Site icon Vistara News

Fact Check : ಮುದ್ರಾ ಯೋಜನೆಯಡಿ 1 ಲಕ್ಷ ರೂ. ಸಾಲ ಕೊಡುವುದು ಸತ್ಯವೇ? ಇಲ್ಲಿದೆ ಫ್ಯಾಕ್ಟ್‌ಚೆಕ್‌

#image_title

ನವದೆಹಲಿ: ಸಣ್ಣ ಉದ್ಯಮಗಳಿಗೆ ಸಹಾಯವಾಗಲಿ ಎಂದು ಕೇಂದ್ರ ಸರ್ಕಾರವು ಅವರು ಮುದ್ರಾ ಯೋಜನೆ ಆರಂಭಿಸಿ, ಆರ್ಥಿಕ ಬೆಂಬಲ ನೀಡುತ್ತಿದ್ದಾರೆ. ಈ ಯೋಜನೆಯಲ್ಲಿ 1 ಲಕ್ಷ ರೂ. ಸಾಲವನ್ನೂ ನೀಡಲಾಗುತ್ತಿದೆ ಎಂದು ಇತ್ತೀಚೆಗೆ ಪೋಸ್ಟ್‌ ಒಂದು ಹರಿದಾಡಿದ್ದು, ಭಾರೀ ಸುದ್ದಿಯಾಗಿದೆ. ಈ ಪೋಸ್ಟಿನ ಅಸಲಿಯತ್ತು ಫ್ಯಾಕ್ಟ್‌ಚೆಕ್‌ನಿಂದ (Fact Check) ಹೊರಬಿದ್ದಿದೆ.

ಇದನ್ನೂ ಓದಿ: Fact Check | 6 ಯುಟ್ಯೂಬ್‌ ಚಾನೆಲ್‌ಗಳ ʼನಕಲಿʼ ಮುಖ ಫ್ಯಾಕ್ಟ್‌ಚೆಕ್‌ನಲ್ಲಿ ಅನಾವರಣ, ಇವುಗಳನ್ನು ನೀವೂ ನೋಡದಿರಿ

ಯಾರೋ ಒಬ್ಬರಿಗೆ ಕೇಂದ್ರ ಸರ್ಕಾರ ಆರ್ಥಿಕ ಸಚಿವಾಲಯದಿಂದ ಮುದ್ರಾ ಯೋಜನೆಯಲ್ಲಿ ಸಾಲ ಮಂಜೂರಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿ 1 ಲಕ್ಷ ರೂ. ಸಾಲವು 5% ಬಡ್ಡಿದರದಲ್ಲಿ ನೀಡಲಾಗಿರುವುದಾಗಿ ನಮೂದಿಸಲಾಗಿದೆ. ಅದಕ್ಕೆಂದು 1750 ರೂ. ಸಾಲ ಒಪ್ಪಂದದ ಶುಲ್ಕವಾಗಿ ಪಡೆದಿರುವುದಾಗಿಯೂ ತಿಳಿಸಲಾಗಿದೆ. 36 ತಿಂಗಳ ಅವಧಿಗೆಂದು ಸಾಲ ನೀಡಿರುವುದಾಗಿ ಅದರಲ್ಲಿದೆ.

ಈ ರೀತಿಯ ಪತ್ರದ ಬಗ್ಗೆ ಪಿಐಬಿ ಫ್ಯಾಕ್ಟ್‌ ಚೆಕ್‌ ಮಾಡಿದೆ. ಈ ಪತ್ರವು ಅಸಲಿಯಲ್ಲ, ನಕಲಿ ಎನ್ನುವ ವಿಚಾರ ಅದರಲ್ಲಿ ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಈ ರೀತಿಯ ಸುಳ್ಳು ಪತ್ರಗಳು, ಸೂಚನೆಗಳು ಹರಿದಾಡುತ್ತಿರುತ್ತವೆ.

Exit mobile version