Site icon Vistara News

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Wildlife

ಭೂಮಿ ಮೇಲೆ ಅಸಂಖ್ಯಾತ ಜೀವಿಗಳಿವೆ. ಕಣ್ಣಿಗೆ ಕಾಣದ ಜೀವಿಗಳಿಂದ (wildlife) ಹಿಡಿದು ಬೃಹತ್ ಗಾತ್ರದವರೆಗಿನ ಜೀವರಾಶಿಗಳು ತಮ್ಮದೇ ಆದ ಜೀವನಶೈಲಿ (Lifestyle), ಆಹಾರ ಶೈಲಿಯನ್ನು (food style) ಹೊಂದಿದೆ. ಭೂಮಿ (earth) ಮೇಲೆ ಇರುವ ಎಲ್ಲ ಜೀವರಾಶಿಗಳ ಪರಿಚಯ ಮಾನವನಿಗೆ ಇನ್ನೂ ಆಗಿಲ್ಲ. ಕೆಲವು ಜೀವಿಗಳ ಪರಿಚಯವಿದ್ದರೆ ಇನ್ನು ಕೆಲವು ನಮಗೆ ತಿಳಿದೇ ಇಲ್ಲ. ನಾವು ಗುರುತಿಸಬಲ್ಲ ಅನೇಕ ಜೀವಿಗಳ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ.

ಪ್ರತಿಯೊಂದು ಜೀವಿಗೂ ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು.

Wildlife


ಹುಟ್ಟಿದ ಕ್ಷಣದಿಂದ ತಾಯಿಗೇ ಅಪಾಯವನ್ನುಂಟು ಮಾಡುವ ಜೀವಿಯೆಂದರೆ ಚೇಳು (scorpions). ಅತ್ಯಂತ ಪ್ರಬಲ ವಿಷವನ್ನು ಹೊಂದಿರುವ ಚೇಳಿನ ಸಣ್ಣ ಪ್ರಮಾಣ ವಿಷವೂ ಮನುಷ್ಯನಿಗೆ ಅಪಾಯ ತರಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಚೇಳು ಕಡಿತವು ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ಚೇಳುಗಳು ಸಾಮಾನ್ಯವಾಗಿ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಕುಟುಕು ಮೂಲಕ ತಮ್ಮ ವಿಷವನ್ನು ಉಣಿಸುತ್ತದೆ. ಈ ವಿಷವು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಚೇಳು ತನ್ನ ಬೇಟೆಯನ್ನು ಜೀವಂತವಾಗಿ ಸೇವಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಣ್ಣು ಚೇಳುಗಳು ಒಂದೇ ಬಾರಿಗೆ ಸರಿಸುಮಾರು 100 ಮರಿಗಳಿಗೆ ಜನ್ಮ ನೀಡುತ್ತವೆ. ಅವುಗಳು ಸೇರಿ ಅಂತಿಮವಾಗಿ ತಾಯಿಯನ್ನೇ ತಿನ್ನುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ತಾಯಿ ಚೇಳು ತನ್ನ ಮರಿಗಳನ್ನು ಪೋಷಿಸುತ್ತದೆ ಮತ್ತು ರಕ್ಷಿಸುತ್ತದೆ.


ಹೆಣ್ಣು ಚೇಳು ಮರಿಗಳನ್ನು ಬೆನ್ನಿನ ಮೇಲೆ ಇರಿಸಿ ಸಾಕುತ್ತದೆ. ಕ್ರಮೇಣ ಅವುಗಳು ತಾಯಿಯನ್ನೇ ಸಂಪೂರ್ಣವಾಗಿ ತಿನ್ನುತ್ತವೆ. ಮರಿಗಳು ಜನನದ ಅನಂತರ ತಕ್ಷಣವೇ ತಾಯಿಯ ಬೆನ್ನಿಗೆ ಅಂಟಿಕೊಳ್ಳುತ್ತವೆ. ತಾಯಿ ಕ್ಷೀಣಿಸಿ ನಾಶವಾಗುವವರೆಗೆ ಅದರ ಮಾಂಸವನ್ನು ತಿನ್ನುತ್ತವೆ. ತಾಯಿಯ ಎಲ್ಲಾ ಮಾಂಸವನ್ನು ಕಬಳಿಸಿದ ಅನಂತರವೇ ಚೇಳುಗಳು ಬೆನ್ನಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಬದುಕಲು ಪ್ರಾರಂಭಿಸುತ್ತವೆ!

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!


ಚೇಳುಗಳು ಸಾಮಾನ್ಯವಾಗಿ ಕೀಟಗಳು ಮತ್ತು ಇತರ ಅಕಶೇರುಕಗಳನ್ನು ಬೇಟೆಯಾಗಿ ಗುರಿಯಾಗಿಸಿಕೊಳ್ಳುತ್ತವೆ. ಆದರೆ ಕೆಲವು ಪ್ರಭೇದಗಳು ಕಶೇರುಕಗಳನ್ನು ಬೇಟೆಯಾಡುತ್ತವೆ. ಅವುಗಳ ವಿಷಕಾರಿ ಕುಟುಕು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಣಯದ ಸಮಯದಲ್ಲಿ ಗಂಡು ಮತ್ತು ಹೆಣ್ಣು ಚೇಳುಗಳು ನೃತ್ಯದಲ್ಲಿ ತೊಡಗುತ್ತವೆ. ಎಲ್ಲಾ ಪ್ರಭೇದದ ಚೇಳುಗಳು ಮರಿಗಳಿಗೆ ಜನ್ಮ ನೀಡುತ್ತವೆ.

Exit mobile version