Site icon Vistara News

Fact Check | ಕ್ಯಾಮೆರಾ ಲೆನ್ಸ್‌ ಮುಚ್ಚಳ ತೆಗೆಯದೆಯೇ ಚೀತಾ ಫೋಟೊ ಕ್ಲಿಕ್ಕಿಸಿದರೇ ನರೇಂದ್ರ ಮೋದಿ?

PHoto

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಷ್ಟು ಜನ ಎಷ್ಟಪಡುತ್ತಾರೋ, ಅಷ್ಟೇ ಜನ ವಿರೋಧಿಸುತ್ತಾರೆ. ಹಾಗೆಯೇ, ವ್ಯಂಗ್ಯ, ವಿಡಂಬನೆ, ಮೀಮ್‌, ಟ್ರೋಲ್‌ಗಳ ಮೂಲಕ ಕಾಲೆಳೆಯುತ್ತಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಕಳೆದ ವಾರ ಮಧ್ಯಪ್ರದೇಶದ ಕುನೊ ನ್ಯಾಷನಲ್‌ ಪಾರ್ಕ್‌ಗೆ ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ ಬಳಿಕ, ಚೀತಾಗಳ ಫೋಟೊವನ್ನು ಕ್ಯಾಮೆರಾದ ಲೆನ್ಸ್‌ ಮುಚ್ಚಳ ತೆಗೆಯದೆ ಕ್ಲಿಕ್ಕಿಸಿದ್ದಾರೆ (Fact Check) ಎಂಬ ಆರೋಪ ಕೇಳಿಬಂದಿದೆ.

ನರೇಂದ್ರ ಮೋದಿ ಅವರಿಗೆ ಕ್ಯಾಮೆರಾ ಹಿಡಿಯಲು ಸಹ ಬರುವುದಿಲ್ಲ. ಅವರಿಗೆ ಕ್ಯಾಮೆರಾ ನಿರ್ವಹಿಸುವುದು ಗೊತ್ತಿಲ್ಲ. ಕ್ಯಾಮೆರಾಗೆ ಪೋಸ್‌ ಕೊಡುವುದು ಗೊತ್ತೇ ಹೊರತು, ಕ್ಲಿಕ್ಕಿಸಲು ಬರುವುದಿಲ್ಲ. ಹಾಗಾಗಿಯೇ, ಕುನೊ ಅರಣ್ಯದಲ್ಲಿ ಕ್ಯಾಮೆರಾದ ಲೆನ್ಸ್‌ ಮುಚ್ಚಳ ತೆಗೆಯದೆಯೇ ಫೋಟೊ ಕ್ಲಿಕ್ಕಿಸಿದ್ದಾರೆ ಎಂದು ಜನ ಟೀಕಿಸಿದ್ದಾರೆ. ಹಾಗೆಯೇ, ಲೆನ್ಸ್‌ನ ಕ್ಯಾಪ್‌ ಮುಚ್ಚಿರುವ ಫೋಟೊ ಒಂದನ್ನು ಸಹ ಪೋಸ್ಟ್‌ ಮಾಡಿದ್ದಾರೆ.

ನಿಜಾಂಶ ಏನು?

ನರೇಂದ್ರ ಮೋದಿ ಅವರು ಕ್ಯಾಮೆರಾ ಹಿಡಿದು ಕ್ಲಿಕ್ಕಿಸುತ್ತಿರುವ ಚಿತ್ರಗಳು ಹಾಗೂ ಜಾಲತಾಣದಲ್ಲಿ ಎಡಿಟ್‌ ಮಾಡಲಾದ ಫೋಟೊಗಳನ್ನು ಗಮನಿಸಿದರೆ, ಇದು ತಿರುಚಿದ ಫೋಟೊ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಮೋದಿ ಅವರು ನಿಕಾನ್‌ ಕ್ಯಾಮೆರಾ ಹಿಡಿದು ಫೋಟೊ ಕ್ಲಿಕ್ಕಿಸಿದ್ದರು. ಆದರೆ, ಜಾಲತಾಣದಲ್ಲಿ ಕಿಡಿಗೇಡಿಗಳು ಎಡಿಟ್‌ ಮಾಡುವಾಗ ಕೆನಾನ್‌ ಕ್ಯಾಮೆರಾದ ಕ್ಯಾಪ್‌ಅನ್ನು ಮೋದಿ ಹಿಡಿದ ಕ್ಯಾಮೆರಾದ ಚಿತ್ರಕ್ಕೆ ಅಳವಡಿಸಿದ್ದಾರೆ. ವಿಡಿಯೊ, ಫೋಟೊಗಳಿಂದಲೂ ಮೋದಿ ಅವರು ಕ್ಯಾಮೆರಾ ಲೆನ್ಸ್‌ ಮುಚ್ಚಳ ತೆಗೆದೇ ಫೋಟೊ ಕ್ಲಿಕ್ಕಿಸಿದರು ಎಂಬುದು ತಿಳಿಯುತ್ತದೆ. ಆದರೆ, ಇದಾವುದನ್ನೂ ಪರಿಶೀಲಿಸದ, ಕಾಂಗ್ರೆಸ್‌ನ ಕೆಲವು ನಾಯಕರು ತಿರುಚಿದ ಫೋಟೊಗಳನ್ನೇ ಟ್ವೀಟ್‌ ಮಾಡಿ ಮುಜುಗರ ಅನುಭವಿಸಿದರು.

ಇದನ್ನೂ ಓದಿ | Cheetah In India | ಎಂಟು ಚೀತಾಗಳಲ್ಲಿ ಒಂದಕ್ಕೆ ನರೇಂದ್ರ ಮೋದಿ ಇಟ್ಟ ಹೆಸರೇನು?

Exit mobile version