ಹೆಚ್ಚು ಪ್ರಭಾವಶಾಲಿ ಕಿವಿಗಳ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ತಮ್ಮ ಕಿವಿಗಳನ್ನು 180 ಡಿಗ್ರಿಗಳಷ್ಟು ತಿರುಗಿಸಬಲ್ಲವು! ಪ್ರತಿ ಕಿವಿಯಲ್ಲಿ 32 ಸ್ನಾಯುಗಳಿವೆ. ಮಾನವನಲ್ಲಿ ಕೇವಲ ಆರು ಕಿವಿ ಸ್ನಾಯುಗಳಿವೆ. ಅವುಗಳು ಮನುಷ್ಯರಂತೆ ಶಬ್ದಗಳ ಮೂಲವನ್ನು ನಿಖರವಾಗಿ ಗುರುತಿಸುತ್ತವೆ.

ಅತ್ಯುತ್ತಮ ದೃಷ್ಟಿಯ ಹೊರತಾಗಿ ಬೆಕ್ಕುಗಳು ಉತ್ತಮ ಗ್ರಹಿಕಾ ಸಾಮರ್ಥ್ಯ ಹೊಂದಿರುತ್ತವೆ. ಬೇಟೆಯು ಸಮೀಪಿಸಿದಾಗ ಅವುಗಳ ವಾಸನೆಯ ಪ್ರಜ್ಞೆ ಜಾಗೃತವಾಗುತ್ತದೆ. ಅವುಗಳ ವಾಸನೆಯ ಅಸಾಧಾರಣ ಪ್ರಜ್ಞೆಯಿಂದ 200 ವಿಭಿನ್ನ ಪರಿಮಳಗಳನ್ನು ನೆನಪಿಸಿಕೊಳ್ಳುತ್ತವೆ.


ಬೆಕ್ಕುಗಳು ಕಾಲ್ಬೆರಳುಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ಹೆಚ್ಚುವರಿ ಕಾಲ್ಬೆರಳುಗಳನ್ನು ಹೊಂದಿರುತ್ತವೆ. ಒಂದು ಬೆಕ್ಕಿನ ಮೇಲೆ ಅತಿ ಹೆಚ್ಚು ಕಾಲ್ಬೆರಳುಗಳ ದಾಖಲೆ 32 ಆಗಿದೆ.

ದಿನಚರಿ ಏನು?

ಸಾಕು ಬೆಕ್ಕುಗಳು ತಮ್ಮ ದಿನದಲ್ಲಿ ಶೇ. 70ರಷ್ಟು ಸಮಯವನ್ನು ನಿದ್ದೆಯಲ್ಲಿ ಕಳೆಯುತ್ತವೆ. ಶೇ. 15ರಷ್ಟು ಸಮಯವನ್ನು ಶೃಂಗಾರದಲ್ಲಿ ಕಳೆಯುತ್ತವೆ. ಮನೆಯಲ್ಲಿ ಬೇಟೆಯಾಡದೇ ಇದ್ದರೂ ಬೇಟೆಗಾಗಿ ತಮ್ಮನ್ನು ತಾವು ಸಜ್ಜುಗೊಳಿಸುತ್ತವೆ ಮತ್ತು ಶಕ್ತಿಯನ್ನು ಉಳಿಸುತ್ತದೆ. ವಯಸ್ಕ ಬೆಕ್ಕುಗಳು ದಿನಕ್ಕೆ 16- 20 ಗಂಟೆಗಳ ಕಾಲ ನಿದ್ರಿಸುತ್ತವೆ. ವಯಸ್ಸಾದ ಬೆಕ್ಕುಗಳು ಸುಮಾರು 24 ಗಂಟೆಗಳ ಕಾಲ ಮಲಗುವುದೂ ಉಂಟು!


ತಳಿಗಳು

ಬೆಕ್ಕುಗಳಲ್ಲಿ ಸೈಬೀರಿಯನ್, ರಾಗ್ಡಾಲ್, ಮೈನೆ ಕೂನ್ ಮತ್ತು ಬ್ರಿಟಿಷ್ ಶೋರ್ಥೈರ್‌ನಂತಹ ಪ್ರಮುಖ ತಳಿಗಳಿವೆ. ದೊಡ್ಡ ಗಂಡು ಬೆಕ್ಕುಗಳು ಸುಮಾರು 20 ಪೌಂಡ್ ತೂಗುತ್ತವೆ. ಈ ತಳಿಗಳು ತಮ್ಮ ದೊಡ್ಡ ಗಾತ್ರ ಮತ್ತು ಸ್ನೇಹಪರ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದೆ.


ಸಂವಹನ ಹೇಗೆ?

ಮಿಯಾಂವ್ ಎನ್ನುವುದು ಬೆಕ್ಕುಗಳಿಗೆ ಸಹಜ ಭಾಷೆಯಲ್ಲ. ಅವು ಮನುಷ್ಯರೊಂದಿಗೆ ಸಂವಹನ ನಡೆಸಲು ಇದನ್ನು ಅಭಿವೃದ್ಧಿಪಡಿಸಲಾಯಿತು. ಕಾಡಿನಲ್ಲಿ ವಯಸ್ಕ ಬೆಕ್ಕುಗಳು ವಾಸನೆ, ಮುಖದ ಅಭಿವ್ಯಕ್ತಿ, ದೇಹ ಭಾಷೆ ಮತ್ತು ಸ್ಪರ್ಶದಂತಹ ವಿವಿಧ ಮೌಖಿಕ ಸೂಚನೆಗಳೊಂದಿಗೆ ಸಂವಹನ ನಡೆಸುತ್ತವೆ. ಆದರೆ ಸಾಕು ಬೆಕ್ಕುಗಳು ತಮ್ಮ ಅಗತ್ಯಗಳನ್ನು ಮನುಷ್ಯರಿಗೆ ತಿಳಿಸಲು ಮಿಯಾಂವ್ ಶಬ್ದದ ಬಳಕೆ ಮಾಡುತ್ತವೆ.


ನಂಬಿಕೆ

ಅನೇಕ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಬಿಳಿ ಬೆಕ್ಕುಗಳು ಶುದ್ಧತೆ ಮತ್ತು ಸಂತೋಷವನ್ನು ಸಂಕೇತಿಸುತ್ತವೆ. ಬಿಳಿ ಬೆಕ್ಕಿನ ಕನಸು ಬಿದ್ದರೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ:International Tiger Day 2024: 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ. 95ರಷ್ಟು ಕುಸಿತ!

ಇದರ ಬಳಕೆ ಹೇಗೆ?

ಬೆಕ್ಕುಗಳನ್ನು ಸಂಚಾರ ಮತ್ತು ಸಂವಹನಕ್ಕೆ ಮಾರ್ಗದರ್ಶಿಯಾಗಿ ಬಳಸಲಾಗುತ್ತದೆ. ವಿಶೇಷ ಕೂದಲುಗಳಿರುವ ಬೆಕ್ಕುಗಳು ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಸಂದೇಶಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಬೆಕ್ಕಿನ ಮೀಸೆಯನ್ನು ಮುಂದಕ್ಕೆ ತೋರಿಸಿದಾಗ ಅದು ಆತ್ಮವಿಶ್ವಾಸ ಮತ್ತು ನಿರಾಳತೆಯ ಭಾವನೆಯನ್ನು ಸೂಚಿಸುತ್ತದೆ. ವ್ಯತಿರಿಕ್ತವಾಗಿ, ಅವುಗಳನ್ನು ಹಿಂದಕ್ಕೆ ಎಳೆದರೆ ಅದು ಹೆದರಿಕೆ ಅಥವಾ ಬೆದರಿಕೆಯನ್ನು ಅನುಭವಿಸುತ್ತಿದೆ ಎಂಬುದು ಅರ್ಥ.

ಬೆಕ್ಕುಗಳ ಗುಂಪನ್ನು “ಕ್ಲೋಡರ್” ಎಂದು ಕರೆಯಲಾಗುತ್ತದೆ ಮತ್ತು ಗಂಡು ಬೆಕ್ಕನ್ನು ಸಾಮಾನ್ಯವಾಗಿ “ಟಾಮ್” ಎಂದು ಕರೆಯಲಾಗುತ್ತದೆ. ಆದರೆ ಹೆಣ್ಣು ಬೆಕ್ಕನ್ನು ಸಾಮಾನ್ಯವಾಗಿ ʼರಾಣಿʼ ಎಂದು ಕರೆಯಲಾಗುತ್ತದೆ.

Exit mobile version