Site icon Vistara News

Most Expensive Insect: ಈ ಕೀಟ ನಿಮ್ಮ ಬಳಿ ಇದ್ದರೆ 75 ಲಕ್ಷ ರೂ. ಸಿಗಬಹುದು!

Most Expensive Insect

ಒಂದೇ ಒಂದು ಪುಟ್ಟ ಕೀಟದ ಬೆಲೆ (Most Expensive Insect) ಬರೋಬ್ಬರಿ 75 ಲಕ್ಷ ರೂ. ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಹೌದು ಇದು ವಿಶ್ವದ (world) ಅತ್ಯಂತ ಬೆಲೆಬಾಳುವ ಕೀಟಗಳಲ್ಲಿ ಒಂದು. ಇದನ್ನು ‘ಸ್ಟಾಗ್ ಬೀಟಲ್’ (stag beetle) ಅಥವಾ ಸಾರಂಗ ಜೀರುಂಡೆ ಎಂದು ಕರೆಯುತ್ತಾರೆ. ಈ ಕೀಟ ಇಷ್ಟು ದುಬಾರಿ ಯಾಕೆಂದರೆ ಅದರ ಕುರಿತಾದ ವಿಶೇಷ ನಂಬಿಕೆಯಿಂದ.

ಸಾರಂಗ ಜೀರುಂಡೆಯ ವಿಶೇಷ ಏನೆಂದರೆ ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾರಂಗ ಜೀರುಂಡೆಗಳು ತುಂಬಾ ದುಬಾರಿಯಾಗಿವೆ. ಸಾರಂಗ ಜೀರುಂಡೆಯನ್ನು ಹೊಂದಿದ್ದರೆ ಬಹುಬೇಗನೆ ಶ್ರೀಮಂತಿಕೆ ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದೇ ಕೆಲವರು ನಂಬುತ್ತಾರೆ.

ಸೈಂಟಿಫಿಕ್ ಡೇಟಾ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಈ ಕೀಟಗಳು ಅರಣ್ಯ ಪರಿಸರ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಸ್ಯಾಪ್ರೊಕ್ಸಿಲಿಕ್ ಸಂಯೋಜನೆಯನ್ನು ರೂಪಿಸುತ್ತವೆ. ಅವುಗಳ ವಿಸ್ತರಿಸಿದ ದವಡೆಗಳು ಪುರುಷ ಜಾತಿಯಲ್ಲಿ ಬಹುರೂಪತೆಗೆ ಹೆಸರುವಾಸಿಯಾಗಿದೆ.


ಎಲ್ಲಿ ಕಾಣಬಹುದು?

ಸಾರಂಗ ಜೀರುಂಡೆಗಳು ಶೀತ ತಾಪಮಾನದಿಂದ ದೂರವಿರುತ್ತವೆ. ಅವುಗಳು ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸ್ವಭಾವತಃ ಕಾಡುಪ್ರದೇಶಗಳಲ್ಲಿ ಕಾಣಸಿಗುತ್ತವೆ. ಆದರೆ ಅವುಗಳನ್ನು ಕೆಲವೊಂದು ಉದ್ಯಾನವನಗಳಲ್ಲಿ ಕಾಣಬಹುದು. ಸತ್ತ ಮರ, ಮುಳ್ಳುಗಿಡಗಳು ಮತ್ತು ಸಾಂಪ್ರದಾಯಿಕ ತೋಟಗಳು ಅವುಗಳ ಆಶ್ರಯತಾಣವಾಗಿರುತ್ತದೆ.

ಏನು ತಿನ್ನುತ್ತದೆ?

ಸಾರಂಗ ಜೀರುಂಡೆಗಳಿಗೆ ಮುಖ್ಯ ಆಹಾರ ಮೂಲವೆಂದರೆ ಸಿಹಿ ದ್ರವಗಳು. ಉದಾಹರಣೆಗೆ ಮರದ ರಸ ಮತ್ತು ಕೊಳೆಯುತ್ತಿರುವ ಹಣ್ಣಿನ ರಸ. ಅದರ ಪ್ರಾಥಮಿಕ ಶಕ್ತಿಯ ಮೂಲವೆಂದರೆ ಅದು ಲಾರ್ವಾಗಳಾಗಿದ್ದಾಗ ಸಂಗ್ರಹಿಸಿದ ಶಕ್ತಿಯೇ ಆಗಿರುತ್ತದೆ. ಸಾರಂಗ ಜೀರುಂಡೆಗಳು ಆರೋಗ್ಯಕರ ಸಸ್ಯಗಳಿಗೆ ಏನೂ ಮಾಡುವುದಿಲ್ಲ. ಯಾಕೆಂದರೆ ಅವು ಸತ್ತ ಮರವನ್ನು ಮಾತ್ರ ತಿನ್ನುತ್ತವೆ.


ಇದನ್ನೂ ಓದಿ: Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

ಆಯಸ್ಸು

ಲಂಡನ್‌ನಲ್ಲಿರುವ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ಈ ಕೀಟಗಳು ಸಾಮಾನ್ಯವಾಗಿ 2 ರಿಂದ 6 ಗ್ರಾಂ ತೂಕವಿರುತ್ತವೆ. ಸರಾಸರಿ 3 ರಿಂದ 7 ವರ್ಷಗಳವರೆಗೆ ಬದುಕುತ್ತವೆ. ಹೆಣ್ಣು 30- 50 ಮಿಮೀ ಉದ್ದವಿದ್ದರೆ, ಗಂಡು 35- 75 ಮಿಮೀ ಉದ್ದವಿರುತ್ತದೆ.

ಕೊಂಬನ್ನು ಹೋಲುವ ಗಂಡು ಸಾರಂಗ ಜೀರುಂಡೆಯ ವೈಶಿಷ್ಟ್ರ್ಯವೆಂದರೆ ಅದರ ದವಡೆಗಳು. ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಸಾರಂಗ ಜೀರುಂಡೆಗಳು ತಮ್ಮ ವಿಶಿಷ್ಟವಾದ ಕೊಂಬಿನಂತಹ ದವಡೆಗಳನ್ನು ಬಳಸಿಕೊಂಡು ಹೆಣ್ಣು ಸಂಗಾತಿಯಾಗುವ ಅವಕಾಶಕ್ಕಾಗಿ ಪರಸ್ಪರ ಸ್ಪರ್ಧಿಸುತ್ತವೆ.

Exit mobile version