Site icon Vistara News

Govt Employees Strike : ಮುಷ್ಕರದ ಹೆಸರಿನಲ್ಲಿ ಮಹಾ ಮೋಸ; ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಖಂಡನೆ

Govt Employees Strike

Govt Employees Strike

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮುಷ್ಕರ ನಡೆಸುವ (Govt Employees Strike) ಹೆಸರಿನಲ್ಲಿ ಎಲ್ಲ ನೌಕರರನ್ನು ವಂಚಿಸಿದ್ದು, ಸರ್ಕಾರಿ ನೌಕರರ ಇತಿಹಾಸದಲ್ಲಿಯೇ ಇದೊಂದು ಮಹಾ ಮೋಸವಾಗಿ ದಾಖಲಾಗಲಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಈ ವರ್ತನೆಯನ್ನು ಖಂಡಿಸುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹೇಳಿದೆ.

ನೌಕರರ ಸಂಘದ ಅಧ್ಯಕ್ಷರ ಹುಸಿ ಭರವಸೆಯನ್ನು ನಂಬಿ, ಮುಷ್ಕರದಲ್ಲಿ ಭಾಗಿಯಾಗಿ ನಮ್ಮನ್ನೇ ನಂಬಿದ ವಿದ್ಯಾರ್ಥಿಗಳಿಗೆ ಈ ದಿನ ಪರೀಕ್ಷೆ ನಡೆಸದಿರುವುದಕ್ಕೆ ನೈತಿಕವಾಗಿ ಕ್ಷಮೆ ಕೋರುತ್ತೇವೆ ಎಂದು ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್‌., ಕಾರ್ಯಾಧ್ಯಕ್ಷ ವೆಂಕಟೇಶ್‌ ಎಸ್.ಆರ್‌., ಪ್ರಧಾನ ಕಾರ್ಯದರ್ಶಿ ಶಿವರಾವ್‌ ಬಿ. ಮಾಲೀಪಾಟೀಲ್‌ ಹಾಗೂ ಕೋಶಾಧ್ಯಕ್ಷ ಜಯಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಶೇ.40 ರಷ್ಟು ಮಧ್ಯಂತರ ಪರಿಹಾರ ಮತ್ತು ಎನ್‌ಪಿಎಸ್‌ ರದ್ದಾಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಹೀಗಾಗಿಯೇ ಸಂಘ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿತ್ತು. ಈಗ ಸರ್ಕಾರ ಕೇವಲ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡಿದರೂ ಮುಷ್ಕರ ಹಿಂದಕ್ಕೆ ಪಡೆಯುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಸಮಸ್ತ ಸರ್ಕಾರಿ ನೌಕರರ ನಂಬಿಕೆಗೆ ಬಗೆದ ದ್ರೋಹವಾಗಿದೆ ಎಂದು ಸಂಘ ಹೇಳಿದೆ.‌

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಎನ್‌ಪಿಎಸ್‌ ನೌಕರರಿಗೆ ಅನ್ಯಾಯವಾಗಿರುವ ಕುರಿತು ಪರಿಶೀಲನೆ ನಡೆಸಲು 2018ರಲ್ಲಿಯೇ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ಇನ್ನೂ ವರದಿ ನೀಡಿಲ್ಲ. ಹೀಗಿರುವಾಗ ಸರ್ಕಾರ ಮತ್ತೊಂದು ಸಮಿತಿ ರಚಿಸಿರುವುದು ಎನ್‌ಪಿಎಸ್‌ ನೌಕರರ ಕಣೋರೆಸುವ ತಂತ್ರವಾಗಿದೆ. ಇದನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನಂಬಬಾರದಿತ್ತು ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Govt. Employees protest : ಮುಷ್ಕರ ವಾಪಸ್‌ ಪಡೆದ ಬೆನ್ನಲ್ಲೇ ಸರ್ಕಾರಿ ನೌಕರರ ಸಂಘದಲ್ಲಿ ಭಿನ್ನಮತ ಸ್ಫೋಟ

Exit mobile version