Site icon Vistara News

Govt Employees Strike : ಯಶಸ್ಸು ಪಡೆದ ಮುಷ್ಕರ; ಷಡಾಕ್ಷರಿಗೆ ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ

facilitation by Retired Government Employees Association

Govt Employees Strike

ಬೆಂಗಳೂರು: 7ನೇ ವೇತನ ಆಯೋಗದ (7th pay commission) ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿ (Govt Employees Strike), ಮೊದಲ ಹಂತದಲ್ಲಿ ಯಶಸ್ಸು ಪಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್‌. ಷಡಾಕ್ಷರಿ ಅವರನ್ನು ನಿವೃತ್ತ ಸರ್ಕಾರಿ ನೌಕರರ ಸಂಘ ಅಭಿನಂದಿಸಿದೆ.

ಸಂಘದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿವೃತ್ತ ಸಂಘದ ಪದಾಧಿಕಾರಿಗಳು ಷಡಾಕ್ಷರಿಯವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ. ಎಲ್.ಬೈರಪ್ಪ, ಮುಷ್ಕರದ ಸಂದರ್ಭದಲ್ಲಿ ಷಡಾಕ್ಷರಿಯವರು ತೆಗೆದುಕೊಂಡ ತೀರ್ಮಾನಗಳು ಹೇಗೆ ಸರ್ಕಾರಿ ನೌಕರರ ಪರವಾಗಿದ್ದವು ಎಂಬುದನ್ನು ತಿಳಿಸಿದರು. ಸರ್ಕಾರಿನ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ಎನ್. ಶೇಷೇಗೌಡ, ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Govt Employees Strike facilitation by Retired Government Employees Association

ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯಂತೆ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮುಷ್ಕರ ಆರಂಭಿಸಿದ್ದರಿಂದ ರಾಜ್ಯ ಸರ್ಕಾರವು ಮಧ್ಯಂತರವಾಗಿ ವೇತನವನ್ನು ಶೇ.17 ರಷ್ಟು ಹೆಚ್ಚಿಸಿ, ಅಧಿಕೃತ ಆದೇಶ ಹೊರಡಿಸಿತ್ತು. ಎನ್‌ಪಿಎಸ್‌ ರದ್ದು ಪಡಿಸುವ ಕುರಿತು ಪರಿಶೀಲನೆ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಈ ಸಮಿತಿಗೆ ಸೂಚಿಸಿದೆ. ಹೀಗಾಗಿ ಸರ್ಕಾರಿ ನೌಕರರ ಸಂಘವು ಮುಷ್ಕರವನ್ನು ಹಿಂದಕ್ಕೆ ಪಡೆದುಕೊಂಡಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ʻʻನಾವು ಶೇ. 40ರಷ್ಟು ವೇತನ ಹೆಚ್ಚಿಸುವಂತೆ ಕೇಳಿದ್ದೆವು, ಸರ್ಕಾರ ಈಗ ಶೇ. 17 ರಷ್ಟು ಹೆಚ್ಚಿಸಿದೆ. ಇದರಿಂದ ತೃಪ್ತಿ ಆಗಿದೆಯೇ ಕೇಳಿದರೆ, ʻತೃಪ್ತಿ ಇಲ್ಲʼ. ಸಮಾಧಾನವಾಗಿದೆ. ಇನ್ನಷ್ಟು ಸಂತೃಪ್ತಿ ತರುವ ಕೆಲಸವನ್ನು ಮುಂದೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಮೊದಲ ಹಂತವಾಗಿ ನಾವು ಮುಷ್ಕರದಿಂದ ಹಿಂದೆ ಸರಿದಿದ್ದೇವೆ. ಮುಂದೆ ಅಗತ್ಯವೆನಿಸಿದರೆ ಮತ್ತೆ ಹೋರಾಟ ಮುಂದುವರಿಸುತ್ತೇವೆʼʼ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದ್ದರು.

ಇದನ್ನೂ ಓದಿ: Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

Exit mobile version