ನವದೆಹಲಿ: ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು (NPS Cancellation) ಮಾಡಿ, ಹಳೇ ಪಿಂಚಣಿ ಯೋಜನೆ ಜಾರಿಗೆ (Implementation of old pension scheme) ಒತ್ತಾಯಿಸಿ ಭಾರತ ಬಂದ್ ನಡೆಸಲು ಅಖಿಲ ಭಾರತ ಶಿಕ್ಷಕರ ಫೆಡರೇಷನ್ (All India Teachers Federation) ತಯಾರಿ ನಡೆಸುತ್ತಿದೆ ಎಂದು ಎಐಪಿಟಿಎಫ್ ಸಂಘಟನೆಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನವದೆಹಲಿಯ ಸಿರಿಪೋರ್ಟ್ ಆಡಿಟೋರಿಯಂನಲ್ಲಿ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅ.5ರಂದು ನಡೆದ ಭಾರತ ಯಾತ್ರೆಯ (Bharath Yatra) ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಹಳೇ ಪಿಂಚಣಿ ಯೋಜನೆ ಜಾರಿ ನಮ್ಮ ಹಕ್ಕು, ಎನ್‌ಪಿಎಸ್‌ನಿಂದ ನೌಕರರ ನಿವೃತ್ತಿ ಬಾಳು ಗಂಭೀರವಾಗಲಿದೆ. ಅದನ್ನು ಹಲವು ರಾಜ್ಯಗಳಲ್ಲಿ ಈಗಾಗಲೇ ರದ್ದು ಮಾಡಲಾಗಿದೆ. ಇಡೀ ದೇಶಾದ್ಯಂತ ಈ ಯೋಜನೆ ರದ್ದಾಗಬೇಕು ಎಂಬುದು ನಮ್ಮ ಹೋರಾಟ ಎಂದು ಹೇಳಿದರು.
ಇದನ್ನೂ ಓದಿ: Cabinet Meeting : ಮೆದುಳಿನ ಆರೋಗ್ಯಕ್ಕಾಗಿ 3 ಜಿಲ್ಲೆಯಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಸ್ಥಾಪನೆಗೆ ಅಸ್ತು
ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ
ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಯಾತ್ರೆ 10,000 ಕಿ.ಮೀ ಸಂಚರಿಸಿ ನವದೆಹಲಿ ತಲುಪಿದೆ. ಅಸ್ಸಾಂನ ಗುವಾಹಟಿಯಿಂದ ನವದೆಹೆಲಿ, ಪಂಜಾಬ್‌ನ ವಾಗಾ ಬಾರ್ಡರ್‌ನಿಂದ ನವದೆಹಲಿ ಹಾಗೂ ಗುಜರಾತ್‌ನ ಸೋಮನಾಥಪುರದಿಂದ ನವ ದೆಹಲಿಯವರೆಗೆ ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ ಜರುಗಿದೆ. ಎಲ್ಲ ರಾಜ್ಯಗಳಲ್ಲಿಯೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತಗೊಂಡಿದೆ ಎಂದು ಬಸವರಾಜ ಗುರಿಕಾರ ಹೇಳಿದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಶಿಕ್ಷಕ ಸಂಘಟನೆಯ ಅಧ್ಯಕ್ಷ ಸುಸ್ಮನ್ ಹೂಪಡ್, ಕಾರ್ಯದರ್ಶಿ ರಾಬರ್ಟ್, ಉಪಾಧ್ಯಕ್ಷೆ ಇ. ಕರೇನಾ, ಮಹಾ ಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ, ಹರಿಗೋವಿಂದನ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ರಾಮಚಂದ್ರ ಬಾಸ್, ಸೀಮಾ ಮಾಥೂರ್, ರಮಾದೇವಿ, ರೇಲ್ವೆ ಯೂನಿಯನ್ ಅಧ್ಯಕ್ಷ ಶಿವಪಾಲ್ ಮಿಶ್ರಾ ರೋನಿ ರೋಶನ್ ಮಾತನಾಡಿದರು.
ಇದನ್ನೂ ಓದಿ: Karnataka Drought : ಕರ್ನಾಟಕದಲ್ಲಿ ಈ ವರ್ಷ ಎದುರಾಗಲಿದೆ ಆಹಾರ ಕೊರತೆ!
ಸಾವಿರಾರು ಶಿಕ್ಷಕರು ಭಾಗಿ
ಈ ಸಂದರ್ಭದಲ್ಲಿ ವಿ.ಎಫ್. ಚುಳಕಿ, ಮಂಜುನಾಥ ಜಂಗಲಿ, ವಿಜಯಪುರ ಜಿಲ್ಲೆಯ ನಾನಾ ತಾಲೂಕಿನ ಎನ್‌ಪಿಎಸ್ ಶಿಕ್ಷಕರು ಉಪಸ್ಥಿತರಿದ್ದರು. ದೇಶದ ನಾನಾ ಕಡೆಯಿಂದ ಆಗಮಿಸಿದ್ದ ಎನ್‌ಪಿಎಸ್‌ಗೆ ಒಳಪಡುವ ಸಾವಿರಾರು ಶಿಕ್ಷಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.